Congress; ಜಾರಕಿಹೊಳಿ ಅವರೊಂದಿಗೆ ಶಾಸಕರು ತೆರಳಿದ್ದು ದಸರಾಕ್ಕೆ:ಎಂ.ಬಿ.ಪಾಟೀಲ್
ಐಟಿ ದಾಳಿಯಲ್ಲಿ ಸಿಕ್ಕ ಹಣ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ್ದು
Team Udayavani, Oct 16, 2023, 8:01 PM IST
ವಿಜಯಪುರ: ರಾಜ್ಯ ಕಾಂಗ್ರೆಸ್ ನಲ್ಲಿ ಭುಗಿಲೆದ್ದು, ಅಸಮಾಧಾನದಿಂದ 20 ಕ್ಕೂ ಹೆಚ್ಚು ಶಾಸಕರು ಮೈಸೂರಿಗೆ ತೆರಳಿ ಸಚಿವ ಸತೀಶ ಜಾರಕಿಹೋಳಿ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ ಎಂಬುದು ಊಹಾಪೋಹ. ಜಾರಕಿಹೊಳಿ ಸೇರಿದಂತೆ ಸಚಿವರು ಮೈಸೂರು ದಸರಾ ಕಾರ್ಯಕ್ರಮಕ್ಕೆ ತೆರಳಿದ್ದಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಪ್ರತಿಕ್ರಿಯಿಸಿದ್ದಾರೆ.
ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೊನ್ನೆ ಸಂಪುಟ ಉಪ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದೆವು. ನಿನ್ನೆಯೇ ಸಚಿವ ಸತೀಶ ಜಾರಕಿಹೋಳಿ ನಾವು ಕೂಡಿದ್ದೇವು. ಮೈಸೂರು ದಸರಾಗೆ ಹೋಗುತ್ತಿದ್ದೇವೆ, ನೀವೂ ಬನ್ನಿ ಎಂದು ನನ್ನನ್ನೂ ಕರೆದರು.
ಸುನೀಲ್ ಹನುಮುಕ್ಕನವರ ಹಾಗೂ ಇತರರ ಬಂದಿದ್ದರು. ಮೈಸೂರು ದಸರಾಗೆ ಹೋದರೆ ಬಂಡಾಯವೇ ಎಂದು ಪ್ರಶ್ನಿಸಿದರು.
ಇಲಾಖೆಯ ಕೆಲಸಕ್ಕಾಗಿ ನಾನು 10 – 15 ದಿನ ವಿದೇಶ ಪ್ರವಾಸದಲ್ಲಿದ್ದೆ. ನಮ್ಮ ಜಿಲ್ಲೆಯಲ್ಲಿ ಭೀಕರ ಬರ ಅಸವರಿಸಿದ್ದು,ಸಭೆ ನಡೆಸಬೇಕಿದೆ. ನೀವು ಹೋಗಿ ಬನ್ನಿ. ನಮಗೆ ದಸರಾದಲ್ಲಿ ಭಾಗಿಯಾಗೋ ಭಾಗ್ಯ ಇಲ್ಲ ಎಂದಿದ್ದೆ ಎಂದು ಸಮಜಾಯಿಷಿ ನೀಡಿದರು.
ಐಟಿ ದಾಳಿಯಲ್ಲಿ ಸಿಕ್ಕ ಹಣ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ್ದು
ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಟೆಂಡರ್ ಕರೆದಿಲ್ಲ. ಹೀಗಾಗಿ ಗುತ್ತೇದಾರರ ಮನೆಯಲ್ಲಿ ಸಿಕ್ಕಿರುವ ಹಣ ಬಿಜೆಪಿ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರದ ಹಣ. ಈಗ ಹೊರ ಬರುತ್ತಿದೆ ಎಂದು ತಿರುಗೇಟು ನೀಡಿದರು.
ಜಪ್ತಿಯಾದ ಕೋಟಿ ಕೋಟಿ ಹಣ ಪಂಚ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಪಕ್ಷದವರು ಬಳಕೆ ಮಾಡಲು ಸಂಗ್ರಹಿಸಿದ್ದು ಎಂದು ಬಿಜೆಪಿ ರಾಜ್ಯ ಅದ್ಯಕ್ಷ ನಳಿನಕುಮಾರ ಕಟೀಲ್ ಆರೋಪಕ್ಕೆ ಕಿಡಿ ಕಾರಿದ ಸಚಿವ ಪಾಟೀಲ, ಐಟಿ ದಾಳಿಯಲ್ಲಿ ಸಿಕ್ಕ ಹಣ ಗುತ್ತಿಗೆದಾರರಿಗೆ ಸೇರಿದ್ದೇ ಹೊರತು ಕಾಂಗ್ರೆಸ್ ಪಕ್ಷಕ್ಕೆ ಇದರಲ್ಲಿ ಯಾವುದೇ ಸಂಬಂಧವಿಲ್ಲ.ನಮ್ಮ ಸರ್ಕಾರ ಬಂದ ಬಳಿಕ ನಾವಿನ್ನು ಯಾವುದೇ ಟೆಂಡರನ್ನೇ ಕರೆದಿಲ್ಲ. ಹೀಗಿರುವಾಗ ಭ್ರಷ್ಟಾಚಾರ ನಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಬಹುಶಃ ಇದು ನಳಿನ್ ಕುಮಾರ್ ಕಟೀಲ್ ಅವರ ಪಕ್ಷದ ಸರ್ಕಾರದ ಶೇ. 40 ಪರ್ಸೆಂಟ್ ಕಮಿಷನ್ ನಡೆದಿತ್ತಲ್ಲ, ಆ ಕಥೆ ಆಗಿರಬೇಕು ಎಂದು ತಿರುಗೇಟು ನೀಡಿದರು.
ಐಟಿ ದಾಳಿಯಲ್ಲಿ ಸಿಕ್ಕ ಹಣದ ಕುರಿತು ತನಿಖೆ ನಡೆಸುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಗ್ರಹಿರುವ ಕುರಿತು ಪ್ರತಿಕ್ರಿಯಿಸಿದ ಅವರು, ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಸದ್ಯ ತನಿಖೆ ನಡೆಸಿದ್ದಾರೆ. ತನಿಖೆಯಲ್ಲಿ ಎಲ್ಲವೂ ಹೊರ ಬರಲಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.