ಮೊದಲ ದಿನದಿಂದಲೂ ಕಾಂಗ್ರೆಸ್ ಸರಕಾರ ಗೊಂದಲದಲ್ಲಿದೆ: ಬೊಮ್ಮಾಯಿ ವಾಗ್ದಾಳಿ
ಯಾರ ಪರವಾಗಿದೆ ಸರಕಾರ?... ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು
Team Udayavani, Jul 28, 2023, 4:51 PM IST
ಹಾವೇರಿ : ರಾಜ್ಯದಲ್ಲಿ ವ್ಯಾಪಕ ಮಳೆಯಿಂದಾಗಿ 40 ಕ್ಕಿಂತ ಹೆಚ್ಚು ಜನರ ಸಾವಾಗಿದೆ, ಮಳೆ ಹಾನಿ ಪ್ರದೇಶಕ್ಕೆ ಸರಕಾರದ ಪ್ರತಿನಿಧಿಗಳು ಯಾರು ಭೇಟಿ ಕೊಡುತ್ತಿಲ್ಲ, ಸರಕಾರವೆ ಗೊಂದಲದಲ್ಲಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿ ಕಾರಿದ್ದಾರೆ.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿಎಂ, ‘ಜೂನ್ ತಿಂಗಳಲ್ಲಿ ಮಳೆ ಇಲ್ಲದೆ ಬಿತ್ತನೆ ಮಾಡಿದಾಗ ಬೆಳೆ ಹಾನಿಯಾಗಿತ್ತು. ಈಗ ಅತಿ ಹೆಚ್ಚು ಮಳೆಯಿಂದಾಗಿ ಬೆಳೆ ಹಾನಿಯಾಗಿದೆ. ಕಳೆದ ಹತ್ತು ದಿನಗಳಲ್ಲಿ ವ್ಯಾಪಕ ಮಳೆಯಾಗಿದೆ, ಮನೆಗಳು ಬಿದ್ದಿದೆ.ಹಾನಿಯಾಗಿರುವುದಕ್ಕೆ ತುರ್ತು ಪರಿಹಾರ ಕೊಡಬೇಕು. ನಮ್ಮಸರಕಾರ ಕೊಟ್ಟಂತೆ ಮನೆ ಪರಿಹಾರ ಕೊಡಬೇಕು. ಬೆಳೆ ನಾಶಕ್ಕೆ ಸರ್ವೆ ಮಾಡಿ ನಮ್ಮ ಸರಕಾರ ಕೊಟ್ಟ ಪರಿಹಾರವನ್ನೆ ಕೊಡಬೇಕು. ಎರಡೂವರೆ ಸಾವಿರ ಕೋಟಿ ಪರಿಹಾರವನ್ನ ನಾವು ನೀಡಿದ್ದೆವು ಎಂದರು.
ಸಿಎಂಗೆ ತಿರುಗೇಟು
”ಸೂಚ್ಯಂಕ ದಲ್ಲಿ ಹಾವೇರಿ ಜಿಲ್ಲೆ ಹಿಂದಿದೆ, ಸಿಎಂ ಆಡಳಿತ ಮಾಡಿರುವ ಜಿಲ್ಲೆ ಎಂದು ಸಿದ್ದರಾಮಯ್ಯ ನವರು ಹಾವೇರಿಗೆ ಬಂದಾಗ ಹೇಳಿದ್ದಾರೆ,ಹಿಂದೆ ನೀವು 2013 ರಲ್ಲಿ ಸಿಎಂ ಆಗಿದ್ದಾಗ ಹಾವೇರಿಗೆ ಬಂದಿದ್ದ ಮೆಡಿಕಲ್ ಕಾಲೇಜ್ ಗದಗ ಜಿಲ್ಲೆಗೆ ಕೊಟ್ಟಿರಿ. ಹಾವೇರಿಗೆ ಇಂಜಿನಿಯರ್ ಕಾಲೇಜು, ಮೆಡಿಕಲ್ ಕಾಲೇಜು ಕೊಟ್ಟಿದ್ದು ನಾವು, ನೀರಾವರಿ ಯೋಜನೆ ಕೊಟ್ಟಿದ್ದು ನಮ್ಮ ಸರಕಾರ.ಜಿಲ್ಲೆಯ ಅಭಿವೃದ್ಧಿಗೆ ನಾನು ಏನೆಲ್ಲ ಮಾಡಬೇಕು ಎಲ್ಲವನ್ನ ಮಾಡಿದ್ದೇನೆ. ಜಿಲ್ಲೆಯಲ್ಲಿ ನಡೆದಿರುವ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದರು.
