ಪ್ರತ್ಯೇಕ ಧರ್ಮಕ್ಕೆ ಒಗ್ಗಟ್ಟು
Team Udayavani, Aug 3, 2017, 6:55 AM IST
ಬೆಂಗಳೂರು: ವೀರಶೈವ ಮತ್ತು ಲಿಂಗಾಯತರನ್ನೊಳಗೊಂಡ ಪ್ರತ್ಯೇಕ ಧರ್ಮ ಸ್ಥಾಪನೆಗೆ ಒಗ್ಗಟ್ಟಿನಿಂದ ಹೋರಾಡಲು
ಹಾಗೂ ಈ ಸಂಬಂಧ ಶೀಘ್ರವೇ ಮಠಾಧೀಶರ ಸಭೆ ಕರೆದು ತೀರ್ಮಾನ ಕೈಗೊಳ್ಳಲು ವೀರ ಶೈವ ಮಹಾಸಭೆಯಲ್ಲಿ
ನಿರ್ಧರಿಸಲಾಗಿದೆ. ಪ್ರತ್ಯೇಕ ಧರ್ಮದ ಗೊಂದಲಗಳ ನಿವಾರಣೆ ಕುರಿತು ಚರ್ಚಿಸಲು ಬುಧವಾರ ನಡೆದ ವೀರಶೈವ ಮಹಾಸಭೆಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳ ಲಾಗಿದ್ದು, ವೀರಶೈವದ ಬಗ್ಗೆ ಅಪಸ್ವರ ಎತ್ತಿದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟು ಪ್ರದರ್ಶಿಸಲು ಮಹಾಸಭೆ ನಿರ್ಧರಿಸಿದೆ.
ಅಲ್ಲದೇ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾ ದೇವಿ ಅವರ ಮಾತುಗಳನ್ನು ನಿರ್ಲಕ್ಷ್ಯ ಮಾಡಲು
ಮಹಾಸಭೆ ತೀರ್ಮಾನಿಸಿದೆ. ಸಭೆಯ ನಂತರ ಮಾತನಾಡಿದ ಮಹಾಸ ಭೆಯ ಮಹಾ ಪ್ರಧಾನ ಕಾರ್ಯದರ್ಶಿ
ಈಶ್ವರ್ ಖಂಡ್ರೆ, “”113 ವರ್ಷ ಇತಿಹಾಸ ಇರುವ ವೀರಶೈವ ಮಹಾಸಭೆಯಲ್ಲಿ ಫ.ಗು. ಹಳಕಟ್ಟಿ, ಸಿದ್ದಗಂಗೆಯ
ಶಿವಕುಮಾರ ಸ್ವಾಮಿ, ಡಿ.ಸಿ. ಪಾವತೆ ಆವರಂಥ ಅನೇಕ ಮಹನೀಯರು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ವೀರಶೈವ ಮತ್ತು ಲಿಂಗಾಯತ ಎನ್ನುವುದು ಎರಡೂ ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಇತ್ತೀಚಿನ ದಿನಗಳಲ್ಲಿ ಕೆಲವರು ಸ್ವಾರ್ಥಕ್ಕಾಗಿ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಪ್ರತಿಪಾದಿಸುತ್ತಿದಾರೆ. ಇದು ದುರದೃಷ್ಟಕರ” ಎಂದರು.
ವೀರಶೈವ ಮಹಾಸಭೆಯಿಂದಲೇ ಎರಡೂ ಪರ ವಿರೋಧ ಮಾಡು ವವರನ್ನು ಶೀಘ್ರವೇ ಸಭೆ ಕರೆದು ಚರ್ಚಿಸಿ, ಹಿರಿಯ
ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಎಲ್ಲರೂ ಒಂದೇ ಎನ್ನುವ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು. 2003ರಲ್ಲಿಯೂ ಪಂಚಪೀಠಾಧೀಶರು ಮತ್ತು ವಿರಕ್ತ ಪರಂಪರೆಯ ಸ್ವಾಮೀಜಿಗಳನ್ನು ಕೂಡಲಸಂಗಮದಲ್ಲಿ ಸಭೆ ಕರೆದು
ಎಲ್ಲರೂ ಒಂದೇ ಎನ್ನುವ ಸಂಕಲ್ಪ ಮಾಡಲಾಗಿತ್ತು. ಈಗ ಮತ್ತೆ ನಮ್ಮೊಳಗೆ ಕಚ್ಚಾಡುತ್ತಿರುವುದು ವಿಷಾದನೀಯವಾಗಿದೆ.
ಪ್ರತ್ಯೇಕ ಧರ್ಮ ಸ್ಥಾಪಿಸಿ ಯಾವುದೇ ಸವಲತ್ತು ಪಡೆಯುವ ಉದ್ದೇಶ ಹೊಂದಿಲ್ಲ ಎಂದರು.
