SSLC ಪರೀಕ್ಷೆ: ಯಾವ ವಿದ್ಯಾರ್ಥಿಯನ್ನು ಫೈಲ್ ಮಾಡಲ್ಲ, ಕನಿಷ್ಠ ಅಂಕವೂ ನಿಗದಿ ಮಾಡಿಲ್ಲ!
Team Udayavani, Jun 12, 2021, 9:51 AM IST
ಬೆಂಗಳೂರು: ಎಸ್ ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಸರಳೀಕೃತ ರೂಪದಲ್ಲಿ ಪರೀಕ್ಷೆ ನಡೆಯಲಿದೆ, ಆದರೆ, ಕನಿಷ್ಠ ಅಂಕದ ಸ್ಪಷ್ಟತೆಯಿಲ್ಲ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಈಗಾಗಲೇ ಆಂತರಿಕ ಅಂಕಗಳನ್ನು ಅಪ್ ಲೋಡ್ ಮಾಡಲು ಸೂಚಿಸಿದೆ.
ಪ್ರಥಮಭಾಷೆ (ಕನ್ನಡ, ಇಂಗ್ಲಿಷ್ ಇತ್ಯಾದಿ) 25 ಅಂಕ, ಉಳಿದ ಐದು ವಿಷಯಕ್ಕೆ ತಲಾ 20 ಆಂತರಿಕ ಅಂಕ ಇರಲಿದೆ. ಎಲ್ಲ ವಿಷಯದಲ್ಲಿ ವಿದ್ಯಾರ್ಥಿಗಳು ಪಡೆದಿರುವ ಆಂತರಿಕ ಅಂಕವನ್ನು ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆ (ಎಸ್‌ಎಟಿಎಸ್) ಮೂಲಕ ಅಪ್‌ಲೋಡ್ ಮಾಡಲು ಸೂಚಿಸಲಾಗಿದ್ದು, ಶಿಕ್ಷಕರು ತಮ್ಮ ಶಾಲೆಯ ವಿದ್ಯಾರ್ಥಿಗಳು ಆಂತರಿಕ ಅಂಕ ಅಪ್‌ಲೋಡ್ ಪ್ರಕ್ರಿಯೆ ಆರಂಭಿಸಿದ್ದಾರೆ.
ಸರಳೀಕೃತ ರೂಪದಲ್ಲಿ ಜುಲೈ 3ನೇ ವಾರದಲ್ಲಿ 2 ವಾರ್ಷಿಕ ಪರೀಕ್ಷೆ ನಡೆಯಲಿದ್ದು, ಒಂದೊಂದು ಪರೀಕ್ಷೆಯಲ್ಲಿ ಮೂರು ವಿಷಯಗಳಿರಲಿದ್ದು, ತಲಾ 40 ಅಂಕಗಳ ಪರೀಕ್ಷೆ ಇದಾಗಿರಲಿದೆ. ಈ ಬಗ್ಗೆ ಮಂಡಳಿ ಇನ್ನಷ್ಟೇ ವಿಸ್ತೃತ ಮಾರ್ಗಸೂಚಿ ಬಿಡುಗಡೆ ಮಾಡಬೇಕಿದೆ. ಯಾವ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡಲ್ಲ, ಕನಿಷ್ಠ ಅಂಕವೂ ನಿಗದಿ ಮಾಡಿಲ್ಲ. ಆದರೇ, ಶೇ.35 ಅಂಕ ಪಡೆಯ ಬೇಕು ಎನ್ನುತ್ತಿದ್ದಾರೆ ಮಂಡಳಿಯ ಅಧಿಕಾರಿಗಳು.
