60 ವರ್ಷ ಮೀರಿದ ಬಿಸಿಯೂಟ ಅಡುಗೆ ಸಿಬಂದಿಗೆ ಕಡ್ಡಾಯ ನಿವೃತ್ತಿ

Team Udayavani, Apr 4, 2022, 7:40 AM IST

Untitled-1

ಸಾಂದರ್ಭಿಕ ಚಿತ್ರ

ದಾವಣಗೆರೆ: ರಾಜ್ಯದಲ್ಲಿ ಅಕ್ಷರ ದಾಸೋಹ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಶಾಲಾ ಅಡುಗೆ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ 60 ವರ್ಷ ಮೇಲ್ಪಟ್ಟ ಅಡುಗೆ ಸಿಬಂದಿಯನ್ನು ಕಡ್ಡಾಯವಾಗಿ ಕೆಲಸದಿಂದ ಬಿಡುಗಡೆಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ.

ಬಿಸಿಯೂಟ ಯೋಜನೆ ಆರಂಭವಾದಾಗಿನಿಂದ ಅಂದರೆ 2003-04ರಿಂದ ಇಲ್ಲಿಯವರೆಗೂ ವಯೋಮಾನ 60 ಮೀರಿದ್ದರೂ ಆರೋಗ್ಯವಂತರಾಗಿರುವ ಅಡುಗೆ ಸಿಬಂದಿ ಮಾನವೀಯತೆ ದೃಷ್ಟಿಯಿಂದ ಕೆಲಸದಲ್ಲಿ ಮುಂದುವರಿಸಿಕೊಂಡು ಬರಲಾಗಿತ್ತು. ಆದರೆ, ಇದೇ ವರ್ಷ ಪ್ರಥಮ ಬಾರಿಗೆ ಇಲಾಖೆ ಈ ಕುರಿತು ಅಧಿಕೃತ ಆದೇಶ ಹೊರಡಿಸಿ, 60 ವರ್ಷ ಪೂರ್ಣಗೊಳಿಸಿದವರನ್ನು ಕಡ್ಡಾಯವಾಗಿ ಅಡುಗೆ ಕರ್ತವ್ಯದಿಂದ ಬಿಡುಗಡೆಗೊಳಿಸುತ್ತಿದೆ.

ಇಲಾಖೆಯ ಈ ಕ್ರಮದಿಂದ  ಅಂದಾಜು ಮೂರು ಸಾವಿರ ಮಂದಿ ಕೆಲಸ ಬಿಡಬೇಕಾಗಿದೆ. ಹಲವು ವರ್ಷ ಕೇವಲ ಗೌರವ ಸಂಭಾವನೆಯಲ್ಲೇ ಕೆಲಸ ಮಾಡಿದ್ದ ಇವರು ಯಾವುದೇ ನಿವೃತ್ತಿ ಸೌಲಭ್ಯವಿಲ್ಲದೇ ಕೆಲಸ ಬಿಡುವಂತಾಗಿದೆ.

ಆದೇಶದಲ್ಲೇನಿದೆ? :

2022ರ ಮಾ.31ಕ್ಕೆ 60 ವರ್ಷ ಪೂರ್ಣಗೊಳಿಸಿರುವ ಅಡುಗೆ ಸಿಬಂದಿಯನ್ನು ವಯೋಸಹಜ ಕಾರಣ ಹಾಗೂ ಇತರ ಇಲಾಖೆಗಳಲ್ಲಿ ಗೌರವ ಸಂಭಾವನೆ ಪಡೆಯುತ್ತಿರುವವರನ್ನು 60 ವರ್ಷಕ್ಕೆ ಕೈಬಿಡುವ ಪದ್ಧತಿಯಂತೆ  ಕರ್ತವ್ಯದಿಂದ ಕೈಬಿಡಲು ಕ್ರಮ ಕೈಗೊಳ್ಳಬೇಕು. ಸೂಕ್ತ ದಾಖಲೆ, ವೈದ್ಯಕೀಯ ದೃಢೀಕರಣದ ವಿಧಾನದ ಮೂಲಕ ಪ್ರಸಕ್ತ ಮಾ.31ಕ್ಕೆ 60 ವರ್ಷ ತುಂಬಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಇಲಾಖೆ ಆಯುಕ್ತರು ಎಲ್ಲ ಶಾಲಾ ಮುಖ್ಯ ಶಿಕ್ಷಕರಿಗೆ ಆದೇಶಿಸಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎ.1ರಿಂದ ಪ್ರಾರಂಭಿಸಿ ಮುಂದಿನ ಯಾವುದೇ ತಿಂಗಳಲ್ಲಿ ಅಡುಗೆ ಸಿಬಂದಿಗೆ 60 ವರ್ಷ ವಯಸ್ಸು ತುಂಬಿದರೆ, ಅದೇ ತಿಂಗಳ ಅಂತಿಮ ದಿನಾಂಕದಂದೇ  ಅವರನ್ನು ಮುಕ್ತಗೊಳಿಸಬೇಕು. ಜತೆಗೆ 60 ವರ್ಷ ತುಂಬದಿದ್ದರೂ ಅನಾರೋಗ್ಯ ಹಾಗೂ ಇತರ ಕಾರಣದಿಂದ  ಅಡುಗೆ ಕೆಲಸದಲ್ಲಿ ಮುಂದುವರಿಯಲು ಇಚ್ಛಿಸದಿದ್ದಲ್ಲಿ ಅವರಿಂದ ಲಿಖೀತ ಪತ್ರ ಪಡೆದು  ಸೇವೆಯಿಂದ ಮುಕ್ತಗೊಳಿಸಬೇಕು ಎಂದು ಆಯುಕ್ತರು ನಿರ್ದೇಶಿಸಿದ್ದಾರೆ.

