CM Siddaramaiah ಮಾಸಾಂತ್ಯಕ್ಕೆ ದಿಲ್ಲಿಗೆ : ಕುತೂಹಲ
ಕಾಂಗ್ರೆಸ್‌ನಲ್ಲಿ ರಾಜಕೀಯ ಲೆಕ್ಕಾಚಾರಗಳೂ ಬಿರುಸುಗೊಂಡಿವೆ
Team Udayavani, Oct 5, 2024, 6:35 AM IST
ಬೆಂಗಳೂರು: ಮುಡಾ ಪ್ರಕರಣದ ಅನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆನ್ನಿಗೆ ಎಲ್ಲರೂ ಇದ್ದೇವೆ ಎಂದು ಕಾಂಗ್ರೆಸ್ ನಾಯಕರು ಬಾಯಿ ತುಂಬ ಹೇಳುತ್ತಿದ್ದರೂ ತೆರೆಮರೆಯ ಕಸರತ್ತುಗಳು ಸಾಕಷ್ಟು ನಡೆಯುತ್ತಿದ್ದು ಇದೆಲ್ಲದರ ಮಧ್ಯೆ ಅ. 28 ಹಾಗೂ 29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸದಿಲ್ಲಿಗೆ ತೆರಳಲಿದ್ದಾರೆ.
ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದ ಗೃಹ ಸಚಿವ ಡಾ| ಜಿ. ಪರಮೇಶ್ವರ್, ಅದಾದ ಕೆಲವೇ ದಿನದಲ್ಲಿ ಸಚಿವ ಡಾ| ಎಚ್.ಸಿ. ಮಹದೇವಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲೂ ಭಾಗಿಯಾಗಿದ್ದರು. ಈ ಸಭೆಯಲ್ಲಿದ್ದ ಸಚಿವ ಸತೀಶ್ ಜಾರಕಿಹೊಳಿ ಗುರುವಾರ ದಿಢೀರನೇ ಹೊಸದಿಲ್ಲಿಗೆ ಭೇಟಿ ನೀಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಭೆಯ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಹಗರಣ ದಿನೇ ದಿನೇ ತಿರುವುಗಳನ್ನು ಪಡೆ ಯುತ್ತಿದ್ದು ಕಾಂಗ್ರೆಸ್‌ನಲ್ಲಿ ರಾಜಕೀಯ ಲೆಕ್ಕಾಚಾರಗಳೂ ಬಿರುಸುಗೊಂಡಿವೆ.
ಸಿಎಂ ಸ್ಥಾನಕ್ಕೆ ಸಿದ್ದು ರಾಜೀನಾಮೆ ನೀಡುವುದು ಒಳ್ಳೆಯದು ಎಂದು ಮಾಜಿ ಸ್ಪೀಕರ್ ಕೋಳಿವಾಡ ಹೇಳಿದ್ದರೆ, ಡಿ.ಕೆ.ಶಿ. ಅವರು ಸಿಎಂ ಆಗುತ್ತಾರೆ ಎಂದು ಶಾಸಕ ಬಸವರಾಜ್ ಶಿವಗಂಗಾ ಪುನರುಚ್ಚರಿಸಿದ್ದಾರೆ.
ಅಲ್ಲಲ್ಲೇ ಸಚಿವರ ರಹಸ್ಯ ಸಭೆಗಳ ಸರಣಿ ಮುಂದುವರಿದಿದ್ದು, ಜತೆಗೆ ಹಿಂದುಳಿದ ವರ್ಗಗಳ ಶಾಸಕರು, ಸಚಿವರೂ ಸಭೆ ಸೇರಿ ಸಿದ್ದರಾಮಯ್ಯ ಪರ ಚರ್ಚೆಗಳನ್ನು ಮಾಡಿದ್ದಾರೆ. ಹೈಕಮಾಂಡ್ ಭೇಟಿ ಮಾಡಿ ಸಿದ್ದು ಅವರ ಪರ ವಕಾಲತ್ತು ಹಾಕಲೂ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಪೈಕಿ ಕೆಲ ಸಭೆಗಳು ಸಿದ್ದರಾಮಯ್ಯರ ಆಣತಿಯಂತೆಯೇ ನಡೆದಿದ್ದರೆ, ಸಿದ್ದರಾಮಯ್ಯರ ಗಮನಕ್ಕೆ ಬಾರದೆಯೂ ಕೆಲ ಸಭೆಗಳು ನಡೆದಿವೆ. ಒಟ್ಟಾರೆ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹೈಕಮಾಂಡ್‌ಗೆ ರಾಜ್ಯ ರಾಜಕಾರಣದ ಒಂದಷ್ಟು ಮಾಹಿತಿಗಳ ರವಾನೆಯಂತೂ ಆಗಿದೆ.
ಕೆಎಂಎಫ್ ಕಾರ್ಯಕ್ರಮದಲ್ಲಿ ಭಾಗಿ
ಇದೀಗ ಸಿದ್ದರಾಮಯ್ಯ ಅವರೇ ಹೈಕಮಾಂಡ್ ಭೇಟಿಗೆ ಸೂಕ್ತ ಸಮಯ ಕಾಯುತ್ತಿದ್ದು ಅ. 28ರಂದು ದಿಲ್ಲಿಯಲ್ಲಿ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್)ದ ಕಾರ್ಯಕ್ರಮ ಇರುವುದರಿಂದ ಅದರಲ್ಲಿ ಭಾಗಿಯಾಗುವ ಸಾಧ್ಯತೆಗಳು ಹೆಚ್ಚಿವೆ. ದಿಲ್ಲಿಯಲ್ಲಿ 40ಕ್ಕೂ ಹೆಚ್ಚು ಸರಬರಾಜುದಾರರನ್ನು ಹೊಂದಿರುವ ಕೆಎಂಎಫ್ ತನ್ನ ವಹಿವಾಟನ್ನು ವಿಸ್ತರಿಸುತ್ತಿದ್ದು ಈ ಕಾರ್ಯಕ್ಕೆ ಸಿದ್ದರಾಮಯ್ಯ ಅವರಿಂದ ಚಾಲನೆ ಕೊಡಿಸಲು ತಯಾರಿ ಮಾಡಿ ಕೊಂಡಿದೆ. ಇದೇ ಸಕಾಲ ಎಂದು ಭಾವಿಸಿರುವ ಸಿಎಂ, ದಿಲ್ಲಿ ಪ್ರವಾಸ ಕೈಗೊಳ್ಳಲಿದ್ದು ಅ. 29ರಂದು ಹೈಕಮಾಂಡ್ ಭೇಟಿಗೂ ಚಿಂತನೆ ನಡೆಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.