ಕಾಮೆಡ್ ಕೆ ಫಲಿತಾಂಶ ಪ್ರಕಟ: ಟಾಪ್ 10ರಲ್ಲಿ ರಾಜ್ಯದ ಐವರಿಗೆ ಸ್ಥಾನ
Team Udayavani, Jul 6, 2022, 12:53 AM IST
ಬೆಂಗಳೂರು: 2022-23ನೇ ಶೈಕ್ಷಣಿಕ ವರ್ಷದಲ್ಲಿ ಇರುವ ಖಾಸಗಿ ಎಂಜಿ ನಿಯರಿಂಗ್ ಕಾಲೇಜು, ಖಾಸಗಿ ಮತ್ತು ಡೀಮ್ಡ್ ವಿಶ್ವ ವಿದ್ಯಾಲಯ ಗಳಲ್ಲಿರುವ ಎಂಜಿನಿಯ ರಿಂಗ್ ಮತ್ತು ಬಿ.ಟೆಕ್ ಕೋರ್ಸುಗಳ ಪ್ರವೇಶಕ್ಕಾಗಿ ನಡೆಸಿದ ಕಾಮೆಡ್-ಕೆ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಮೊದಲ ಟಾಪ್ 10ರಲ್ಲಿ ರಾಜ್ಯದ ಐವರು ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ.
ಪ್ರಥಮ ಸ್ಥಾನವನ್ನು ತಮಿಳು ನಾಡಿನ ಎ. ವೆಂಕಟ್ ಪಡೆದಿದ್ದು, 2 ಮತ್ತು 3ನೇ ಸ್ಥಾನವನ್ನು ಬೆಂಗಳೂರಿನ ವಿಶಾಲ್ ಬೈಸಾನಿ ಹಾಗೂ ಅಪ್ಪೋರ್ವ್ ತಂಡನ್ ಪಡೆದಿದ್ದಾರೆ. ಅಲ್ಲದೆ, ಮೊದಲ 100 ರ್‍ಯಾಂಕ್‌ನಲ್ಲಿ 52 ಸ್ಥಾನ ಕರ್ನಾಟಕದ ಪಾಲಾಗಿದೆ.
ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದ ನಂಬರ್ ಬಳಸಿ ಲಾಗಿನ್ ಆಗಿ ಫಲಿತಾಂಶವನ್ನು ಕಾಮೆಡ್-ಕೆ ವೆಬ್‌ಸೈಟ್http://www.comedk.org ನಲ್ಲಿ ನೋಡಬಹುದು.
ಒಟ್ಟಾರೆ ಶೇ. 90ರಿಂದ 100 ಫಲಿತಾಂಶವನ್ನು 5,930 ಅಭ್ಯರ್ಥಿಗಳು ಪಡೆದಿದ್ದು, ರಾಜ್ಯದ 1,768 ಅಭ್ಯರ್ಥಿಗಳಿದ್ದಾರೆ. ಶೇ.80ರಿಂದ 90ರಷ್ಟು ಫಲಿತಾಂಶ ವನ್ನು 5,620 ಮಂದಿ ಪಡೆದಿದ್ದು, 1,753 ರಾಜ್ಯದ ವಿದ್ಯಾರ್ಥಿ ಗಳಿದ್ದಾರೆ. 6,347 ಮಂದಿ ಶೇ. 70ರಿಂದ 80ರಷ್ಟು ಫಲಿತಾಂಶ ಪಡೆದಿದ್ದು, ರಾಜ್ಯದ 2,138 ಅಭ್ಯರ್ಥಿಗಳಿದ್ದಾರೆ.
61,635 ನೋಂದಣಿ
ಜೂ. 19ರಂದು ದೇಶಾದ್ಯಂತ 154 ನಗರದ 230 ಕೇಂದ್ರಗಳಲ್ಲಿ ಕಾಮೆಡ್-ಕೆ ಪರೀಕ್ಷೆ ನಡೆಸಲಾಗಿತ್ತು. 61,635 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ ಕರ್ನಾಟಕದ 21,108 ಹಾಗೂ 36,278 ಕರ್ನಾಟಕೇತರ ಅಭ್ಯರ್ಥಿಗಳು ಸೇರಿ 57,387 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಜೂ.22ರಂದು ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಿತ್ತು.
159 ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಿದ್ದರು. ಆಕ್ಷೇಪಣೆಗಳನ್ನು ಪರಿಣಿಸಿದ್ದ ಸಮಿತಿಯು ಜೂ. 30ರಂದು ಅಂತಿಮ ಉತ್ತರಗಳನ್ನು ಪ್ರಕಟಿಸಿತ್ತು. ಇದೀಗ ಫಲಿತಾಂಶ ಪ್ರಕಟಿಸಿದೆ.
ಶೀಘ್ರವೇ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟ
ಸದ್ಯದಲ್ಲಿಯೇ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ಅನ್ನು ಆನ್‌ಲೈನ್ ಮೂಲಕ ನಡೆಸಲಾಗುತ್ತದೆ. ರ್‍ಯಾಂಕ್ ಪಡೆದಿರುವ ಅಭ್ಯರ್ಥಿಗಳು ತಮ್ಮ ಲಾಗಿನ್ ಬಳಸಿ ಮೂಲ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವಂತೆ ತಿಳಿಸಿದೆ. ದಾಖಲೆಗಳ ಪರಿಶೀಲನೆ ನಡೆಸಿದ ಬಳಿಕ ಕೌನ್ಸೆಲಿಂಗ್ ನಡೆಸಲಾಗುತ್ತದೆ ಎಂದು ತಿಳಿಸಿದೆ.
ಸಿಇಟಿ ಮೂಲಕವೇ ಭರ್ತಿ
ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಸೀಟುಗಳ ಭರ್ತಿಗೆ ನಡೆಸುವ ಕಾಮೆಡ್-ಕೆ ಪರೀಕ್ಷೆಯು ಕೊನೆಯ ವರ್ಷದ ಪರೀಕ್ಷೆಯಾಗಿದೆ. ಮುಂದಿನ ವರ್ಷದಿಂದ ಸಿಇಟಿ ಮೂಲಕವೇ ಸೀಟುಗಳನ್ನು ಭರ್ತಿ ಮಾಡಲಾಗುತ್ತದೆ.
ಮೊದಲ 10 ಸ್ಥಾನ ಪಡೆದ ಅಭ್ಯರ್ಥಿಗಳು
ಎ. ವೆಂಕಟ್- ತಮಿಳುನಾಡು, ವಿಶಾಲ್ ಬೈಸಾನಿ- ಬೆಂಗಳೂರು, ಅಪ್ಪೋರ್ವ್ ತಂಡನ್- ಬೆಂಗಳೂರು, ಕನಿಷ್R ಶರ್ಮ- ಉತ್ತರ ಪ್ರದೇಶ, ಸಿದ್ಧಾರ್ಥ ಸಿಂಗ್- ಬೆಂಗಳೂರು, ಬೊಯಾಹರೇನ್ ಸಾತ್ವಿಕ್- ಬೆಂಗಳೂರು, ಆರವ್ ಗಿರಿ- ಬೆಂಗಳೂರು, ಸ್ನೇಹ ಪರೀಕ್- ಗುವಾಹಟಿ, ವಿಶಾಖ ಅಗರ್ವಾಲ್- ಜೈಪುರ, ಶ್ರೀಜನ್ ರಂಜನ್- ಜಾರ್ಖಾಂಡ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.