ಸಿಎಂ ಎಚ್‌ಡಿಕೆ ಸಮ್ಮಿಶ್ರ ಬಜೆಟ್;ರೈತ ಸಾಲ ಮನ್ನಾ:ಇಲ್ಲಿದೆ ಹೈಲೆಟ್ಸ್
Team Udayavani, Jul 5, 2018, 12:05 PM IST
ಬೆಂಗಳೂರು: ಮುಖ್ಯಮಂತ್ರಿ,ಹಣಕಾಸು ಖಾತೆ ಹೊಂದಿರುವ ಎಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಮಂಡಿಸಿದರು. ಪ್ರಮುಖವಾಗಿ ಷರತ್ತುಗಳೊಂದಿಗೆ ರೈತ ಸಾಲ ಮನ್ನಾ ಮಾಡಿದ್ದಾರೆ. ಬಜೆಟ್‌ನಲ್ಲಿ ಪ್ರಮುಖವಾಗಿ ಜೆಡಿಎಸ್ ಪ್ರಾಬಲ್ಯದ ಹಾಸನ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಿಗೆ ಭರಪೂರ ಯೋಜನೆಗಳನ್ನು , ಅನುದಾನವನ್ನು ಘೋಷಿಸಿದ್ದಾರೆ.
ಹೈಲೆಟ್ಸ್
2 ಲಕ್ಷದ 18 ಸಾವಿರದ 448 ಕೋಟಿ ರೂಪಾಯಿ ಬಜೆಟ್ ಗಾತ್ರ
31.12.2017 ರ ವರೆಗಿನ ಎಲ್ಲಾ ಸುಸ್ತಿ ಸಾಲ ಮನ್ನಾ
ಹಿಂದಿನ ಸರ್ಕಾರದ ಸಾಲಮನ್ನಾ ಬಾಕಿ ಪೂರ್ಣ ಪಾವತಿ
ಕಳೆದ 3 ವರ್ಷಗಳಲ್ಲಿ ಆದಾಯ ತೆರಿಗೆ ಕಟ್ಟಿರುವ ರೈತರಿಗೆ,ಸರ್ಕಾರಿ ಅಧಿಕಾರಿಗಳು, ಸಹಕಾರಿ ಕ್ಷೇತ್ರದ ಅಧಿಕಾರಿಗಳು ದೊಡ್ಡ ಭೂ ಹಿಡುವಳಿಯಿರುವರಿಗೆ ಸಾಲ ಮನ್ನಾ ಅನ್ವಯವಾಗುವುದಿಲ್ಲ.
ಸಾಲ ಮರು ಪಾವತಿಸಿದ ರೈತರಿಗೂ ಪ್ರಯೋಜನ. ಅವರ ಖಾತೆಗೆ 25,000 ರೂಪಾಯಿ ಹಾಕಲಿರುವ ಸರ್ಕಾರ.
ರೈತರ ಪ್ರತೀ ಕುಟುಂಬಕ್ಕೆ 2 ಲಕ್ಷ ರೂಪಾಯಿ ಸಾಲ ಮನ್ನಾ.
ಒಟ್ಟು 34,000 ಕೋಟಿ ರೂಪಾಯಿ ಸಾಲ ಮನ್ನಾ
ಹಳೆ ಸರ್ಕಾರ 4,165 ಕೋಟಿ ರೂ ಹಳೆ ಸಾಲ ಮನ್ನಾ ಪಾವತಿ ಬಾಕಿ ಉಳಿಸಿಕೊಂಡಿತ್ತು. ಅದನ್ನೂ ಪಾವತಿ ಮಾಡಲು ತೀರ್ಮಾನ
ವಿಕಲಚೇತನರು ಪಡೆದಿರುವ 4 ಕೋಟಿ ರೂಪಾಯಿ ಸಾಲ ಮನ್ನಾ
ಕೃಷಿ ವಲಯದಲ್ಲಿ 4.9 ರಷ್ಟು ಬೆಳವಣಿಗೆ ನಿರೀಕ್ಷೆ
ಆಂಧ್ರದ ಮಾದರಿಯಲ್ಲಿ ಶೂನ್ಯ ಬಂಡವಾಳ ಕೃಷಿ ಪದ್ಧತಿ – ರೈತರು ಮಾರುಕಟ್ಟೆಯಿಂದ ಪರಿಕರ ಬಳಸುವುದಿಲ್ಲ. 50 ಕೋಟಿ ರೂ
ಸಂಧ್ಯಾ ಸುರಕ್ಷಾ ಯೋಜನೆ ಮಾಸಿಕ ಮೊತ್ತ 600 ರಿಂದ 1000ಕ್ಕೆ ಏರಿಕೆ (65 ಮೀರಿದ ವೃದ್ಧರಿಗೆ ಅನ್ವಯ)
ಕೃಷಿಕರಿಗಾಗಿ ಉನ್ನತ ಸಮಿತಿ
ಇಸ್ರೆಲ್ ಮಾದರಿ ಕೃಷಿಗೆ 150 ಕೋಟಿ ರೂ ಮೀಸಲು .
