ಫ್ಯಾಮಿಲಿ ಬ್ಯುಸಿನೆಸ್ ಗಾಗಿ ಸಿಎಂ ಹುದ್ದೆ ಮೀಸಲಿಟ್ಟ HDK! ಬಿಜೆಪಿ
Team Udayavani, Mar 11, 2019, 11:50 AM IST
ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಭಾರತೀಯ ಜನತಾ ಪಕ್ಷ ತನ್ನ ಟ್ವೀಟರ್ ಖಾತೆಯಲ್ಲಿ ಸೋಮವಾರ ಮತ್ತೆ ಕಾಲೆಳೆದಿದ್ದು, ಕುಮಾರಸ್ವಾಮಿ ಕುಟುಂಬದ ವ್ಯವಹಾರ ನಡೆಸಲು ಸಿಎಂ ಹುದ್ದೆಯನ್ನು ಮೀಸಲಿಟ್ಟಿರುವುದಾಗಿ ಆರೋಪಿಸಿದೆ.
ಬಿಜೆಪಿ ಕರ್ನಾಟಕ ಟ್ವೀಟರ್ ಪೇಜ್ ನಲ್ಲಿ, ಕುಮಾರಸ್ವಾಮಿ ತಮ್ಮ ಅಧಿಕಾರಾವಧಿಯ ಮೊದಲ 1ಮತ್ತು 2ನೇ ತಿಂಗಳು ಸರ್ಕಾರ ಹೇಗೆ ರಚಿಸುವುದು ಎಂಬ ಬಗ್ಗೆ ಓಡಾಟ, 3 ಮತ್ತು 4ನೇ ತಿಂಗಳಲ್ಲಿ ಪತ್ನಿಯನ್ನು ಚುನಾವಣೆಯಲ್ಲಿ ಗೆಲ್ಲಿಸಲು ನೆರವು, 5 ಮತ್ತು 6ನೇ ತಿಂಗಳು ಮಗ ನಿಖಿಲ್ ನ ಸಿನಿಮಾ ಪ್ರಚಾರ ಹೇಗೆ ಮಾಡುವುದೆಂದು ಓಡಾಟ, ಇದೀಗ 7 ಮತ್ತು 8ನೇ ತಿಂಗಳಿನಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಮಗನನ್ನು ಹೇಗೆ ಗೆಲ್ಲಿಸೋದು ಎಂಬ ತಂತ್ರಗಾರಿಕೆ ನಡೆಸುತ್ತಿರುವುದು.
CM @hd_kumaraswamy in last 8 months
1st 2 Months – How to form govt
3rd & 4th Month – How to help wife win elections
5th & 6th Month – How to promote Son’s movie
7th & 8th Month – How to ensure Son win Mandya seat in MP electionCM seat is catering the needs of family business.
— BJP Karnataka (@BJP4Karnataka) March 11, 2019
ಹೀಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ತನ್ನ ಕುಟುಂಬದ ಉದ್ಯಮ, ಕುಟುಂಬದವರ ಹಿತ ರಕ್ಷಣೆ ಮಾಡುವಲ್ಲಿ ಶ್ರಮವಹಿಸಿದ್ದು ಬಿಟ್ಟರೆ ರಾಜ್ಯದ ಅಭಿವೃದ್ಧಿ ಬಗ್ಗೆ ಗಮನ ಕೊಟ್ಟಿಲ್ಲ ಎಂಬುದಾಗಿ ಬಿಜೆಪಿ ಪರೋಕ್ಷವಾಗಿ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.