ಕಾಲೇಜು ಆರಂಭಕ್ಕೆ ದಿನ ನಿಗದಿ: ನವೆಂಬರ್ 17ರಿಂದ ಕಾಲೇಜು ಆರಂಭಕ್ಕೆ ಸರ್ಕಾರ ಸಜ್ಜು
Team Udayavani, Oct 23, 2020, 12:26 PM IST
ಬೆಂಗಳೂರು: ಕೋವಿಡ್-19 ಸೋಂಕಿನ ಕಾರಣದಿಂದ ಕೆಲವು ತಿಂಗಳಿನಿಂದ ಮುಚ್ಚಿರುವ ಇಂಜನಿಯರ್, ಡಿಪ್ಲೊಮಾ, ಪಿಜಿ, ಪದವಿ ಕಾಲೇಜುಗಳನ್ನು ನವೆಂಬರ್ 17ರಿಂದ ಮತ್ತೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ.
ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಪದವಿ ಕಾಲೇಜು ಪ್ರಾರಂಭಿಸುವ ಕುರಿತಂತೆ ಪ್ರಾತ್ಯಕ್ಷಿಕೆ ಮತ್ತು ಚರ್ಚೆ ನಡೆಸಿದ ನಂತರ ಉನ್ನತ ಶಿಕ್ಷಣ ಸಚಿವ, ಡಿಸಿಎಂ ಅಶ್ವಥನಾರಾಯಣ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಚಾರವನ್ನು ಸ್ಪಷ್ಟಪಡಿಸಿದರು.
ನವೆಂಬರ್ 17 ಕ್ಕೆ ಪದವಿ ಕಾಲೇಜು ಆರಂಭಕ್ಕೆ ಸರ್ಕಾರ ನಿರ್ಧರಿಸಿದ್ದು, ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದ್ದು, ಆನ್ ಲೈನ್ ನಲ್ಲಿಯೂ ಕಲಿಯಬಹುದು. ಅಥವಾ ಕ್ಲಾಸಿಗೂ ಬರಬಹುದು. ಆದರೆ ಕ್ಲಾಸ್ ಗೆ ಬರಬೇಕಾದರೆ ವಿದ್ಯಾರ್ಥಿಗಳು ತಂದೆ ತಾಯಿಯಿಂದ ಪರವಾನಗಿ ಪತ್ರ ತರಬೇಕು ಎಂದರು.
ಮೊದಲು ಇಂಜನಿಯರ್, ಡಿಪ್ಲೊಮಾ, ಪಿಜಿ, ಪದವಿ ಕಾಲೇಜುಗಳು ತೆರೆಯಲು ನಿರ್ಧಾರ ಮಾಡಲಾಗಿದೆ. ಪ್ರ್ಯಾಕ್ಟಿಕಲ್ ತರಗತಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು.
ಇದನ್ನೂ ಓದಿ:ಇನ್ನು ಮುಂದೆ ಪ್ರಾದೇಶಿಕ ಭಾಷೆಗಳಲ್ಲೂ ಜೆಇಇ ಮೈನ್: ಕನ್ನಡದಲ್ಲೂ ಸಿಗುತ್ತಾ ಅವಕಾಶ?
ಯುಜಿಸಿ ಗೈಡ್ ಲೈನ್ಸ್ ಪ್ರಕಾರ ನವೆಂಬರ್ ನಲ್ಲಿ ಆಫ್ ಲೈನ್ ಶಾಲೆ ತೆರೆಯಲು ಅವಕಾಶವಿತ್ತು. ಎಲ್ಲಾ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್, ಪ್ರತಿ ಶಾಲೆಯಲ್ಲಿಯೂ ಟಾಸ್ಕ್ ಪೋರ್ಸ್ ರಚನೆ ಮಾಡಲಾಗುವುದು. ನವೆಂಬರ್ 17 ಕ್ಕೆ ಎಲ್ ಎಂಎಸ್ ಆನ್ ಲೈನ್ ಪೋರ್ಟಲ್ ಉದ್ಘಾಟನೆಯಾಗಲಿದೆ. ದೇಶದಲ್ಲಿಯೇ ಮೊದಲ ಬಾರಿ ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದು ಅವರು ಹೇಳಿದರು.
ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆರೋಗ್ಯದಲ್ಲಿ ಏರುಪೇರಾದರೆ ಸರ್ಕಾರವೇ ಅವರಿಗೆ ಚಿಕಿತ್ಸೆ ನೀಡುವ ಕೆಲಸ ಮಾಡಲಾಗುವುದು ಎಂದು ಡಿಸಿಎಂ ಅಶ್ವಥ್ ನಾರಾಯಣ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.