![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jul 6, 2022, 2:58 PM IST
ಕೋಲಾರ: ನನ್ನ ಕಡಗಣನೆ ಬಗ್ಗೆ ಹೈಕಮಾಂಡ್ ನಾಯಕರು ಹೇಳಬೇಕು, ಅಲ್ಲಿವರೆಗೆ ಅಭಿಪ್ರಾಯ ಸಂಗ್ರಹ ಮಾಡುತ್ತೇನೆ. ಕಾರ್ಯಕರ್ತರು ಹೇಳಿದ ಹಾಗೆ ಮುಂದೆ ಕೇಳುತ್ತೇನೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
ನಾನು ಒಂದು ನಿಲುವು ತೆಗೆದುಕೊಂಡಿದ್ದು, ನಾನು ಕಾಂಗ್ರೆಸ್ ನಲ್ಲಿ 28 ವರ್ಷ ಸಂಸದನಾಗಿದ್ದೇನೆ.ಐವತ್ತು ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿ ಇದ್ದೇನೆ. ಬಹಳಷ್ಟು ಜನ ಮುಖಂಡರು ನನ್ನ ಭೇಟಿ ಮಾಡಿದರು.ನಾನು ಕಾಂಗ್ರೆಸ್ ನಿಷ್ಠಾವಂತ, ಕೆಲವರು ಪಕ್ಷ ಬಿಟ್ಟು ಹೋಗಿ ವಾಪಸ್ಸು ಬಂದಿದ್ದಾರೆ, ನಾರಾಯಣಸ್ವಾಮಿ, ನಂಜೆಗೌಡ, ಬೇರೆ ಕಡೆಯಿಂದ ಪಕ್ಷಕ್ಕೆ ಬಂದಿದ್ದಾರೆ, ರಮೇಶ್ ಕುಮಾರ್ ಕೂಡ ಬೇರೆ ಕಡೆಯಿಂದ ಬಂದಿದ್ದಾರೆ
ಅವರನ್ನು ಸೇರಿಸಿಕೊಳ್ಳುವ ಸಂದರ್ಭದಲ್ಲಿ ನನ್ನನ್ನು ಕೇಳಿ ಸೇರಿಸಿಕೊಂಡರು.ನಾನು ಆಗ ಸಂಸದನಾಗಿದ್ದೆ, ಕೊತ್ತನೂರು ಮಂಜುನಾಥ ಸೇರಿಸಿಕೊಳ್ಳುವ ಸಂಬಂಧ ನನ್ನ ಕೇಳಿ ಅಂದಿದ್ದೆ,ಆದರೆ ನನಗೆ ಹೇಳದೆ ಕೇಳದೆ ಈಗ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಸೌಜನ್ಯಕ್ಕಾದರು ನನ್ನನ್ನು ಕೆಳಬೇಕಿತ್ತು. ಇವರೆಲ್ಲ ಪಕ್ಷ ಬಿಟ್ಟು ಹೋಗಿ ಮತ್ತೆ ಬಂದಿದ್ದಾರೆ. ಇವರಿಂದ ಕಾಂಗ್ರೆಸ್ ಕೋಲಾರದಲ್ಲಿ ಗೆಲ್ಲುತ್ತದೋ? ಬರುತ್ತದೆ ಅನ್ನೋದಾದರೆ ನನ್ನ ಅಭ್ಯಂತರ ಏನೂ ಇಲ್ಲ ಎಂದರು.
