ರಾಜ್ಯ ಸರ್ಕಾರದ ವಿರುದ್ಧ ಮುಗಿಬೀಳಲು ಕಾಂಗ್ರೆಸ್‌ ತೀರ್ಮಾನ

Team Udayavani, Sep 13, 2022, 10:40 PM IST

 ರಾಜ್ಯ ಸರ್ಕಾರದ ವಿರುದ್ಧ ಮುಗಿಬೀಳಲು ಕಾಂಗ್ರೆಸ್‌ ತೀರ್ಮಾನ

ಬೆಂಗಳೂರು: ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ವೈಫ‌ಲ್ಯ, 40 ಪರ್ಸೆಂಟ್‌ ಭ್ರಷ್ಟಾಚಾರ, ಪಿಎಸ್‌ಐ ಹಗರಣ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹಗರಣ ಸೇರಿ ರಾಜ್ಯ ಸರ್ಕಾರದ ವಿರುದ್ಧ ಅಧಿವೇಶನದಲ್ಲಿ ಪ್ರತಿ ದಿನವೂ ಮುಗಿಬೀಳಲು ಕಾಂಗ್ರೆಸ್‌ ತೀರ್ಮಾನಿಸಿದೆ.

ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ಸಮ್ಮುಖದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ, ಸರ್ಕಾರದ ವೈಫ‌ಲ್ಯಗಳ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ನಿರಂತರ ಹೋರಾಟ ಮಾಡಲು ನಿರ್ಧರಿಸಲಾಯಿತು.

ವಿಧಾನಪರಿಷತ್‌ ಹಾಗೂ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಸದಸ್ಯರು ಚರ್ಚೆ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ತಮ್ಮ ತಮ್ಮ ಕ್ಷೇತ್ರಗಳಲ್ಲಿನ ಸಮಸ್ಯೆ ಪ್ರಸ್ತಾಪಿಸಬೇಕು ಎಂದು ಸೂಚನೆ ನೀಡಲಾಯಿತು.

ಬೆಂಗಳೂರಿನ ಶಾಸಕರು ಪ್ರಮುಖವಾಗಿ ನಗರದಲ್ಲಿ ಇತ್ತೀಚೆಗೆ ಮಳೆಯಿಂದ ಉಂಟಾದ ಅನಾಹುತದ ಬಗ್ಗೆ ಗಮನಸೆಳೆಯಬೇಕು. ಪ್ರವಾಹ ಪರಿಹಾರ ಸಿಗದ ಬಗ್ಗೆ ಶಾಸಕರು ಚರ್ಚೆ ವೇಳೆ ಅವಕಾಶ ಸಿಕ್ಕರೆ ತಮ್ಮ ತಮ್ಮ ಕ್ಷೇತ್ರಗಳಲ್ಲಿನ ಸ್ಥಿತಿಗತಿ ಸದನದ ಗಮನಕ್ಕೆ ತರಬೇಕು ಎಂದು ತಿಳಿಸಲಾಯಿತು.

ಕಾಂಗ್ರೆಸ್‌ ಸರ್ಕಾರದ ಅವಧಿಯ ಅಕ್ರಮಗಳ ಬಗ್ಗೆ ತನಿಖೆ ಮಾಡಿಸುವುದಾಗಿ ಬಿಜೆಪಿ ಹೇಳಿರುವ ಕುರಿತು ಸಭೆಯಲ್ಲಿ ಪ್ರಸ್ತಾಪವಾಗಿ, ನಾವೇ ತನಿಖೆಗೆ ಕೊಡಿ ಎಂದು ಕೇಳ್ಳೋಣ. ಯಾವುದೇ ಹಗರಣ ಆಗಿದ್ದರೂ ತನಿಖೆಗೆ ಸಿದ್ಧವಿದ್ದೇವೆ ಎಂದು ಹೇಳ್ಳೋಣ. ಆ ಮೂಲಕ ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸೋಣ. ಬಿಜೆಪಿ ಆರೋಪಗಳಿಗೆ ದಾಖಲೆ ಸಹಿತ ತಿರುಗೇಟು ನೀಡೋಣ ಎಂದು ಸಿದ್ದರಾಮಯ್ಯ ಹೇಳಿದರು ಎಂದು ಮೂಲಗಳು ತಿಳಿಸಿವೆ.

