Congress MLA; ಸೈಲ್‌ ಬಂಧನ.. ಇಂದು ಶಿಕ್ಷೆ ಪ್ರಮಾಣ ಪ್ರಕಟ: ಏನಿದು ಪ್ರಕರಣ?


Team Udayavani, Oct 25, 2024, 7:10 AM IST

1-aa

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರದ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಹಾಗೂ ಇತರರನ್ನು ದೋಷಿ ಎಂದಿರುವ 82ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಎಲ್ಲ ಆರೋಪಿಗಳನ್ನು ಕೂಡಲೇ ವಶಕ್ಕೆ ಪಡೆಯುವಂತೆ ಸೂಚಿಸಿದೆ.

ಇದರ ಬೆನ್ನಲ್ಲೇ ಸ್ಥಳದಲ್ಲಿದ್ದ ಸಿಬಿಐ ಅಧಿಕಾರಿಗಳು ಶಾಸಕ ಸತೀಶ್‌ ಸೈಲ್‌, ಬೇಲೆಕೇರಿ ಬಂದರಿನ ಉಪ ಸಂರಕ್ಷಣಾ ಧಿಕಾರಿ (ಡೆಪ್ಯುಟಿ ಪೋರ್ಟ್‌ ಕನ್ಸರ್ವೇಟರ್‌) ಮಹೇಶ್‌ ಬಿಳಿಯ, ಲಾಲ್‌ ಮಹಲ್‌ ಕಂಪೆನಿಯ ಮಾಲಕ ಪ್ರೇಮ್‌ ಚಂದ್‌ ಗರ್ಗ್‌, ಶ್ರೀಲಕ್ಷ್ಮೀ ವೆಂಕಟೇಶ್ವರ ಟ್ರೇಡರ್ಸ್‌ ಮಾಲಕ ಖಾರದಪುಡಿ ಮಹೇಶ್‌, ಸ್ವಸ್ತಿಕ್‌ ಕಂಪೆನಿಯ ಮಾಲಕ ಕೆ.ವಿ. ನಾಗರಾಜ್‌, ಗೋವಿಂದರಾಜು, ಆಶಾಪುರ ಕಂಪೆನಿಯ ಮಾಲಕ ಚೇತನ್‌ ಅವರನ್ನು ವಶಕ್ಕೆ ಪಡೆದುಕೊಂಡು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕಳುಹಿಸಿದರು.

ಪ್ರಕರಣ ಸಂಬಂಧ ಶಾಸಕ ಸತೀಶ್‌ ಸೈಲ್‌, ಪೋರ್ಟ್‌ ಅಧಿಕಾರಿ ಮಹೇಶ್‌ ಬಿಳಿಯ ಹಾಗೂ ಇತರೆ ಆರೋಪಿಗಳು ಕೋರ್ಟ್‌ಗೆ ಹಾಜರಾಗಿದ್ದರು. ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ಶಾಸಕರು ಸೇರಿ ಎಲ್ಲ ಆರೋಪಿಗಳು ದೋಷಿ ಎಂದು ಆದೇಶಿಸಿ ಎಲ್ಲರನ್ನೂ ವಶಕ್ಕೆ ಪಡೆಯುವಂತೆ ಸೂಚಿಸಿದರು.

ಇಂದು ಶಿಕ್ಷೆ ಪ್ರಕಟ
ಆರೋಪಿಗಳ ಶಿಕ್ಷೆಯ ಪ್ರಮಾಣದ ತೀರ್ಪನ್ನು ಅ. 25ಕ್ಕೆ ಕೋರ್ಟ್‌ ಕಾಯ್ದಿರಿಸಿದೆ. ಒಂದು ವೇಳೆ ಆರೋಪಿಗಳಿಗೆ 3 ವರ್ಷದ ಒಳಪಟ್ಟು ಶಿಕ್ಷೆ ಘೋಷಣೆ ಮಾಡಿದರೆ ಜಾಮೀನು ಸಿಗುವ ಸಾಧ್ಯತೆ ಇದೆ. ಅದಕ್ಕಿಂತ ಮೇಲ್ಪಟ್ಟ ಶಿಕ್ಷೆ ವಿಧಿಸಿದರೆ ಆರೋಪಿಗಳನ್ನು ಮತ್ತೆ ಜೈಲಿಗೆ ಕಳುಹಿಸಲಾಗುತ್ತದೆ.

