ಕಾಲೇಜು ಪ್ರಾಧ್ಯಾಪಕರಿಗೆ ವಾರಕ್ಕೆ40 ತಾಸು ಕಾರ್ಯಭಾರ ಕಡ್ಡಾಯ
Team Udayavani, Sep 24, 2017, 7:43 AM IST
ಬೆಂಗಳೂರು: ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಪ್ರಾಧ್ಯಾಪಕರು ವಾರದಲ್ಲಿ 40 ತಾಸುಗಳ ಕಾರ್ಯಭಾರ ನಡೆಸಿ, ಅದನ್ನು ಕಡ್ಡಾಯವಾಗಿ ದಿನಚರಿ ಪುಸ್ತಕದಲ್ಲಿ ಬರೆಯಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಸೂಚಿಸಿದೆ.
ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿಯಮದಂತೆ ಸರ್ಕಾರಿ ಪದವಿ ಕಾಲೇಜಿನ ಬೋಧಕರು ವಾರಕ್ಕೆ 40 ತಾಸುಗಳ ಕಾರ್ಯಭಾರ ಮಾಡಬೇಕು. ಆದರೆ, ಪ್ರಾಧ್ಯಾಪಕರು, ಸಹ ಮತ್ತು ಸಹಾಯಕ ಪ್ರಾಧ್ಯಾಪಕರು ನೇರ ಬೋಧನೆ ಮತ್ತು ಪ್ರಾಯೋಗಿಕ ತರಗತಿ ಹೊರತುಪಡಿಸಿ ಬೇರೆ ಯಾವುದೇ ಕಾರ್ಯಭಾರ ನಿರ್ವಹಿಸುತ್ತಿಲ್ಲ ಹಾಗೂ ಅದನ್ನು ಕಾಲೇಜಿನ ವೇಳಾಪಟ್ಟಿ, ಉಪನ್ಯಾಸಕರ ದಿನಚರಿಯಲ್ಲಿ ನಮೂದಿಸುತ್ತಿಲ್ಲ ಎಂಬುದರ ಬಗ್ಗೆ ವಿದ್ಯಾರ್ಥಿಗಳಿಂದ ದೂರು ಬಂದಿದೆ. ಜತೆಗೆ ಪ್ರಾಧ್ಯಾಪಕರು, ಸಹ ಮತ್ತು ಸಹಾಯಕ ಪ್ರಾಧ್ಯಾಪಕರು ಮನೆಪಾಠ (ಟ್ಯೂಟೋರಿಯಲ್) ನಡೆಸುತ್ತಿರುವ ಬಗ್ಗೆ ಇಲಾಖೆಯ ಅಧಿಕಾರಿಗಳು ಕಾಲೇಜು ತಪಾಸಣೆ ನಡೆಸಿದ ಸಂದರ್ಭದಲ್ಲಿ ತಿಳಿದುಬಂದಿದೆ.
ಉಪನ್ಯಾಸಕರು ತೆಗೆದುಕೊಳ್ಳುವ ಟ್ಯೂಟೋರಿಯಲ್ ತರಗತಿಗಳ ವಿವರಗಳನ್ನು ಕಾಲೇಜಿನ ವೇಳಾಪಟ್ಟಿ ಹಾಗೂ ಉಪನ್ಯಾಸಕರ ವೈಯಕ್ತಿಕ ವೇಳಾಪಟ್ಟಿಯಲ್ಲಿ ಕಡ್ಡಾಯವಾಗಿ ದಾಖಲಿಸಿಕೊಂಡಿರಬೇಕು. ಈ ಬಗ್ಗೆ ವಿದ್ಯಾರ್ಥಿಗಳಿಗೆ ಮನ್ಸೂಚನೆ ನೀಡಲು ಮಾಹಿತಿಯನ್ನು ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಬೇಕು ಎಂದು ನಿರ್ದೇಶಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rajendra Babu: ನಟರಿಗೆ ಪ್ಯಾನ್ ಇಂಡಿಯಾ ಭೂತ ಹಿಡಿದಿದೆ: ಬಾಬು
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.