ಎಂಟು ವರ್ಷಗಳಲ್ಲಿ ನರೇಂದ್ರ ಮೋದಿ , ಮೂರು ವರ್ಷಗಳಲ್ಲಿ ರಾಜ್ಯ ಬಿಜೆಪಿ ಸರ್ಕಾರ ಮಾಡಿದ್ದೇನು ಅಭಿಯಾನ, ಉತ್ತಮ ಬೆಂಗಳೂರು ಅಭಿಯಾನ, ಭ್ರಷ್ಟಾಚಾರದ ಬಗ್ಗೆ ಉತ್ತರ ಹೇಳಿ ಅಭಿಯಾನ ಯಶಸ್ವಿಗೊಳಿಸಬೇಕು. ಭಾರತ್‌ ಜೋಡೋ ಯಾತ್ರೆ ಯಶಸ್ವಿಗೆ ಎಲ್ಲರೂ ಶ್ರಮವಹಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು ಎಂದು ತಿಳಿದು ಬಂದಿದೆ.

ಎಂ.ಬಿ.ಪಾಟೀಲ್‌, ಡಾ.ಜಿ.ಪರಮೇಶ್ವರ್‌, ಆರ್‌.ವಿ.ದೇಶಪಾಂಡೆ, ರಾಮಲಿಂಗಾರೆಡ್ಡಿ, ಸಲೀಂ ಅಹಮದ್‌, ಈಶ್ವರ್‌ ಖಂಡ್ರೆ ಸಭೆಯಲ್ಲಿ ಭಾಗವಹಿಸಿದ್ದರು.

ಟಾಪ್ ನ್ಯೂಸ್

Farmers Protest: ರೈತ ದಲ್ಲೇವಾಲ್‌ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್‌ನ ನಡೆಗೆ ಸುಪ್ರೀಂ ಗರಂ

Farmers Protest: ರೈತ ದಲ್ಲೇವಾಲ್‌ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್‌ನ ನಡೆಗೆ ಸುಪ್ರೀಂ ಗರಂ

1-DYSP

ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್‌ ಕಿಶೋರ್‌ ನಿರಶನ

Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್‌ ಕಿಶೋರ್‌ ನಿರಶನ

RBI: 2000ರೂ. ಮುಖಬೆಲೆಯ 6,691 ಕೋಟಿಯ ನೋಟು ವಾಪಸಾಗಿಲ್ಲ

RBI: 2000ರೂ. ಮುಖಬೆಲೆಯ 6,691 ಕೋಟಿಯ ನೋಟು ವಾಪಸಾಗಿಲ್ಲ

Employment Rate: ಯುಪಿಎ 2.9 ಕೋಟಿ,ಮೋದಿ 17.9 ಕೋಟಿ ಉದ್ಯೋಗ ಸೃಷ್ಟಿ: ಸಚಿವ

Employment Rate: ಯುಪಿಎ 2.9 ಕೋಟಿ,ಮೋದಿ 17.9 ಕೋಟಿ ಉದ್ಯೋಗ ಸೃಷ್ಟಿ: ಸಚಿವ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-DYSP

ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ

CT Ravi

ನೇತ್ರಾವತಿ ನದಿಯಲ್ಲಿ ಗೋಮಾಂಸ ಪತ್ತೆ ಮತಾಂಧತೆ ತೋರಿಸುತ್ತದೆ: ಸಿ.ಟಿ. ರವಿ ಕಿಡಿ

Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ

Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ

Raichur: ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆಗೆ ಹೊರಟ ಮುಸ್ಲಿಂ ವ್ಯಕ್ತಿ

Raichur: ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆಗೆ ಹೊರಟ ಮುಸ್ಲಿಂ ವ್ಯಕ್ತಿ

ಮಗಳ ಮೇಲೆ ಎರಗಳು ಹೋದ ಪತಿಯನ್ನೇ ಹತ್ಯೆಗೈದು ದೇಹವನ್ನು ತುಂಡರಿಸಿ ವಿಲೇವಾರಿ ಮಾಡಿದ ಪತ್ನಿ

ಮಗಳ ಮೇಲೆ ಎರಗಲು ಹೋದ ಪತಿಯನ್ನೇ ಹತ್ಯೆಗೈದು ದೇಹವನ್ನು ತುಂಡರಿಸಿ ವಿಲೇವಾರಿ ಮಾಡಿದ ಪತ್ನಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Farmers Protest: ರೈತ ದಲ್ಲೇವಾಲ್‌ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್‌ನ ನಡೆಗೆ ಸುಪ್ರೀಂ ಗರಂ

Farmers Protest: ರೈತ ದಲ್ಲೇವಾಲ್‌ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್‌ನ ನಡೆಗೆ ಸುಪ್ರೀಂ ಗರಂ

Brahmavar

Kumbhashi: ಅಪಘಾತದ ಗಾಯಾಳು ಆತ್ಮಹ*ತ್ಯೆ

1-DYSP

ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.