ಅಧಿಕಾರಕ್ಕಾಗಿ ರಾಜಿ ಅನಿವಾರ್ಯ: ಮಾಧುಸ್ವಾಮಿ
Team Udayavani, Nov 14, 2019, 3:02 AM IST
ಬೆಳಗಾವಿ: ರಾಜ್ಯದಲ್ಲಿ ಅಧಿಕಾರ ಹಿಡಿಯಲು ಹಾಗೂ ಪಕ್ಷ ಉಳಿಸಿಕೊಳ್ಳಲು ಪ್ರಯತ್ನ ನಡೆಸಬೇಕಾಗುತ್ತದೆ. ಇದಕ್ಕಾಗಿ ರಾಜಿ ಅನಿವಾರ್ಯ. ಅದನ್ನು ಅಸಮಾಧಾನಗೊಂಡವರು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು. ಬುಧವಾರ ಸುದ್ದಿಗಾರ ಜತೆ ಮಾತನಾಡಿ, ನಮ್ಮ ಪಕ್ಷಕ್ಕೆ ತೊಂದರೆ ಆಗುವುದಿಲ್ಲ.
ಈ ಸರ್ಕಾರ ಮುಂದುವರಿಯಬೇಕು ಹಾಗೂ ಉಳಿಸಬೇಕು ಎನ್ನುವುದು ಮತದಾರರ ಅಭಿಮತ. ಹೀಗಾಗಿ ಎಲ್ಲ ಕ್ಷೇತ್ರಗಳಲ್ಲೂ ನಮ್ಮವರನ್ನು ಗೆಲ್ಲಿಸುತ್ತಾರೆ. ಸಭಾಪತಿ ಹುದ್ದೆ ಗೌರವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ನ್ಯಾಯಾಲಯದ ನಿರ್ಧಾರವನ್ನು ನಾವು ಸ್ವಾಗತ ಮಾಡಲೇಬೇಕಾಗುತ್ತದೆ. ತೀರ್ಪು ವಿಳಂಬ ಆಗಿದ್ದರಿಂದ ಅನರ್ಹ ಶಾಸಕರಿಗೆ ಎರಡು ಮೂರು ತಿಂಗಳು ಆತಂಕವಿತ್ತು.
ಆಗಲೇ ತೀರ್ಪು ಬಂದಿದ್ದರೆ ಕ್ಷೇತ್ರದಲ್ಲಿ ಓಡಾಡುತ್ತಿದ್ದರು. ಬಿಜೆಪಿಯಿಂದ ಬಿ ಫಾರಂ ಕೊಟ್ಟ ಕೂಡಲೇ ಅನರ್ಹ ಶಾಸಕರೆಲ್ಲರೂ ಪಕ್ಷ ಸೇರುತ್ತಾರೆ. ಅದನ್ನು ಕೊಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಬೇರೆಯವರಿಗೆ ಟಿಕೆಟ್ ಕೊಟ್ಟರೆ, ಪಕ್ಷದಲ್ಲಿ ಅಸಮಾಧಾನ ಸಹಜ. ಪಕ್ಷದ ಟಿಕೆಟ್ ಸಿಗದವರಿಗೆ ಬೇರೆ ಸ್ಥಾನಮಾನ ಕೊಡಲಾಗುವುದು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.