ಪರಮೇಶ್ವರ್ ಪ್ರತಿಪಕ್ಷ ನಾಯಕರಾದರೆ ಕಾಂಗ್ರೆಸ್ ನಾಶ
Team Udayavani, Oct 3, 2019, 3:00 AM IST
ತುಮಕೂರು: “ನಮ್ಮ ಜಿಲ್ಲೆಯವನು ವಿರೋಧ ಪಕ್ಷದ ನಾಯಕನಾಗಲು ಹೊರಟಿದ್ದಾನೆ. ಅವನೇನಾದರೂ ವಿರೋಧ ಪಕ್ಷದ ನಾಯಕನಾದರೆ ಕಾಂಗ್ರೆಸ್ ಸಮಾಧಿಯಾಗಲಿದೆ’ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ, ಮಾಜಿ ಡಿಸಿಎಂ ಜಿ.ಪರಮೇಶ್ವರ್ ವಿರುದ್ಧ ಪರೋಕ್ಷವಾಗಿ ಏಕವಚನ ದಲ್ಲಿಯೇ ಹರಿಹಾಯ್ದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಕೆಲವರು ಲಾಬಿ ನಡೆಸಿ ಲೀಡರ್ ಆಗಲು ಹೊರಟಿದ್ದಾರೆ.
ಅವರಿಗೆ 10 ಓಟ್ ಹಾಕಿಸುವ ಯೋಗ್ಯತೆ ಇಲ್ಲ. ಸಿದ್ದರಾಮಯ್ಯನವರನ್ನು ಕಡೆಗಣಿಸಿದರೆ ಕಾಂಗ್ರೆಸ್, ರಾಜ್ಯದಲ್ಲಿ ಸೊನ್ನೆಯಾಗಲಿದೆ ಎಂದರು. “ನನ್ನ ಏಳಿಗೆ ಸಹಿಸದ ಕೆಲವರು ಸುಳ್ಳು ಆರೋಪ ಹೊರಿಸಿ ಬ್ಯಾಂಕ್ ಸೂಪರ್ ಸೀಡ್ ಮಾಡಿಸಿ, ಅಧ್ಯಕ್ಷ ಸ್ಥಾನದಿಂದ ಇಳಿಸುವ ಷಡ್ಯಂತ್ರ ಮಾಡಿದ್ದರು. ಆಗ ಬಿಎಸ್ವೈ ಧೈರ್ಯ ತುಂಬಿದ್ದರಿಂದ ಮತ್ತೆ ಅಧ್ಯಕ್ಷನಾಗಿದ್ದೇನೆ’ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.