ಬರಿಗೈಯಲ್ಲಿ ಮನೆಗೆ :

ಶಾಲಾ ಅಡುಗೆ ಕೇಂದ್ರಗಳ ಸಿಬಂದಿಗೆ 60 ವರ್ಷ ತುಂಬಿದಾಗ ಅವರಿಗೆ ಇಡುಗಂಟು ಹಾಗೂ ಪಿಂಚಣಿ ಕೊಟ್ಟು ಕೆಲಸದಿಂದ ಕೈಬಿಡಬೇಕೆಂದು ಬಿಸಿಯೂಟ ಅಡುಗೆ ಸಿಬಂದಿ ಹಾಗೂ ಅಸಂಘಟಿತ ಕಾರ್ಮಿಕ ಸಂಘಟನೆಗಳು ಮೊದಲಿನಿಂದಲೂ ಆಗ್ರಹಿಸುತ್ತಲೇ ಬಂದಿವೆ. 13-2-2020ರಂದು ಅಂದಿನ ಶಿಕ್ಷಣ ಸಚಿವ ಸುರೇಶಕುಮಾರ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ  ಚರ್ಚಿಸಲಾಗಿತ್ತು. ಆಗ 60 ವರ್ಷ ತುಂಬಿ ನಿವೃತ್ತಿಯಾಗುವ ಅಡುಗೆ ಸಿಬಂದಿಗೆ 60:40 ಅನುಪಾತದಲ್ಲಿ (ಕೇಂದ್ರ ಶೇ.60, ರಾಜ್ಯ ಶೇ.40) ಇಡುಗಂಟು, ಪಿಂಚಣಿ ಕೊಡಲು ಸರಕಾರ ಬದ್ಧವಾಗಿದೆ. ಆದರೆ ಇದಕ್ಕೆ ಕೇಂದ್ರದ ಸಹಕಾರ ಬೇಕು. ಈ ಕುರಿತು ಕೇಂದ್ರಕ್ಕೆ ನಿಯೋಗ ಒಯ್ಯುವುದಾಗಿ ಹೇಳಿದ್ದರು. ಅಲ್ಲಿಯವರೆಗೆ 60 ವರ್ಷ ಮೀರಿದ ಯಾರನ್ನೂ ಕೆಲಸದಿಂದ ತೆಗೆಯುವುದಿಲ್ಲ ಎಂಬ ಭರವಸೆ ನೀಡಿದ್ದರು. ಸಮಸ್ಯೆ ಬಗೆಹರಿಯುವ ಮೊದಲೇ ಇಲಾಖೆ ಈ ವರ್ಷ ಕಡ್ಡಾಯವಾಗಿ 60 ವರ್ಷ ಮೀರಿದವರನ್ನು ಹೊರಹಾಕಲು ಅಧಿಕೃತ ಆದೇಶ ಹೊರಡಿಸಿದೆ ಎನ್ನುತ್ತಾರೆ ಬಿಸಿಯೂಟ ತಯಾರಕ ಸಂಘಟನೆ ಮುಖಂಡ ಹೊನ್ನಪ್ಪ ಮರೆಮ್ಮನವರ.

60 ವರ್ಷ ಮೀರಿದವರನ್ನು ಸೇವಾಮುಕ್ತಗೊಳಿಸುವ ಬಗ್ಗೆ  ವಿರೋಧವಿಲ್ಲ. ಆದರೆ ಇವರಂತೆ ಗೌರವ ಸಂಭಾವನೆಯಲ್ಲಿ ದುಡಿಯುವ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಡುವ ರೀತಿಯಲ್ಲಿ ಕನಿಷ್ಠ 30 ಸಾವಿರ ಇಡುಗಂಟು ಕೊಡಬೇಕು. ಜತೆಗೆ 3000 ರೂ. ಪಿಂಚಣಿ ಕೊಡಲು ಸರಕಾರ ಕ್ರಮ ವಹಿಸಬೇಕು. ಅಲ್ಲಿವರೆಗೆ ಇವರನ್ನು ಕೆಲಸದಿಂದ ತೆಗೆಯಬಾರದು.ಹೊನ್ನಪ್ಪ ಮರೆಮ್ಮನವರ, ಅಧ್ಯಕ್ಷರು, ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಶನ್‌(ಎಐಟಿಯುಸಿ ಸಂಯೋಜಿತ)

ಪ್ರತಿ ಬಾರಿ ಶೈಕ್ಷಣಿಕ ವರ್ಷದ ಅಂತ್ಯಕ್ಕೆ ಅಡುಗೆ ಸಿಬಂದಿ ಬಿಡುಗಡೆ ಮಾಡಿ ಮುಂದಿನ ವರ್ಷ ಅವರನ್ನೇ ಮುಂದುವರಿಸಿಕೊಂಡು ಬರಲಾಗುತ್ತಿತ್ತು. ಈ ಸಲ 60 ವರ್ಷ ಮೀರಿದವರನ್ನು ಕೈಬಿಡಲು ಸೂಚಿಸಲಾಗಿದ್ದು, ಮುಖ್ಯ ಶಿಕ್ಷಕರಿಗೆ ನಿರ್ದೇಶಿಸಲಾಗಿದೆ.ಜಿ.ಆರ್‌. ತಿಪ್ಪೇಶಪ್ಪ, ಡಿಡಿಪಿಐ, ದಾವಣಗೆರೆ

-ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.