COMEDK UGET Result: ಬೆಂಗಳೂರಿನ ಬಾಲಸತ್ಯ ಸರವಣನ್‌ಗೆ ಫಸ್ಟ್ ರ್‍ಯಾಂಕ್
ಅಗ್ರ 10 ರ್‍ಯಾಂಕಿಂಗ್‌ನಲ್ಲಿ ಕರ್ನಾಟಕಕ್ಕೆ 8 ರ್‍ಯಾಂಕ್ ; ಖಾಸಗಿ ಎಂಜಿನಿಯರಿಂಗ್ ಕಾಲೇಜು ಪ್ರವೇಶ ಪರೀಕ್ಷೆ
Team Udayavani, May 25, 2024, 6:14 AM IST
ಬೆಂಗಳೂರು: ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ಕಾಮೆಡ್- ಕೆ ನಡೆಸಿದ್ದ ಯುಜಿಇಟಿ ಪರೀಕ್ಷೆ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದೆ. ಬೆಂಗಳೂರಿನ ಬಾಲಸತ್ಯ ಸರವಣನ್ ಪ್ರಥಮ ಸ್ಥಾನ ಗಳಿಸಿದ್ದಾರೆ.
ಕರ್ನಾಟಕದ 150 ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಸೇರಿದಂತೆ ದೇಶದೆಲ್ಲೆಡೆ ಇರುವ ಒಟ್ಟು 190 ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸುಮಾರು 22 ಸಾವಿರ ಎಂಜಿನಿಯರಿಂಗ್ ಸೀಟುಗಳ ಪ್ರವೇಶಾತಿಗಾಗಿ ಈ ಪರೀಕ್ಷೆಯನ್ನು ಮೇ 12 ರಂದು ದೇಶಾದ್ಯಂತ ನಡೆಸಲಾಗಿತ್ತು. ಒಟ್ಟು 1,03,799 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಅಗ್ರ ಹತ್ತು ರ್‍ಯಾಂಕಿಂಗ್‌ನಲ್ಲಿ 8 ರ್‍ಯಾಂಕಿಂಗ್ ಕರ್ನಾಟಕಕ್ಕೆ ಲಭಿಸಿದೆ. ರಾಜ್ಯದ ಬಾಲಸತ್ಯ ಸರವಣನ್ ಮೊದಲ ರ್‍ಯಾಂಕ್ ಪಡೆದಿದ್ದರೆ ಬಳಿಕದ ರ್‍ಯಾಂಕ್‌ಗಳನ್ನು ರಾಜ್ಯದವರೇ ಆದ ದೇವಾಂಶ್ ತ್ರಿಪಾಠಿ, ಸನಾ ತಬಸ್ಸುಮ್, ಪ್ರಕೇತ್ ಗೋಯೆಲ್ ಪಡೆದಿದ್ದಾರೆ. ಐದನೇ ರ್‍ಯಾಂಕ್ ಹಿಮಾಚಲ ಪ್ರದೇಶದ ಮಾನಸ್ ಸಿಂಗ್ ರಜಪೂತ್, ಆರನೇ ರ್‍ಯಾಂಕ್ ಆಂಧ್ರ ಪ್ರದೇಶದ ಗಣಿಪಿಸೆಟ್ಟಿ ನಿಶ್ಚಲ್ ಅವರಿಗೆ ಲಭಿಸಿದೆ. ಆ ಬಳಿಕದ ರ್‍ಯಾಂಕ್‌ಗಳು ಕ್ರಮವಾಗಿ ರಾಜ್ಯದವೇ ಆದ ನಿಕೇತ್ ಪ್ರಕಾಶ್ ಅಚಂತಾ, ನೇಹಾ ಪ್ರಭು, ಜಗದೀಶ್ ರೆಡ್ಡಿ ಮಾರ್ಲ ಮತ್ತು ಈಶ್ವರ್ ಚಂದ್ರ ರೆಡ್ಡಿ ಮುಲ್ಕಾ ಅವರಿಗೆ ಸಂದಿದೆ.
ಶೇ.90 ರಿಂದ ಶೇ. 100ರ ಮಧ್ಯೆ 10,575 ವಿದ್ಯಾರ್ಥಿಗಳು ಅಂಕ ಪಡೆದಿದ್ದು ಈ ಪೈಕಿ 3,126 ಮಂದಿ ಕರ್ನಾಟಕದವರು. ಶೇ. 80 ರಿಂದ ಶೇ. 90ರ ಮಧ್ಯೆ 10,538 ವಿದ್ಯಾರ್ಥಿಗಳ ಅಂಕ ಗಳಿಸಿದ್ದು ಈ ಪೈಕಿ 2,749 ವಿದ್ಯಾರ್ಥಿಗಳು ಕರ್ನಾಟಕಕ್ಕೆ ಸೇರಿದವರಾಗಿದ್ದಾರೆ.
ಶುಕ್ರವಾರವೇ ಮಧ್ಯಾಹ್ನ ಮೂರು ಗಂಟೆಯ ಬಳಿಕ ಕಾಮೆಡ್ ಕೆ ವೆಬ್‌ಸೈಟ್‌ನಲ್ಲಿ ಫಲಿತಾಂಶ ಅಭ್ಯರ್ಥಿಗಳಿಗೆ ಲಭ್ಯವಾಗಿದೆ.
ಮೇ 12ರಂದು 191 ನಗರಗಳಲ್ಲಿರುವ 264 ಪರೀಕ್ಷಾ ಕೇಂದ್ರಗಳಲ್ಲಿ ಮೂರು ಸೆಷನ್‌ಗಳಲ್ಲಿ ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಒಟ್ಟು 1.18 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು ಈ ಪೈಕಿ 1.03 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆ ಬರೆದವರಲ್ಲಿ 35,124 ಮಂದಿ ಕರ್ನಾಟಕದವರು ಮತ್ತು 68,675 ಕರ್ನಾಟಕೇತರ ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು.
ಕೌನ್ಸೆಲಿಂಗ್ ನೋಂದಣಿ ಆರಂಭ:
ಕೌನ್ಸೆಲಿಂಗ್ ನೋಂದಣಿ ಮತ್ತು ಡಾಕ್ಯುಮೆಂಟ್ ಅಪ್‌ಲೋಡ್ ಪ್ರಕ್ರಿಯೆ ಮೇ 24 ರ ಸಂಜೆ 4 ರಿಂದ ಪ್ರಾರಂಭವಾಗಿದೆ. ಅಭ್ಯರ್ಥಿಗಳ ಶೇಕಡವಾರು ಅಂಕ ಹಾಗೂ ರ್‍ಯಾಂಕ್ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಿ ಕೌನ್ಸಿಲಿಂಗ್ ನಡೆಸುವುದಾಗಿ ಕಾಮೆಡ್-ಕೆಯ ಕಾರ್ಯಕಾರಿ ನಿರ್ದೇಶಕ ಡಾ. ಎಸ್. ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
Belagavi: ಕಾಂಗ್ರೆಸ್ ಶಕ್ತಿ ಏನೆಂದು ನಮಗಿಂತ ಚೆನ್ನಾಗಿ ಬಿಜೆಪಿಯವರಿಗೆ ಗೊತ್ತಿದೆ: ಡಿಕೆಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಭಾರತೀಯ ಸಂಸ್ಕೃತಿ ಮತ್ತು ಭಗವದ್ಗೀತೆ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.