BJP ಮಾಸ್ಟರ್ ಪ್ಲಾನ್; ಬೋಪಯ್ಯ ನೇಮಕಕ್ಕೆ “ಕೈ”, ಜೆಡಿಎಸ್ ವಿರೋಧವೇಕೆ?
Team Udayavani, May 18, 2018, 4:49 PM IST
ಬೆಂಗಳೂರು: ಬಿಜೆಪಿ ಶಾಸಕ ಕೆಜಿ ಬೋಪಯ್ಯ ಅವರನ್ನು ರಾಜ್ಯಪಾಲ ವಿಆರ್ ವಾಲಾ ಅವರು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿರುವುದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಆದೇಶ ವಾಪಸ್ ಪಡೆಯಲು ರಾಜ್ಯಪಾಲರಿಗೆ ಮತ್ತೆ ದೂರು ಕೊಡಲು ಕಾಂಗ್ರೆಸ್, ಜೆಡಿಎಸ್ ನಿರ್ಧರಿಸಿದೆ.
ಕೆಜಿ ಬೋಪಯ್ಯ ಅವರ ಮೇಲೆ ಪಕ್ಷಪಾತ ಧೋರಣೆಯ ಆರೋಪವಿದೆ. ಅಲ್ಲದೇ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಆರ್ ವಿ ದೇಶಪಾಂಡೆ ಹಿರಿಯ ಶಾಸಕರಾಗಿದ್ದಾರೆ. ಆದರೆ ರಾಜ್ಯಪಾಲರು ಸಂವಿಧಾನಬದ್ಧ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಬೋಪಯ್ಯ ಅವರನ್ನು ನೇಮಕ ಮಾಡಿರುವುದಾಗಿ ಕಾಂಗ್ರೆಸ್ ದೂರಿದೆ.
ಅತೀ ಹೆಚ್ಚು ಬಾರಿ ಆಯ್ಕೆಯಾದ ಹಿರಿಯ ಶಾಸಕರಿಗೆ ಹಂಗಾಮಿ ಸ್ಪೀಕರ್ ಹುದ್ದೆ ಕೊಡಬೇಕಾಗಿದೆ. ಕೆಜಿ ಬೋಪಯ್ಯ ಹಿರಿಯ ಶಾಸಕರಲ್ಲ, ಕೇವಲ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿರೋಧ ವ್ಯಕ್ತಪಡಿಸಲು ಕಾಂಗ್ರೆಸ್, ಜೆಡಿಎಸ್ ಸಜ್ಜಾಗಿದೆ.
ಕಾಂಗ್ರೆಸ್ – ಜೆಡಿಎಸ್ ಗೆ ಕಾಡುತ್ತಿರುವ ಭಯ ಯಾವುದು?
2011ರಲ್ಲಿ ಸ್ಪೀಕರ್ ಆಗಿದ್ದ ಕೆಜಿ ಬೋಪಯ್ಯ ಅವರು ವಿಧಾನಸಭೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಜೆಡಿಎಸ್ ನಿಂದ ಪಕ್ಷಾಂತರಗೊಂಡಿದ್ದ 7 ಶಾಸಕರನ್ನು ಅನರ್ಹಗೊಳಿಸಿದ್ದರು. ಪ್ರಕರಣ ಹೈಕೋರ್ಟ್, ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ತದನಂತರ ಅನರ್ಹದ ನಿರ್ಧಾರವನ್ನು ಸ್ಪೀಕರ್ ಆಗಿದ್ದ ಕೆಬಿ ಕೋಳಿವಾಡ ಅವರು ಮಾಡಬೇಕೆಂದು ಹೈಕೋರ್ಟ್ ನಿರ್ದೇಶನ ನೀಡಿತ್ತು. ಆದರೆ ಕೋಳಿವಾಡ ಅವರು ಯಾವುದೇ ತೀರ್ಪನ್ನು ಪ್ರಕಟಿಸಿಲ್ಲವಾಗಿತ್ತು.
ಈಗ ಬೋಪಯ್ಯ ಅವರನ್ನು ಬಿಜೆಪಿ ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡುವ ಮೂಲಕ ಅನರ್ಹಗೊಂಡ 7 ಶಾಸಕರಲ್ಲಿ ಮೂವರು ಶಾಸಕರು(ಕಾಂಗ್ರೆಸ್ ಪಕ್ಷದ ಜಮೀರ್ ಅಹ್ಮದ್, ಅಖಂಡ ಶ್ರೀನಿವಾಸ್, ಭೀಮಾ ನಾಯ್ಕ್) ) ಗೆಲುವು ಸಾಧಿಸಿದ್ದಾರೆ. ಹೀಗಾಗಿ ನಾಳೆ ನಡೆಯಲಿರುವ ವಿಶ್ವಾಸಮತ ಯಾಚನೆ ವೇಳೆ ಅನರ್ಹಗೊಳಿಸಬಹುದು ಎಂಬ ಭೀತಿ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ.
ಹಂಗಾಮಿ ಸ್ಪೀಕರ್ ಗೆ ಅನರ್ಹಗೊಳಿಸುವ ಅಧಿಕಾರವಿಲ್ಲ?
ಏಳು ಜೆಡಿಎಸ್ ಬಂಡಾಯ ಶಾಸಕರ ಅನರ್ಹತೆ ವಿಚಾರಕ್ಕೆ ಸಂಬಂಧಿಸಿದಂತೆ, ಹಾಲಿ ವಿಧಾನಸಭಾ ಚುನಾವಣೆಯಲ್ಲಿ ಏಳು ಮಂದಿಯಲ್ಲಿ ಮೂವರು ಶಾಸಕರಾಗಿ(ಜಮೀರ್, ಅಖಂಡ ಶ್ರೀನಿವಾಸ್, ಭೀಮಾ ನಾಯ್ಕ್) ಆಯ್ಕೆಯಾಗಿದ್ದಾರೆ. ಆದರೆ ಹಂಗಾಮಿ ಸ್ಪೀಕರ್ ಗೆ ಈ ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ಇಲ್ಲ ಎಂಬುದು ಕಾನೂನು ತಜ್ಞರ ಅಭಿಪ್ರಾಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.