ಜನಪ್ರತಿನಿಧಿಗಳು ,ಅಧಿಕಾರಿಗಳು ಆರ್ಥಿಕ ಶಿಸ್ತು, ಅನಗತ್ಯ ದುಂದು ವೆಚ್ಚಗಳಿಗೆ ಕಡಿವಾಣ
ದುಬಾರಿ ;
ಮದ್ಯದ ಮೇಲಿನ ತೆರಿಗೆ 4 % ಏರಿಕೆ
ಡಿಸೇಲ್ ಮೇಲಿನ ಸೆಸ್ ಹೆಚ್ಚಳ -19 % ಸೆಸ್ 21 % ಗೆ ಏರಿಕೆ
ಪೆಟ್ರೋಲ್ ದುಬಾರಿ -ಸೆಸ್ 30% ರಿಂದ 32 % ಹೆಚ್ಚಳ
ವಿದ್ಯುತ್ ಯೂನಿಟ್‌ಗೆ 20 ಪೈಸೆ ಹೆಚ್ಚಳ
ಹಿಂದಿನ ಸರ್ಕಾರದ ಅನ್ನಾಭಾಗ್ಯ ಸೇರಿದಂತೆ ಎಲ್ಲಾ ಯೋಜನೆಗಳು ಮುಂದುವರಿಕೆ
ತೆಂಗು ಬೆಳೆಗಾರರ ಹಿತರಕ್ಷಣೆಗೆ 190 ಕೋಟಿ ರೂಪಾಯಿ
ರಾಮನಗರದಲ್ಲಿ ಚಲನಚಿತ್ರ ವಿವಿ -30 ಕೋಟಿ
ಹಾಸನ ಹಾಲು ಒಕ್ಕೂಟಕ್ಕೆ 50 ಕೋಟಿ ರೂ
ಬೆಳ್ಳಂದೂರು ಕೆರೆ ಅಭಿವೃದ್ಧಿಗೆ 50 ಕೋಟಿ ರೂ
ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು
247 ಇಂದಿರಾ ಕ್ಯಾಂಟೀನ್‌ಗಳ ಸ್ಥಾಪನೆ
ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ- ಪ್ರಾಥಮಿಕ ಹಂತದಲ್ಲಿ 1000 ಶಾಲೆಗಳಲ್ಲಿ ಯೋಜನೆ ಜಾರಿ. ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಬಯೋ ಮೆಟ್ರಿಕ್ಸ್ 5 ಕೋಟಿ ರೂ.
ಸರ್ಕಾರಿ ಶಾಲೆಗಳ ವಿಲೀನ
ಬೆಂಗಳೂರಿನ 6 ಕಡೆ ಎಲಿವೇಟೆಡ್ ಕಾರಿಡಾರ್
ಧಾರ್ಮಿಕ
ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 25 ಕೋಟಿ ರೂಪಾಯಿ ಅನುದಾನ
ಭಗೀರಥ, ಮಾದಾರ , ಭೋವಿ ಪೀಠ , ಕಾಗಿನೆಲೆ, ವಾಲ್ಮೀಕಿ , ದೇವಾಂಗ, ಕಂಬಾರ , ಹಡಪದ ಅಪ್ಪಣ್ಣ ಸೇರಿದಂತೆ ಹಲವು ಪೀಠಗಳಿಗೆ 25 ಕೋಟಿ ರೂ ಅನುದಾನ
ಇಳಿಕೆ
ಅನ್ನಭಾಗ್ಯ ಅಕ್ಕಿ ಒಬ್ಬರಿಗೆ 7 ಕೆ.ಜಿ ಯಿಂದ 5 ಕೆ.ಜಿಗೆ ಇಳಿಕೆ
ರಿಯಾರಿತಿ ದರದಲ್ಲಿ ಅರ್ಧ ಕೆ.ಜಿ ತೊಗರಿಬೇಳೆ,1 ಕೆ.ಜಿ ಅಯೋಡಿನ್ ಉಪ್ಪು,1 ಕೆ.ಜಿ ತಾಳೆ ಎಣ್ಣೆ , 1 ಕೆ.ಜಿ ಸಕ್ಕರೆ.
ಇಂಧನ ಇಲಾಖೆ -14, 123 ಕೋಟಿ ರೂ ಮೀಸಲು
ಗ್ರಾಮೀಣಾಭಿವೃದ್ಧಿ -14,449 ಕೋಟಿ ರೂ ಮೀಸಲು
ನಗರಾಭಿವೃದ್ಧಿ -17,727ಕೋಟಿ ರೂ ಮೀಸಲು
ಆಹಾರ ಮತ್ತು ನಾಗರಿಕ ಸರಬರಾಜು -3,866 ಕೋಟಿ ರೂ ಮೀಸಲು
ಶಿಕ್ಷಣ 26,581ಕೋಟಿ ರೂ ಮೀಸಲು
ಜಲಸಂಪನ್ಮೂಲ -18,142 ಕೋಟಿ ರೂ ಮೀಸಲು
ಸಮಾಜ ಕಲ್ಯಾಣ -11,788 ಕೋಟಿ ರೂ ಮೀಸಲು
ಲೋಕೋಪಯೋಗಿ ಇಲಾಖೆ -10,200 ಕೋಟಿ ರೂ
ಒಳನಾಡ ಸಾರಿಗೆ 7,993 ಕೋಟಿ ರೂ
ಕೃಷಿಗೆ 7,642 ಕೋಟಿ ರೂ ಮೀಸಲು
ಕಂದಾಯ ಇಲಾಖೆ – 7,180 ಕೋಟಿ ರೂ ಮೀಸಲು
ಮಹಿಳಾ ಮತ್ತು ಮಕ್ಕಳ ಕಲ್ಯಾಣ – 5,725 ಕೋಟಿ ರೂ ಮೀಸಲು
ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ 9,317 ಕೋಟಿ ರೂ ಮೀಸಲು
ವಸತಿ -3,942 ಕೋಟಿ ರೂ ಮೀಸಲು
ಇತರೆ ಇಲಾಖೆಗಳಿಗೆ 82, 196 ಕೋಟಿ ಅನುದಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
MUST WATCH
ಹೊಸ ಸೇರ್ಪಡೆ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.