6 ಪ್ರಕರಣಗಳಲ್ಲೂ ದೋಷಿ
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 6 ಪ್ರಕರಣಗಳು ದಾಖಲಾಗಿದ್ದವು. ಈಗ ಎಲ್ಲ ಪ್ರಕರಣಗಳ ವಿಚಾರಣೆ ನಡೆಸಿರುವ ಕೋರ್ಟ್‌ ಶಾಸಕ ಸತೀಶ್‌ ಸೈಲ್‌ ಸೇರಿ ಎಲ್ಲ ಆರೋಪಿಗಳು ದೋಷಿ ಎಂದು ಹೇಳಿದೆ. ಈ ಪ್ರಕರಣದಲ್ಲಿ ಆರೋ ಪಿ ಯಾ ಗಿದ್ದ ಐಎಲ್‌ಸಿ ಕಂಪೆನಿಯ ಮಾಲಕ ಸೋಮಶೇಖರ್‌ ಈಗಾ ಗಲೇ ನಿಧನ ಹೊಂದಿದ್ದಾರೆ. ಪ್ರಕರಣ ಸಂಬಂಧ ಸಿಬಿಐ ಪರವಾಗಿ ಸರಕಾರದ ಹಿರಿಯ ಅಭಿಯೋಜಕರಾದ ಕೆ.ಎಸ್‌. ಹೇಮಾ ಮತ್ತು ಶಿವಾನಂದ ಪೆರ್ಲ ವಾದ ಮಂಡಿಸಿದ್ದರು.

ಏನಿದು ಪ್ರಕರಣ?
ಅಂಕೋಲಾ ತಾಲೂಕಿನ ಬೇಲೆಕೇರಿ ವ್ಯಾಪ್ತಿಯಲ್ಲಿ 2009- 2010ರ ಅವಧಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ 200 ಕೋಟಿ ರೂ.ಗ ಳಿಗೂ ಹೆಚ್ಚು ಮೌಲ್ಯದ ಸುಮಾರು 11,312 ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರನ್ನು ಜಪ್ತಿ ಮಾಡಿದ್ದರು. ಈ ಅದಿ ರ ನ್ನು ಬೇಲೆಕೇರಿ ಬಂದರಿನ ಅಧಿ ಕಾ ರಿ ಮಹೇಶ್‌ ಬಿಳಿಯ ಅವರ ಸುಪ ರ್ದಿ ಗೆ ನೀಡಿದ್ದರು. ಆದರೆ ಮಹೇಶ್‌ ಬಿಳಿಯ, ಶಾಸಕ ಸತೀಶ್‌ ಸೈಲ್‌ ಹಾಗೂ ಇತರ ಆರೋಪಿಗಳು ಈ ಅದಿರು ಕಳವು ಮಾಡಲು ಒಳ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿತ್ತು. ಆರೋಪಿಗಳ ಪೈಕಿ ಕೆಲವರು ಜಪ್ತಿ ಮಾಡಿದ ಅದಿರನ್ನು  ಸತೀಶ್‌ ಸೈಲ್‌ಗೆ ಕಡಿಮೆ ಮೊತ್ತಕ್ಕೆ ಅಕ್ರಮವಾಗಿ ಮಾರಾಟ ಮಾಡಿದ್ದರು. ಇನ್ನು ಕೆಲವರು ನೇರವಾಗಿ ವಿದೇಶಕ್ಕೆ ರಫ್ತು ಮಾಡಿದ್ದರು. ಸತೀಶ್‌ ಸೈಲ್‌ ಪ್ರತ್ಯೇಕವಾಗಿ ತಮ್ಮ ಪಿಜಿಎಸ್‌ ಕಂಪೆನಿ, ಮಲ್ಲಿಕಾರ್ಜುನ್‌ ಶಿಪ್ಪಿಂಗ್‌ ಪ್ರೈ.ಲಿ. ಹಾಗೂ ಇತರ ಕಂಪೆನಿಗಳ ಮೂಲಕ ಅದಿರನ್ನು ವಿದೇಶಕ್ಕೆ ರಫ್ತು ಮಾಡಿದ್ದರು ಎನ್ನಲಾಗಿದೆ.

ಈ ಮಾಹಿತಿ ಮೇರೆಗೆ ಕರ್ನಾಟಕ ಲೋಕಾಯುಕ್ತದ ಅಂದಿನ ನಿವೃತ್ತ ನ್ಯಾಯಮೂರ್ತಿಗಳಾದ ಸಂತೋಷ್‌ ಹೆಗ್ಡೆ ನೇತೃತ್ವದಲ್ಲಿ ತನಿಖೆ ನಡೆದಿತ್ತು.

ಟಾಪ್ ನ್ಯೂಸ್

5-biggboss

BBK11: ಬಿಗ್ ಬಾಸ್ ಮನೆಗೆ ಬಂದು ಧಿಕ್ಕಾರ ಹಾಕಿದ ಜನಸಾಮಾನ್ಯರು..! ಅಂಥದ್ದೇನಾಯಿತು?