ವೀರಶೈವ ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ 1981 ರಲ್ಲಿಯೇ ಮಹಾಸಭೆಯಿಂದ ಬೇಡಿಕೆ ಇಡಲಾಗಿದೆ. ಆಗಲೇ ಲಿಂಗಾಯತರಿಗೆ ಪತ್ಯೇಕ ಧರ್ಮದ ಕೋಡ್ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ನಂತರ 2013
ರಲ್ಲಿಯೂ ಕೇಂದ್ರ ಸರ್ಕಾರಕ್ಕೆ ಪ್ರತ್ಯೇಕ ವೀರಶೈವ ಲಿಂಗಾಯತ ಧರ್ಮಕ್ಕೆ ಮನವಿ ಸಲ್ಲಿಸಲಾಗಿತ್ತು. ಆ ಸಂದರ್ಭದಲ್ಲಿ ರಾಜ್ಯದ ಎಲ್ಲ ಪಕ್ಷಗಳ ಪ್ರಮುಖ ರಾಜಕೀಯ ನಾಯಕರೂ ಬೇಡಿಕೆಗೆ ಸಹಿ ಹಾಕಿದ್ದಾರೆ. ವೀರಶೈವ ಪದ ಬಳಕೆ ಮಾಡಿದರೆ, ಬೇಡಿಕೆ ತಿರಸ್ಕಾರ ಆಗುತ್ತದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು.
ನಮ್ಮ ಬೇಡಿಕೆಯನ್ನು ಇದುವರೆಗೂ ಯಾರೂ ತಿರಸ್ಕಾರ ಮಾಡಿಲ್ಲ ಎಂದು ಹೇಳಿದರು. ಅಷ್ಟಾವರಣ, ಷಟ್‌ಸ್ಥಳ, ಪಂಚಾಚಾರ ತತ್ವಗಳು ಮತ್ತು ಅಂಗೈಯಲ್ಲಿ ಲಿಂಗಪೂಜೆ ಮಾಡುವವರೆಲ್ಲರೂ ಲಿಂಗಾಯತ ವೀರಶೈವರು. ಇದರಲ್ಲಿ ಯಾವುದೇ ಭೇದ ಇಲ್ಲ. ವೀರಶೈವ ಪದದ ಕುರಿತು ಅಪಸ್ವರ ಎತ್ತಿದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶೀಘ್ರವೇ
ರಾಜ್ಯ ಸರ್ಕಾರಕ್ಕೆ ಒಮ್ಮತದ ಮನವಿ ಸಲ್ಲಿಸುತ್ತೇವೆ ಎಂದು ಅವರು ಹೇಳಿದರು.
ಸಚಿವರಾದ ಎಂ.ಬಿ. ಪಾಟೀಲ್ ಹಾಗೂ ಬಸವರಾಜ್ ರಾಯರಡ್ಡಿ ಅವರ ಹೇಳಿಕೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ
ಈಶ್ವರ್ ಖಂಡ್ರೆ, ಸಚಿವರ ಪ್ರವಾಸದ ಬಗ್ಗೆ ರಾಯರಡ್ಡಿ ಅವರು ಮಹಾಸಭೆಯೊಂದಿಗೆ ಚರ್ಚೆ ನಡೆಸಿಲ್ಲ.
ಅವರಿಗೆ ಕಾಲಿಗೆ ಏಟು ಬಿದ್ದಿದ್ದರಿಂದ ಹಾಸಿಗೆ ಹಿಡಿದ್ದಾರೆ. ಅವರೊಂದಿಗೆ ಮಾತನಾಡಿದ್ದೇವೆ. ಇದಕ್ಕೆ ಸರ್ಕಾರದ
ಸಚಿವರು ಪ್ರವಾಸ ಹೋಗುವ ಅಗತ್ಯವಿಲ್ಲ ಎಂದು ಹೇಳಿದರು. ಅದೇ ರೀತಿ ಎಂ. ಬಿ. ಪಾಟೀಲ್ ಕೂಡ ಏಕಾಏಕಿ ತಮ್ಮ ನಿಲುವು ಬದಲಿಸಿದ್ದಾರೆ. ಅವರೊಂದಿಗೂ ಮಾತುಕತೆ ನಡೆಸಲಾಗಿದೆ ಎಂದರು.
ಸಭೆಯಲ್ಲಿ ವೀರಶೈವ ಮಹಾಸಭೆಯ ರಾಜ್ಯ ಪದಾಧಿಕಾರಿಗಳು, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಜಿಲ್ಲಾಧ್ಯಕ್ಷರುಗಳೂ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Food Department Operation: ಬಿಪಿಎಲ್ ಚೀಟಿದಾರರಿಗೆ ಎಪಿಎಲ್ ಕಾವು!
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.