ಹೈಕಮಾಂಡ್ ನಾಯಕರು ಕೂಡ ನನಗೆ ನೋವು ಮರೆಯುವಂತೆ ಹೇಳಿದರು. ನನ್ನ ಬಿಟ್ಟು ಕಾಂಗ್ರೆಸ್ ಗೆ ಮಂಜುನಾಥ ಮತ್ತುಎಂ.ಸಿ ಸುಧಾಕರ್ ಸೇರಿಸಿಕೊಂಡಿದ್ದಾರೆ. ನಾನು ಯಾವ ಪಕ್ಷಕ್ಕೆ ಹೋಗುವುದಿಲ್ಲ. ಕಾಂಗ್ರೆಸ್ ನಲ್ಲೆ ಉಳಿಯುತ್ತೇನೆ. ಹೈಕಮಾಂಡ್ ಏನು ಹೇಳುತ್ತದೆ ಎಂದು ಕೇಳುತ್ತೇನೆ. ಐದು ಲಕ್ಷ ಮತತಾದರ ಬಳಿಗೆ ನಾನು ಹೋಗುತ್ತೇನೆ. ಇವತ್ತಿನ ಪರಿಸ್ಥಿತಿ ಬಗ್ಗೆ ಹೇಳುತ್ತೇನೆ. ಸಮಯಕ್ಕಾಗಿ ನಾನು ಕಾಯುತ್ತೇನೆ. ತಾಲೂಕು ಪ್ರವಾಸ ಮಾಡಿ ಅಭಿಪ್ರಾಯ ಸಂಗ್ರಹ ಮಾಡುತ್ತೇನೆ ಎಂದರು.
ರಮೇಶ್ ಕುಮಾರ್ ಒಬ್ಬ ಶಕುನಿ. ಜನರು ಇದ್ದಾರೆ, ಧರ್ಮವೂ ಇದೆ. ಇದೆಲ್ಲದಕ್ಕೂ ಕಾಲ ಬರಲಿದೆ. ಅವರು ಏಕಪಾತ್ರ ಅಭಿನಯ ಮಾಡುತ್ತಾರೆ.ಎಲ್ಲಾ ಪಾತ್ರಗಳನ್ನೂ ಅವರೇ ಮಾಡುತ್ತಾರೆ. ಸಿದ್ದರಾಮಯ್ಯಗೆ ಅವರ ಮೇಲೆ ಯಾಕೆ ವಿಶ್ವಾಸ ಇದೆಯೋ ಗೊತ್ತಿಲ್ಲ. ಇದನ್ನ ಅವರನ್ನೇ ಕೇಳಬೇಕು. ಬಿಜೆಪಿಗೆ ಹೋಗಿ ಕಾಂಗ್ರೆಸ್ ಗೆ ಬರುತ್ತಾರೆ. ಇವರಿಗೆ ಮಾನ ಮರ್ಯಾದೆ ಇಲ್ಲ. ಯಾಕೆ ಕಾಂಗ್ರೆಸ್ ಗೆ ಬಂದಿದ್ದಾರೆ. ರಾಹುಲ್ ಗಾಂಧಿಯವರಿಗೆ ಸತ್ಯವನ್ನ ಮುಚ್ಚಿಟ್ಟು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ದೇವೇಗೌಡ ಮೇಲೆ ಪೂಜ್ಯ ಭಾವನೆ ಇದೆ. ಆದರೆ ನಾನು ಯಾವುದೇ ಪಕ್ಷಕ್ಕೆ ಸೇರುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಉಳಿಯುತ್ತೇನೆ ಎಂದರು.
ಮುನಿಸ್ವಾಮಿ ಸಂಸದರಾಗಿ ಆಯ್ಕೆಯಾದ ಬಳಿಕ ರಮೇಶ್ ಕುಮಾರ್ ಮತ್ತು ಗಡ್ಕರಿ ಭೇಟಿ ಮಾಡಿದ್ದರು. ಮುನಿಸ್ವಾಮಿ ಜೊತೆ ಸೇರಿ ರಮೇಶ್ ಕುಮಾರ್, ನಿತಿನ್ ಗಡ್ಕರಿ ಭೇಟಿಯಾಗಿದ್ದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿದ್ದಕ್ಕೆ ಭೇಟಿ ಮಾಡಿದರು. ಆಗ ಬಿಜೆಪಿ ಗೆಲ್ಲಿಸಿ, ಈಗ ಕಾಂಗ್ರೆಸ್ ಗೆಲ್ಲಿಸಬೇಕು ಅಂತಿದ್ದಾರೆ. ಇದರ ಬಗ್ಗೆ ಹೈಕಮಾಂಡ್ ನಾಯಕರು ಮಾತನಾಡಬೇಕು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಪೋಟೋ ತೋರಿಸಿ ಮುನಿಯಪ್ಪ ತೀವ್ರ ವಾಗ್ದಾಳಿ ನಡೆಸಿದರು.
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
You seem to have an Ad Blocker on.
To continue reading, please turn it off or whitelist Udayavani.