ಯಾವ ಮುಖ ಇಟ್ಟುಕೊಂಡು ಉತ್ಸವ ಮಾಡುತ್ತೀರಿ : ಸಾಧನಾ ಸಮಾವೇಶಕ್ಕೆ ಕಾಂಗ್ರೆಸ್
ಬಿಜೆಪಿ ಸರಕಾರಕ್ಕೆ 'ಜನಾಕ್ರೋಶೋತ್ಸವ'ದ ದರ್ಶನವಾಗಿದೆ
Team Udayavani, Jul 27, 2022, 6:23 PM IST
ಬೆಂಗಳೂರು: ಸಾಧನಾ ಸಮಾವೇಶ ನಡೆಸಲು ಭರದ ಸಿದ್ಧತೆಯಲ್ಲಿದ್ದ ಬಿಜೆಪಿಗೆ ಸಿಡಿಲಾಘಾತದಂತೆ ಕಾರ್ಯಕರ್ತನ ಹತ್ಯೆ ಬಂದೆರಗಿದ್ದು, ಸ್ವಪಕ್ಷದ ಹಲವು ಕಾರ್ಯಕರ್ತರು, ಶಾಸಕರೇ ರಾಜೀನಾಮೆ ನೀಡಿದ್ದು, ನೀಡಲು ಸಿದ್ಧವಾಗಿರುವುದು ವಿಪಕ್ಷಗಳಿಗೆ ದೊಡ್ಡ ಅಸ್ತ್ರವಾಗಿದ್ದು, ಕಾಂಗ್ರೆಸ್ ಸರಣಿ ಟ್ವೀಟ್ ಗಳ ಮೂಲಕ ಆಕ್ರೋಶ ಹೊರ ಹಾಕಿದೆ.
ಬಿಜೆಪಿ ಸರ್ಕಾರ ಇಷ್ಟು ದಿನ ಜನವಿರೋಧಿ ನೀತಿಗಳಿಂದ ಜನಸಾಮಾನ್ಯರ ಆಕ್ರೋಶವನ್ನು ಎದುರಿಸುತ್ತಿತ್ತು. ಈಗ ತಮ್ಮದೇ ಕಟ್ಟರ್ ಕಾರ್ಯಕರ್ತರ ಆಕ್ರೋಶ ಎದುರಿಸುತ್ತಿದೆ. ಬಿಜೆಪಿ ಭ್ರಷ್ಟೋತ್ಸವ ದ ಮೆರವಣಿಗೆಯನ್ನೇ ನಡೆಸುತ್ತಿರುವ ಸರ್ಕಾರದ ವೈಫಲ್ಯಗಳಿಗೆ ಇದಕ್ಕಿಂತ ಬೇರೆ ಇನ್ಯಾವ ಸಾಕ್ಷಿಯೂ ಬೇಡ.ಅಲ್ಲವೇ ಎಂದು ಪ್ರವೀಣ್ ನೆಟ್ಟಾರು ಅಂತಿಮ ಯಾತ್ರೆಯ ವೇಳೆ ಬಿಜೆಪಿ ಮತ್ತು ಹಿಂದೂಪರ ಕಾರ್ಯಕರ್ತರ ಆಕ್ರೋಶದ ವಿಡಿಯೋ ವನ್ನು ಟ್ವೀಟ್ ಮಾಡಿದೆ.
ಅತಿಯಾದರೆ ಅಮೃತವೂ ವಿಷವಾಗುತ್ತದೆ ಎನ್ನುವಂತೆ ಬಿಜೆಪಿ ಬಿತ್ತಿದ ದ್ವೇಷ ಬೀಜ ಅತಿಯಾಗಿ ಬಿಜೆಪಿಯನ್ನೇ ಸುಡುತ್ತದೆ, ಇದು ನಿಶ್ಚಿತ.ಬಿಜೆಪಿ ಜನೋತ್ಸವ ನಡೆಸುವುದಲ್ಲ, ಜನಾಕ್ರೋಶೋತ್ಸವ ಎದುರಿಸುತ್ತಿದೆ. ಸರ್ಕಾರದ ವೈಫಲ್ಯಕ್ಕೆ ಅವರದ್ದೇ ಪಕ್ಷದ ಕಾರ್ಯಕರ್ತರು ಕನ್ನಡಿ ಹಿಡಿದಿದ್ದಾರೆ ಎಂದು ಬೆಳ್ಳಾರೆಯಲ್ಲಿ ಹಿಂದೂ ಪರ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ ವಿಡಿಯೋ ವನ್ನು ಟ್ವೀಟ್ ಮಾಡಿದೆ.
ಪ್ರವೀಣ್ ಹತ್ಯೆ ಹಿನ್ನೆಲೆಯಲ್ಲಿ ಯಾರೇ ಸಮಾಜವನ್ನು ಪ್ರಚೋದನೆ ಮಾಡಲು ಪ್ರಯತ್ನಿಸುವವರನ್ನು ಮುಲಾಜಿಲ್ಲದೆ ನಿಗ್ರಹಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಇನ್ನಷ್ಟು ಅನಾಹುತಗಳಿಗೆ ಕಾರಣವಾಗದಂತೆ ನೋಡಿಕೊಳ್ಳಬೇಕಿದೆ. ಜನೋತ್ಸವ ಎನ್ನುತ್ತಿದ್ದ ಬಿಜೆಪಿ ಸರ್ಕಾರಕ್ಕೆ ಜನಾಕ್ರೋಶೋತ್ಸವದ ದರ್ಶನವಾಗಿದೆ ಎಂದು ಟ್ವೀಟ್ ಮೂಲಕ ಕುಟುಕಿದೆ.
ಸರ್ಕಾರದ ವೈಫಲ್ಯಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು? ಬೆಳ್ಳಾರೆಯ ಪ್ರವೀಣ್ ಹತ್ಯೆ ಅತ್ಯಂತ ಆಘಾತಕಾರಿಯಾದುದು, ಪೊಲೀಸರು ಶೀಘ್ರವಾಗಿ ಕೊಲೆಗಾರರನ್ನು ಬಂಧಿಸಿ, ತನಿಖೆ ನಡೆಸಬೇಕು, ಯಾವುದೇ ಅಹಿತಕರ ವಾತಾವರಣಕ್ಕೆ ಆಸ್ಪದ ಕೊಡದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸರ್ಕಾರದ್ದು ಎಂದು ಟ್ವೀಟ್ ನಲ್ಲಿ ಬರೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.