ಜೆಡಿಎಸ್ ಸೇರುತ್ತೇನೆ ಎಂದ ಸಿ.ಎಂ. ಇಬ್ರಾಹಿಂ
ಬಿಜಾಪುರದಿಂದ ಅಲಿಂಗ ಸಮಾವೇಶ
Team Udayavani, Feb 6, 2022, 7:50 AM IST
ಬೆಂಗಳೂರು:ಕಾಂಗ್ರೆಸ್ ತೊರೆಯಲು ನಿರ್ಧರಿಸಿರುವ ಕೇಂದ್ರದ ಮಾಜಿ ಸಚಿವ ಜೆಡಿಎಸ್ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ.
ಸುದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಸೇರಲು ನಿರ್ಧರಿಸಿದ್ದು ದಿನಾಂಕ ಇನ್ನೂ ತೀರ್ಮಾನ ಮಾಡಿಲ್ಲ . ಈಗಾಗಲೇ ಮೈಸೂರು, ಬೆಂಗಳೂರಿನಲ್ಲಿ ಮುಖಂಡರ ಸಭೆ ನಡೆಸಿದ್ದೇನೆ. ಹುಬ್ಬಳ್ಳಿಯೂ ಸಭೆ ನಡೆಸಲಿದ್ದೇನೆ. ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಸೇರಲಿದ್ದೇನೆ ಎಂದು ಹೇಳಿದರು.
ಸಮಾಜವಾದಿ ಪಕ್ಷದಿಂದಲೂ ಆಹ್ವಾನ ಇತ್ತು. ಆದರೆ, ಮುಖಂಡರ ಜತೆ ಚರ್ಚಿಸಿದಾಗ ಬಹುತೇಕರು ಜೆಡಿಎಸ್ ಬಗೆ ಹೆಚ್ಚು ಒಲವು ವ್ಯಕ್ತವಾಯಿತು. ಹೀಗಾಗಿ, ಜೆಡಿಎಸ್ ಸೇರ್ಪಡೆ ಗೆ ಮಂದಾಗಿದ್ದೇನೆ ಎಂದು ತಿಳಿಸಿದರು.
ಅಲ್ಪಸಂಖ್ಯಾತ, ಲಿಂಗಾಯಿತ ಹಾಗೂ ಗೌಡರನ್ನು ಒಂದಾಗಿಸಬೇಕು. ಮುಂದುವರಿದವರು ದಲಿತರು, ಹಿಂದುಳಿದವರನ್ನು ಅಪ್ಪಿಕೊಳ್ಳಬೇಕು. ಇದು ಸಾಮಾಜಿಕ ಚಳುವಳಿ. ಬಿಜಾಪುರದಿಂದ ಸಮಾವೇಶ ಆರಂಭಿಸಲಾಗುವುದು. ಸ್ವಾಮಿಜಿಗಳೇ ಅದನ್ನು ಮುಂದುವರಿಸಿಕೊಂಡು ಹೋಗುತ್ತಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಅಹಿಂದ ಅಲ್ಲೇ ಬಿಟ್ಟಿದ್ದಾರೆ. ನಾವು ನಾವು ಅಲಿಂಗ ಚಳುವಳಿ ಮಾಡುತ್ತಿದ್ದೇವೆ. ಯಡಿಯೂರಪ್ಪ ಜೊತೆಯೂ ಮಾತನಾಡಿದ್ದೇನೆ.ಯಡಿಯೂರಪ್ಪ ಅವರ ಶಕ್ತಿ ಬಿಜೆಪಿಯಲ್ಲಿ ದಿನೇ ದಿನೇ ಕ್ಷೀಣ ಆಗುತ್ತಿದೆ. ಅವರು ಧೈರ್ಯ ಮಾಡಬೇಕು. ಹರಹರ ಮಹಾದೇವ ಅಂತಾ ಹೊರಗೆ ಬರಬೇಕು ಎಂದು ತಿಳಿಸಿದರು.
ಮತಾಂತರ ನಿಷೇಧ ಕಾಯ್ದೆತರುತ್ತಿರುವ ಹಿನ್ನೆಲೆಯಲ್ಲಿ ಎಂಎಲ್ ಸಿ ಸ್ಥಾನಕ್ಕೆ ಇನ್ನೂ ರಾಜೀನಾಮೆ ಕೊಟ್ಟಿಲ್ಲ. ಹಿಂದೆ ಕಾಯ್ದೆಗೆ ವಿರೋಧಿಸಿದ್ದೆ ಎಂದು ತಿಳಿಸಿದರು.
ನಮ್ಮ ಹತ್ರ ಬರ್ತಾರೆ
ಇನ್ನೊಂದು ವರ್ಷದಲ್ಲಿ ಕಾಂಗ್ರೆಸ್‌ನವರು ನಮ್ಮ ಬಳಿಯೇ ಬರುತ್ತಾರೆ. ಸಹಾಯಕ್ಕಾಗಿ, ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಎಂದು ಹಣೆಯಲ್ಲಿ ಬರೆದಿದ್ದರೆ ತಡೆಯಲು ಯಾರು ಎಂದರು.
ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ಡ್ಯಾಮ್‌ಗೆ ಡ್ಯಾಮೇಜ್ ಮಾಡಲು ಹೋಗಲ್ಲ. ಸೋರಿಕೆ ಇದ್ದರೆ ಬಕೆಟ್ ಹಿಡಿದು ತುಂಬಿಸಿಕೊಳ್ಳುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು.
ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಸಂತೋಷವಾಗಿಲ್ಲ. ಅವರ ಪಕ್ಕದಲ್ಲಿ ಕುಳಿತಿದ್ದ ಪಟ್ಟಣ್‌ಗೆ ನೋಟಿಸ್ ಕೊಟ್ಟಿದ್ದಾರೆ. ರಾಹುಲ್ ಗಾಂಧಿಗೆ ಇಲ್ಲಿ ನ ನಾಯಕರ ಬಗ್ಗೆ ಏನೂ ಗೊತ್ತಿಲ್ಲ. ದಿನೇಶ್ ಗುಂಡೂರಾವ್ ಪಿಸಿಸಿ ಅಧ್ಯಕ್ಷರಾಗುವ ಮುನ್ನ ಅವರು ಯಾರು ಅಂತಾ ರಾಹುಲ್ ನನ್ನನ್ನು ಕೇಳಿದ್ದರು ಎಂದರು.
ಸತೀಶ್ ಜಾರಕಿಹೊಳಿಗೆ ಕಾಂಗ್ರೆಸ್ ಗೆ ಬಂದಾಗ ಟಿಕೆಟ್ ಕೊಟ್ಟಿರಲಿಲ್ಲ. ನಾನು ಹೋರಾಟ ಮಾಡಿ ಮಲ್ಲಿಕಾರ್ಜುನ ಖರ್ಗೆಯಿಂದ ಬಿ.ಫಾರಂ ಕೊಡಿಸಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.