ಮೀಸಲಾತಿ ವಿಚಾರದಲ್ಲಿ ಇವರಿಂದ ನಾವು ಪಾಠ ಕಲಿಯಬೇಕಿಲ್ಲ. ಯಾವುದೇ ಇಲಾಖೆಯ ಕಾಮಗಾರಿ ಯಲ್ಲಿ ಹಗರಣ ಆಗಿದ್ದರೆ ಎಸ್ ಐಟಿ ತನಿಖೆಗೆ ಕೊಡಲಿ. ಸದನದಲ್ಲಿಯೂ ಇದರ ಬಗ್ಗೆ ಹೇಳಿದ್ದೇನೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ ಎಂದರು.
”ಮೊದಲ ದಿನದಿಂದಲು ಈ ಸರಕಾರ ಗೊಂದಲದಲ್ಲಿದೆ. ಶಾಸಕರು ಮಂತ್ರಿಗಳ ನಡುವೆ ಸಮನ್ವಯ ಇಲ್ಲದ್ದು ಸ್ಪಷ್ಟವಾಗಿದೆ. ತೆಪೆ ಹಚ್ಚುವ ಕೆಲಸ ಸಿಎಂ ಮಾಡಿದ್ದಾರೆ.ಮೀಟಿಂಗ್ ಮಾಡಿದ್ದೇ ಗೊಂದಲ ಇರುವುದರಿಂದ, ಎಲ್ಲವು ಸರಿಯಿದ್ದಿದ್ದರೆ ಹೈಕಮಾಂಡ್ ಯಾಕೆ ಬುಲಾವ್ ಮಾಡುತ್ತಿತ್ತು?. ನಿನ್ನೆ ಮೀಟಿಂಗ್ ನಲ್ಲಿ ಯಾವುದಕ್ಕೂ ಪರಿಹಾರ ಸಿಕ್ಕಿಲ್ಲ” ಎಂದರು.
”ಅನುದಾನ ಕೊಡುವುದರಲ್ಲಿ ಗೊಂದಲ, ಗ್ಯಾರಂಟಿ ಅನುಷ್ಠಾನ ದಲ್ಲಿ ಗೊಂದಲ, ಆಡಳಿತದಲ್ಲಿ ಗೊಂದಲ, ಸರಕಾರದಲ್ಲಿ ಬಹಳ ದೊಡ್ಡ ಭಿನ್ನಾಭಿಪ್ರಾಯ ಇದೆ, ಶಾಸಕರನ್ನ ಸಮಾಧಾನ ಮಾಡುವ ಕೆಲಸ ಸಿಎಂ ಮಾಡಿದ್ದಾರೆ. ಈ ಸರಕಾರ ಪ್ರಾರಂಭದಿಂದಲು, ಗೊಂದಲದಲ್ಲಿದೆ, ಮತ್ತಷ್ಟು ಗೊಂದಲ ಮಾಡುತ್ತಿದೆ” ಎಂದರು.
” ಉಡುಪಿ ಖಾಸಾಗೋ ಕಾಲೇಜ್ ವಿಡಿಯೋ ಪ್ರಕರಣದಲ್ಲಿ ಗೃಹ ಸಚಿವರು ಹೆಣ್ಣು ಮಕ್ಕಳ ವಿಚಾರದಲ್ಲಿ ಇಷ್ಟು ಹಗುರವಾಗಿ ಮಾತನಾಡಿರುವುದಕ್ಕೆ ಇಡೀ ಸರಕಾರ ನಾಚಬೇಕು, ತಲೆಬಾಗಬೇಕು.ಹೆಣ್ಣು ಮಕ್ಕಳ ಬಗ್ಗೆ ಸರಕಾರಕ್ಕೆ ಏನು ಗೌರವವಿದೆ? ತನಿಖೆಗು ಮೊದಲೆ ಏನೂ ಆಗಿಲ್ಲ ಅಂದರೆ ಪೊಲೀಸರು ಪ್ರಕರಣ ಮುಚ್ಚಿ ಹಾಕುತ್ತಾರೆ. ಏನು ಇಲ್ಲಾ ಅಂದರೆ ವಾರ ಬಿಟ್ಟು ಎಫ್ ಐ ಆರ್ ಯಾಕೆ ಹಾಕಿದರು?ಎಲ್ಲಾ ಮುಚ್ಚಿ ಹಾಕುವ ಕೆಲಸ ಮಾಡಲಾಗುತ್ತಿದೆ. ಕೆಜಿ ಹಳ್ಳಿ, ಡಿಜೆ ಹಳ್ಳಿ ಮತ್ತು ಹುಬ್ಬಳ್ಳಿ ಪ್ರಕರಣವೇ ಬೇರೆ, ಹೋರಾಟಗಾರರ ಪ್ರಕರಣಗಳು ಬೇರೆ. ಓಲೈಕೆ ರಾಜಕಾರಣಕ್ಕಾಗಿ, ದಂಗೆಕೋರರನ್ನ ಕೈಬಿಡುತ್ತಿರಿ ಅಂದರೆ ಯಾರ ಪರವಾಗಿದೆ ಸರಕಾರ ಎಂದು ಹರಿಹಾಯ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.