3-dhyan-chand

Sports Ministry: ಧ್ಯಾನ್‌ಚಂದ್‌ ಪ್ರಶಸ್ತಿ ಬದಲು ಜೀವಮಾನದ ಅರ್ಜುನ ಪ್ರಶಸ್ತಿ

2-shimogga

Shivamogga: ಲಾರಿ- ಬೈಕ್ ಭೀಕರ ಅಪಘಾತ; ಇಬ್ಬರ ಸಾವು, ಓರ್ವ ಗಂಭೀರ

1-horoscope

Horoscope: ಹೊಸ ಅವಕಾಶಗಳು ಅಯಾಚಿತವಾಗಿ ಲಭಿಸುವ ಸಾಧ್ಯತೆ, ವಧೂವರಾನ್ವೇಷಿಗಳಿಗೆ ಅನುಕೂಲ

office- bank

Work from home ಬಿಡಿ, ಆರೋಗ್ಯಕ್ಕಾಗಿ ಆಫೀಸಿಗೆ ನಡಿ: ಅಧ್ಯಯನ

1-aa

Congress MLA; ಸೈಲ್‌ ಬಂಧನ.. ಇಂದು ಶಿಕ್ಷೆ ಪ್ರಮಾಣ ಪ್ರಕಟ: ಏನಿದು ಪ್ರಕರಣ?

1-neol

Tata Sons;ಅಧ್ಯಕ್ಷ ಸ್ಥಾನಕ್ಕೆ ನಿಯೋಲ್‌ ಟಾಟಾ ನೇಮಕ ಅಸಾಧ್ಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

highcort dharwad

Kannada Mandatory; ಕನ್ನಡ ಫ‌ಲಕ ಕಡ್ಡಾಯ: ಹೈಕೋರ್ಟ್‌ ತಾಕೀತು

NDA: ಮೈತ್ರಿ ಅಭ್ಯರ್ಥಿಯಾಗಿ ಇಂದು ನಿಖಿಲ್‌ ನಾಮಪತ್ರ ಸಲ್ಲಿಕೆ

NDA: ಮೈತ್ರಿ ಅಭ್ಯರ್ಥಿಯಾಗಿ ಇಂದು ನಿಖಿಲ್‌ ನಾಮಪತ್ರ ಸಲ್ಲಿಕೆ

Results: 8, 9, 10ನೇ ತರಗತಿಯ ಮಧ್ಯ ವಾರ್ಷಿಕ ಪರೀಕ್ಷೆ ಫ‌ಲಿತಾಂಶಕ್ಕೆ ತಡೆ

Results: 8, 9, 10ನೇ ತರಗತಿಯ ಮಧ್ಯ ವಾರ್ಷಿಕ ಪರೀಕ್ಷೆ ಫ‌ಲಿತಾಂಶಕ್ಕೆ ತಡೆ

CM Siddaramaiah: ನೀತಿಸಂಹಿತೆ ಬಳಿಕ ಜಾತಿ ಗಣತಿ ತೀರ್ಮಾನ

CM Siddaramaiah: ನೀತಿಸಂಹಿತೆ ಬಳಿಕ ಜಾತಿ ಗಣತಿ ತೀರ್ಮಾನ

Siddaramaiah: ಅನಧಿಕೃತ ಕಟ್ಟಡ ಕುಸಿದರೆ ಅಧಿಕಾರಿಗಳೇ ಹೊಣೆ

Siddaramaiah: ಅನಧಿಕೃತ ಕಟ್ಟಡ ಕುಸಿದರೆ ಅಧಿಕಾರಿಗಳೇ ಹೊಣೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

4

Hyderabad: ಯುಪಿ ವಿರುದ್ಧ ಗೆದ್ದ ಬೆಂಗಾಲ್‌

5-biggboss

BBK11: ಬಿಗ್ ಬಾಸ್ ಮನೆಗೆ ಬಂದು ಧಿಕ್ಕಾರ ಹಾಕಿದ ಜನಸಾಮಾನ್ಯರು..! ಅಂಥದ್ದೇನಾಯಿತು?

4

New Delhi: ಸರಕಾರದ ಹಸ್ತಕ್ಷೇಪ ಕುಸ್ತಿ ವಿಶ್ವ ಪಂದ್ಯಾವಳಿಯಿಂದ ಭಾರತ ಹೊರಕ್ಕೆ

4-games

Shootout: ಜರ್ಮನಿಗೆ ಹಾಕಿ ಟೆಸ್ಟ್‌ ಸರಣಿ ದ್ವಿತೀಯ ಪಂದ್ಯ; ಭಾರತ 5-3 ಗೆಲುವು

2

New Delhi: ವನಿತಾ ಹಾಕಿ ಮಾಜಿ ನಾಯಕಿ ರಾಣಿ ರಾಂಪಾಲ್‌ ನಿವೃತ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.