ಇದನ್ನೂ ಓದಿ:ಶೈಕ್ಷಣಿಕ ಮಾರ್ಗಸೂಚಿ ಪ್ರಕಟ; ಆನ್ ಲೈನ್, ಆಫ್ ಲೈನ್ ಪಾಠಕ್ಕೆ ಸೂಚನೆ
ಪರೀಕ್ಷೆ ಎಂದರೆ ಎಲ್ಲರೂ ಉತ್ತೀರ್ಣರಾಗಲು ಸಾಧ್ಯವಿಲ್ಲ. ಎಷ್ಟೇ ಸರಳ ಪರೀಕ್ಷೆ ಇದ್ದರೂ ಎಲ್ಲವನ್ನು ಎಲ್ಲ ವಿದ್ಯಾರ್ಥಿಗಳಿಗೆ ಉತ್ತರಿಸಲು ಸಾಧ್ಯವಿಲ್ಲ. ಸುಮಾರು 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಲ್ಲಿ ಪ್ರತಿವರ್ಷ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದರು. ಈ ವರ್ಷ ಕನಿಷ್ಠ ಅಂಕದ ಮಾನದಂಡ ಹೇಗೆ ನಿಗದಿ ಮಾಡಬೇಕು ಎಂಬುದೇ ಇಲಾಖೆಗೆ ಸವಾಲಾಗಿದೆ.
ಆಂತರಿಕ ಅಂಕವನ್ನು ಸೇರಿಸಲಾಗುತ್ತದೆ : ಸರಳೀಕೃತ ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಡೆಯುವ ಅಂಕದ ಜತೆಗೆ ಆಂತರಿಕ ಅಂಕ ಸೇರಿಸಲಾಗುತ್ತದೆ. ಒಟ್ಟು 240 ಅಂಕಗಳಿಗೆ ಪರೀಕ್ಷೆ 125 ಆಂತರಿಕ ಅಂಕಗಳು ಸೇರಿ ಒಟ್ಟಾರೆಯಾಗಿ 355 ಅಂಕಗಳಲ್ಲಿ ಕನಿಷ್ಠ ಅಂಕದ ನಿಗದಿ ಮಾಡಲಾಗುತ್ತದೇ. ಇದರಲ್ಲಿ ಶೇ.35 ಎಷ್ಟು ಬರುತ್ತದೆ ಎಂಬುದರಲ್ಲಿ ಕಟ್ ಆಫ್ ಪಾಸ್ ನಿಗದಿ ಮಾಡಲು ಚರ್ಚೆ ನಡೆಯುತ್ತಿದೆ. ಎಲ್ಲರನ್ನು ಪಾಸ್ ಮಾಡಬೇಕಿರುವುದರಿಂದ ಹೇಗೆ ಸಾಧ್ಯ ಎಂಬುದನ್ನು ಯೋಚಿಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
ಆಂತರಿಕ ಅಂಕ ನಮೂದಿಸಲು ಸೂಚಿಸಿದ್ದೇವೆ. ಕನಿಷ್ಠ ಅಂಕದ ಮಾನದಂಡದ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಪಾಸಾಗಳು ಶೇ.35 ಅಂಕ ಪಡೆಯಬೇಕು ಎಂಬ ನಿಯಮ ಇದ್ದೇ ಇರುತ್ತದೆ. ಸದ್ಯವೇ ವಿಸ್ತೃತ ಮಾರ್ಗಸೂಚಿ ಬಿಡುಗಡೆ ಮಾಡಲಿದ್ದೇವೆ ಎನ್ನುತ್ತಾರೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ.ಸುಮಂಗಳಾ.
ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಸಾಲಗಾರರಿಗೆ ಕಿರುಕುಳ: ಮೈಕ್ರೋ ಫೈನಾನ್ಸ್ ವ್ಯವಸ್ಥಾಪಕನ ಬಂಧನ
Bharat Mobility Expo: 2 ಐಷಾರಾಮಿ ಇವಿ ಬಿಡುಗಡೆ ಮಾಡಿದ ಜೆಎಸ್‌ಡಬ್ಲ್ಯೂ ಎಂಜಿ
B. Y. Vijayendra: ನನ್ನನ್ನು ಟಾರ್ಗೆಟ್ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ
Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ
CM Siddaramaiah: ಯತ್ನಾಳ್ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.