ವಿಧಾನಪರಿಷತ್ತು: ಈಶ್ವರಪ್ಪ ರಾಜಿನಾಮೆಗೆ ಕಾಂಗ್ರೆಸ್ ಪಟ್ಟು
ಮೂರನೇ ದಿನದ ಕಲಾಪವೂ ಬಲಿ; ಗಲಾಟೆಗೆ ದಿನ ಕಾರ್ಯಕಲಾಪ "ಆಹುತಿ'
Team Udayavani, Feb 19, 2022, 7:30 AM IST
ವಿಧಾನಪರಿಷತ್ತು: ರಾಷ್ಟ್ರಧ್ವಜಕ್ಕೆ ಅಪಚಾರ ಎಸಗಿರುವ ಸಚಿವ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಮುಂದುವರಿಸಿದ್ದರಿಂದ ಶುಕ್ರವಾರದ ಕಲಾಪವೂ ಬಲಿ ಆಯಿತು. ಪ್ರತಿಭಟನೆ, ಗಲಾಟೆ ಸತತ ಮೂರನೇ ದಿನದ ಕಾರ್ಯಕಲಾಪಗಳನ್ನು ಆಹುತಿ ಪಡೆದುಕೊಂಡಿತು.
ಶುಕ್ರವಾರ ಕಲಾಪ ಆರಂಭವಾಗುತ್ತಿದ್ದಂತೆ ಮಾಜಿ ಶಾಸಕ ಮಳ್ಳೂರ್ ಆನಂದರಾವ್ ಅವರ ನಿಧನಕ್ಕೆ ಸಂತಾಪ ಸೂಚನೆ ನಿರ್ಣಯ ಮುಗಿದ ಬಳಿಕ ಸಭಾಪತಿ ಬಸವರಾಜ್ ಹೊರಟ್ಟಿ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡರು. ಆದರೆ, ಕಾಂಗ್ರೆಸ್ ಸದಸ್ಯರು ಇದಕ್ಕೆ ಒಪ್ಪಲಿಲ್ಲ.
ಕಾಂಗ್ರೆಸ್ ಸದಸ್ಯ ಸಲೀಂ ಅಹ್ಮದ್ ಮಾತನಾಡಿ, ಸಚಿವ ಈಶ್ವರಪ್ಪ ರಾಜಿನಾಮೆ ಕೊಡಬೇಕು ಅಲ್ಲಿವರೆಗೆ ಪ್ರತಿಭಟನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದರು. ಆಗ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಈಶ್ವರಪ್ಪ ಅವರನ್ನು ಸಮರ್ಥಿಸಿಕೊಂಡರು. ಸದನದಲ್ಲೇ ಇದ್ದರೂ, ಅಷ್ಟೊಂದು ಗಲಾಟೆ ನಡೆದರೂ ಈಶ್ವರಪ್ಪ ಒಂದೇ ಒಂದು ಮಾತನಾಡಿಲ್ಲ.
ಕಾಂಗ್ರೆಸ್ ವಾದ ಒಪ್ಪದ ಸಭಾಪತಿಯವರು ಪ್ರತಿಭಟನೆ ಕೈಬಿಟ್ಟು ಕಲಾಪ ನಡೆಸಲು ಸಹಕರಿಸಬೇಕು ಎಂದು ಮನವಿ ಮಾಡಿದರು. ಒಪ್ಪದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ಆರಂಭಿಸಿದರು. ಈ ವೇಳೆ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಬಿಜೆಪಿ ಹಾಗೂ ಈಶ್ವರಪ್ಪ ವಿರುದ್ಧ ಘೋಷಣೆ ಕೂಗಿದರು. ಇದರ ಮಧ್ಯೆಯೇ ಪ್ರಶ್ನೋತ್ತರ ಆರಂಭಿಸಲಾಯಿತು. ಮೊದಲ ಪ್ರಶ್ನೆಗೆ ಕರೆದಾಗ ಗಲಾಟೆ ಹೆಚ್ಚಾಯಿತು.
ಈ ಮಧ್ಯೆ ಬಿಜೆಪಿ ಸದಸ್ಯರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಧಿಕ್ಕಾರ ಕೂಗಲಾರಂಭಿಸಿದರು.
ಪ್ರಧಾನಿ ಮೋದಿ ಹಾಗೂ ಗೃಹ ಸಚಿವರ ವಿರುದ್ಧ ಸಲೀಂ ಅಹ್ಮದ್ ಧಿಕ್ಕಾರ ಹೇಳಿದರು. ಸದನದಲ್ಲಿ ಬಾವಿಯೊಳಗಿದ್ದ ಕಾಂಗ್ರೆಸ್ ಸದಸ್ಯರು ತಮ್ಮ ಆಸನಗಳಿಗೆ ಬಂದು ಪ್ರಧಾನಿ, ಗೃಹ ಸಚಿವರ ವಿರುದ್ಧ ಧಿಕ್ಕಾರ ಕೂಗಲು ಆರಂಭಿಸಿದರು. ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಕಾಂಗ್ರೆಸ್ ವಿರುದ್ಧ ಮುಗಿಬಿದ್ದರು. ಗಲಾಟೆ ಹೆಚ್ಚಾಗುತ್ತಿದ್ದಂತೆ ಕಲಾಪವನ್ನು 10 ನಿಮಿಷ ಮುಂದೂಡಲಾಯಿತು.
