ಕೋವಿಡ್‌ ಪ್ರಕರಣಗಳ ಹೆಚ್ಚಳಕ್ಕೆ ಸಿಎಂ ಆತಂಕ

Team Udayavani, Apr 18, 2020, 11:05 AM IST

ಕೋವಿಡ್‌ ಪ್ರಕರಣಗಳ ಹೆಚ್ಚಳಕ್ಕೆ ಸಿಎಂ ಆತಂಕ

ಬೆಂಗಳೂರು: ರಾಜ್ಯದಲ್ಲಿ ಕಳೆದ 3 ದಿನಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಳವಾಗಿರುವುದಕ್ಕೆ ಆತಂಕ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತಪಾಸಣೆ, ಚಿಕಿತ್ಸೆ ಕ್ರಮಕ್ಕೆ ಒತ್ತು ನೀಡಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೋವಿಡ್ -19 ಸೋಂಕು ಪ್ರಕರಣಗಳು ಪತ್ತೆಯಾಗದಿರುವ ಜಿಲ್ಲೆಗಳಲ್ಲೂ ಬೇರೆ ಬೇರೆ ಕಾಯಿಲೆಗಳ ಚಿಕಿತ್ಸೆಗೆ ಬರುವವರನ್ನು ಕೋವಿಡ್ -19 ಸೋಂಕುಅನುಮಾನ ಇದ್ದರೆ ತಪಾಸಣೆ ನಡೆಸುವಂತೆ ನಿರ್ದೇಶನ ನೀಡಿದ್ದಾರೆ. ರೋಗ ಲಕ್ಷಣ ಕಂಡು ಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡ ಬೇಡಿ ಎಂದು ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ. ಕೋವಿಡ್‌ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಹಾಗೂ ತಜ್ಞ ವೈದ್ಯರ ಜೊತೆ ಸಮಾಲೋಚನೆ ನಡೆಸಿದ ಅವರು ತುರ್ತು ಕ್ರಮಗಳ ಬಗ್ಗೆ ಸೂಚನೆ ನೀಡಿದರು.

ಸಭೆಯ ಮುಖ್ಯಾಂಶಗಳು
– ಪ್ರಕರಣಗಳು ಪ್ರಾರಂಭದಲ್ಲಿಯೇ ವರದಿಯಾದಲ್ಲಿ ಚಿಕಿತ್ಸೆ ಹಾಗೂ ಜೀವ ಉಳಿಸುವ ನಿಟ್ಟಿನಲ್ಲಿ ಸಹಕಾರಿಯಾಗುವುದು. ಕೋವಿಡ್ -19 ಲಕ್ಷಣ ಕಂಡು ಬಂದ ತಕ್ಷಣ ವೈದ್ಯರ ಸಂಪರ್ಕಿಸಲು ಮನವಿ

– ಶುಕ್ರವಾರ ಬೆಳಿಗ್ಗೆವರೆಗೆ 38 ಪ್ರಕರಣಗಳು ವರದಿಯಾಗಿದ್ದು, ಚಿಕಿತ್ಸೆ ವಿಧಿ-ವಿಧಾನಗಳಿಗೆ ಹೆಚ್ಚಿನ ಒತ್ತು ನೀಡಲು ಅಧಿಕಾರಿಗಳಿಗೆ ಸೂಚನೆ.

– ರೋಗಿಗಳು ರೋಗ ಲಕ್ಷಣ ಕಂಡು ಬಂದ ಮೇಲೂ ಸರಾಸರಿ 4 ದಿನದ ನಂತರ ಬರುತ್ತಿದ್ದಾರೆ. ಆದ್ದರಿಂದ ರೋಗ ಲಕ್ಷಣ ಕಾಣಿಸಿಕೊಂಡ ಕೂಡಲೇ ವೈದ್ಯರನ್ನು
ಸಂಪರ್ಕಿಸುವಂತೆ ಮನವಿ

– ಐಸಿಯು ನಲ್ಲಿರುವ ವ್ಯಕ್ತಿಗಳ ಚಿಕಿತ್ಸೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು, ಅವರಿಗೆ ಕೆಲವು ವಿಶೇಷ ಪರೀಕ್ಷೆಗಳನ್ನು ನಡೆಸಲು ತೀರ್ಮಾನ

– ಜ್ವರ, ಶೀತ, ಉಸಿರಾಟದ ತೊಂದರೆ ಇರುವವರು ಕೂಡಲೇ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯವಿದೆ ಎಂದು ತಜ್ಞರ ಅಭಿಪ್ರಾಯ.

– ಪ್ರತಿ ಜಿಲ್ಲೆಯಲ್ಲಿ ಎರಡು ಹಾಗೂ ಪ್ರತಿ ವೈದ್ಯಕೀಯ ಕಾಲೇಜುಗಳಲ್ಲಿ ಒಂದು ಪರೀಕ್ಷಾ ಕೇಂದ್ರ ಸ್ಥಾಪಿಸುವಂತೆ ಐಸಿಎಂಆರ್‌ ಮಾರ್ಗಸೂಚಿ ಹೊರಡಿಸಿದ್ದು ಅದರಂತೆ ಕ್ರಮಕ್ಕೆ ತೀರ್ಮಾನ

– ಏಪ್ರಿಲ್‌ ಅಂತ್ಯದೊಳಗೆ ಇನ್ನೂ 10 ಪ್ರಯೋಗಾಲಯಗಳನ್ನು ಸ್ಥಾಪಿಸಲು ಕ್ರಮ

– ಲಾಕ್‌ ಡೌನ್‌ ಸಡಿಲಗೊಳಿಸಿದ ನಂತರ ಪ್ರಕರಣಗಳ ಸಂಖ್ಯೆ ಹೆಚ್ಚಾದಲ್ಲಿ ಅವುಗಳನ್ನು ನಿಭಾಯಿಸುವ ಸಿದ್ಧತೆ ಮಾಡಿಕೊಳ್ಳಲು ಸಭೆಯಲ್ಲಿ ತೀರ್ಮಾನ

– ಲಾಕ್‌ ಡೌನ್‌ ಸಡಿಲಗೊಳಿಸುವ ಸಂದರ್ಭದಲ್ಲಿ ಥರ್ಮಲ್‌ ಸ್ಕಾನರ್‌ ಮತ್ತಿತರ ಸರಳ ಪರೀಕ್ಷಾ ಪರಿಕರಗಳ ಮೂಲಕ ತಮ್ಮ ಸಿಬ್ಬಂದಿಯಲ್ಲಿ ರೋಗ ಲಕ್ಷಣವಿದೆಯೇ ಎಂದು ಪ್ರತಿ ದಿನ ಪರೀಕ್ಷೆ ಮಾಡುವ ಅಗತ್ಯವಿದೆ ಎಂದು ತಜ್ಞರ ಅಭಿಪ್ರಾಯ. ಈ ನಿಟ್ಟಿನಲ್ಲಿ ವಿವರವಾದ ಮಾರ್ಗಸೂಚಿ ಸಿದ್ಧಪಡಿಸಲು ತೀರ್ಮಾನ

ಟಾಪ್ ನ್ಯೂಸ್

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ | Video

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

IRCTC: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

4-soldier

Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4

Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ

3(1

Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ

2

Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ | Video

1

Kadri: ಬೃಹತ್‌ ಗಾತ್ರದ ಚಿಟ್ಟೆ, ಜೀರುಂಡೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.