ಪುನಃ ಕಲಾಪ ಸೇರಿದಾಗ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ದೇಶದ ಪ್ರಧಾನಿ ಹಾಗೂ ಗೃಹ ಮಂತ್ರಿ ವಿರುದ್ಧ ಧಿಕ್ಕಾರ ಕೂಗಿದ ಸಲೀಂ ಅಹ್ಮದ್ ವಿರುದ್ಧ ದೇಶದ್ರೋಹದ ಕೇಸ್ ಅವರನ್ನು ಸದನದಿಂದ ಹೊರಹಾಕಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿ, ಜೈಶ್ರೀರಾಮ್, ಹಿಂದೂ ವಿರೋಧಿ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಈ ವೇಳೆ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಈ ವೇಳೆ ಮಾತಿನ ಚಕಮಕಿ ನಡೆಯಿತು. ಕಲಾಪ ಮುಂದುವರಿಸುವಂತೆ ಜೆಡಿಎಸ್ ಸದಸ್ಯರು ಮನವಿ ಮಾಡಿದರು.
ಸಭಾಪತಿ ಆಕ್ಷೇಪ: ಪ್ರಧಾನಿ ವಿರುದ್ಧ ಧಿಕ್ಕಾರ ಕೂಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ ಪ್ರಧಾನಿ ಇಡೀ ದೇಶಕ್ಕೆ ಸಂಬಂಧಿಸಿದವರು. ಪಕ್ಷ ಆಧರಿಸಿ ಅವರನ್ನು ಟೀಕಿಸುವುದು ನಾನು ಒಪ್ಪುವುದಿಲ್ಲ. ಅದೇ ರೀತಿ ಈ ಸದನದ ಸದಸ್ಯರಲ್ಲದವರ ಹೆಸರು ಪ್ರಸ್ತಾಪಿಸುವುದು ಸರಿಯಲ್ಲ. ಇದೂ ಎರಡೂ ಪಕ್ಷದವರಿಗೂ ಹೇಳುತ್ತಿದ್ದೇನೆ ಎಂದರು. ನಮ್ಮ ಪಕ್ಷದ ಅಧ್ಯಕ್ಷರ ವಿರುದ್ಧ ಧಿಕ್ಕಾರ ಕೂಗಿದರೆ ನಾವು ಸುಮ್ಮನಿರಬೇಕೇ, ಮೊದಲು ಧಿಕ್ಕಾರ ಕೂಗಿದ್ದು ಬಿಜೆಪಿಯವರು ಎಂದು ಕಾಂಗ್ರೆಸ್ ಸದಸ್ಯರು ತಮ್ಮನ್ನು ಸಮರ್ಥಿಸಿಕೊಂಡರು. ಏನೇ ಇರಲಿ ಈ ಸದನದ ಸದಸ್ಯರಲ್ಲದವರ ವಿರುದ್ಧ ಟೀಕೆ ಮಾಡಿರುವುದನ್ನು ಕತಡದಿಂದ ತೆಗೆದುಹಾಕಲಾಗಿದೆ ಎಂದರು ಘೋಷಿಸಿದರು.
ನೋವಿನಿಂದ ಸದನ ಮುಂದೂಡುತ್ತಿದ್ದೇನೆ: ಹೊರಟ್ಟಿ
ಈ ಮಧ್ಯೆ ಮಾಜಿ ಉಪಸಭಾಪತಿ ಹಾಗೂ ಬಿಜೆಪಿ ಸದಸ್ಯ ಎಂ.ಕೆ. ಪ್ರಾಣೇಶ್, ನಿಲುವಳಿ ಸೂಚನೆ ಬಗ್ಗೆ ಸರ್ಕಾರದಿಂದ ಕಾನೂನು ಸಚಿವರು ಸ್ಪಷ್ಟನೆ ಕೊಟ್ಟಿದ್ದಾರೆ. ಸಭಾಪತಿಯವರು ರೂಲಿಂಗ್ ನೀಡಿದ್ದಾರೆ. ಸಭಾಪತಿ ರೂಲಿಂಗ್ ಮೀರಿ ನಡೆದುಕೊಳ್ಳುವುದು ಪೀಠಕ್ಕೆ ಅಗೌರ ತೋರಿದಂತೆ. ಕಾಂಗ್ರೆಸ್ ಸದಸ್ಯರು ಕೇವಲ ರಾಜಕಾರಣ ಮಾಡುತ್ತಿದ್ದಾರೆ. ಅವರ ರಾಜಕಾರಣಕ್ಕೆ ಕಲಾಪ ಬಲಿ ಆಗುವುದು ಬೇಡ. ಪೀಠಕ್ಕೆ ಅಗೌರ ತೋರಿದ ಕಾಂಗ್ರೆಸ್ ಸದಸ್ಯರನ್ನು ನಿಯಂತ್ರಿಸಿ ಅಥವಾ ಸದನದಿಂದ ಹೊರಗೆ ಹಾಕಿ ಸದನ ಮುಂದುವರಿಸಿ ಎಂದು ಮನವಿ ಮಾಡಿದರು. ನಿಮ್ಮ ಮಾತನ್ನು ಒಪ್ಪುತ್ತೇನೆ. ಸಾಕಷ್ಟು ಬಾರಿ ಮನವಿ ಮಾಡಿದ್ದೇನೆ. ಸದನ ಚೆನ್ನಾಗಿ ನಡೆಯಬೇಕು ಎಂಬುದು ನನ್ನ ಆಸೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಬಹಳ ನೋವಿನಿಂದ ಸದನವನ್ನು ಸೋಮವಾರ ಬೆಳಿಗ್ಗೆ 11ಕ್ಕೆ ಮುಂದೂಡುತ್ತಿದ್ದೇನೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ
Ambedkar Row: ಕಾಂಗ್ರೆಸ್ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ
High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್
Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ
Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್.ಷಡಾಕ್ಷರಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ
Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ
ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್ ವಿರುದ್ಧ ತಿರುಗಿ ಬಿದ್ದ ಸಂತರು
Ambedkar Row: ಕಾಂಗ್ರೆಸ್ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ
Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.