ವೈದ್ಯಕೀಯ ಸೇವೆಯ ಸಹಾಯಹಸ್ತ ಚಾಚಲು ಕಾಂಗ್ರೆಸ್‌ ಸಿದ್ಧತೆ

Team Udayavani, Apr 24, 2021, 1:46 PM IST

ವೈದ್ಯಕೀಯ ಸೇವೆಯ ಸಹಾಯಹಸ್ತ ಚಾಚಲು ಕಾಂಗ್ರೆಸ್‌ ಸಿದ್ಧತೆ

ಬೆಂಗಳೂರು: ಕೋವಿಡ್ ಎರಡನೇ ಅಲೆ ನಿರ್ವಹಣೆ ವಿಚಾರದಲ್ಲಿ ಟೀಕೆಗಳಿಗಿಂತ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಬಾಧಿತರಿಗೆ ಸಹಾಯಹಸ್ತ ಚಾಚುವಂತೆ ಅಖೀಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ನಿರ್ದೆಶನದ ಮೇರೆಗೆ ಕೆಪಿಸಿಸಿ ವೈದ್ಯಕೀಯ ತಂಡ ರಚಿಸಲು ಸಜ್ಜಾಗುತ್ತಿದೆ.

ಕೋವಿಡ್ ನಿಭಾಯಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫ‌ಲ್ಯಗಳ ಬಗ್ಗೆ ಗಮನಹರಿಸುವುದರ ಜತೆಗೆ ಹೊಣೆ ಗಾರಿಕೆ ನಿಭಾಯಿಸುವಂತಹ ಕಾರ್ಯದಲ್ಲಿ ತೊಡಗಬೇಕೆಂದು ಎಐಸಿಸಿರಾಜ್ಯ ಘಟಕಗಳಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 100 ಮಂದಿ ತಜ್ಞ ವೈದ್ಯರು ಹಾಗೂ 1,000 ಸೇವಾದಳಕಾರ್ಯಕರ್ತರನ್ನೊಳಗೊಂಡ ತಂಡ ರಚಿಸಿ ಟೆಲಿ ಮೆಡಿಸಿನ್‌ ಸೇವೆ ಒದಗಿಸಲು ರೂಪು-ರೇಷೆ ಸಿದ್ಧ ಪಡಿಸುತ್ತಿದೆ.

ಮೊದಲ ಹಂತದಲ್ಲಿ ಕೊರೊನಾ ಬಾಧಿತರಿಗೆ ಅವರ ಸುತ್ತಮುತ್ತಲ ಪ್ರದೇಶದಲ್ಲಿರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿರುವ ಹಾಸಿಗೆಗಳ ವಿವರ, ಸಂಪರ್ಕಿಸಬೇಕಾದ ಆರೋಗ್ಯ ಇಲಾಖೆಯ ಸಹಾಯವಾಣಿ ಕೇಂದ್ರಗಳ ಸಂಖ್ಯೆ ನೀಡುವುದು ಹೀಗೆ ಸಮನ್ವಯತೆ ಸಾಧಿಸುವುದು.

ಎರಡನೇ ಹಂತದಲ್ಲಿ ಕಡಿಮೆ ಗುಣಲಕ್ಷಣಗಳು ಇರುವವರು ಹೋಂ ಕ್ವಾರಂಟೈನ್‌ನಲ್ಲಿದ್ದರೆ ಅವರಿಗೆ ಟೆಲಿ ಮೆಡಿಸನ್‌ ವ್ಯವಸ್ಥೆ. ಕುಟುಂಬ ವರ್ಗದವರಿಗೆ ಕಾಲ ಕಾಲಕ್ಕೆ ಯಾವ ರೀತಿ ಕೊರೊನಾಪೀಡಿತರನ್ನು ನೋಡಿಕೊಳ್ಳಬೇಕು ಎಂಬ ಬಗ್ಗೆ ಸಲಹೆ ಸೂಚನೆ ನೀಡುವುದು. ಮೂರನೇ ಹಂತದಲ್ಲಿ ಸಹಾಯ ವಾಣಿ ಕೇಂದ್ರ ಸ್ಥಾಪಿಸಿ ಸಾರ್ವಜನಿಕರಿಂದ ಕೊರೊನಾಗೆ ಸಂಬಂಧಿಸಿದಂತೆ ಕರೆ ಸ್ವೀಕರಿಸಿ ತಕ್ಷಣ ಬೇಕಾದ ನೆರವು, ಚಿಕಿತ್ಸೆಗೆ ಮಾರ್ಗದರ್ಶನ ಮಾಡುವುದು ಮುಖ್ಯ ಉದ್ದೇಶ ಎಂದು ಹೇಳಲಾಗಿದೆ.

ಸೂಚನೆ: ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್‌ ಅವರು ಕೆಪಿಸಿಸಿ ವೈದ್ಯಕೀಯ ಘಟಕದ ಪದಾಧಿಕಾರಿಗಳ ಜತೆ ಸಭೆ ನಡೆಸಿ ತಜ್ಞ ವೈದ್ಯರ ಪಟ್ಟಿ ನೀಡುವಂತೆ ಸೂಚಿಸಿ ದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ಕಲಬು ರಗಿ,ಬೀದರ್‌, ಶಿವಮೊಗ್ಗ, ಬಳ್ಳಾರಿ, ತುಮಕೂರು ಸೇರಿ ಪ್ರಮುಖ ನಗರಗಳಲ್ಲಿ ಸಾಧ್ಯವಾದರೆ ಜಿಲ್ಲಾ ಕಾಂಗ್ರೆಸ್‌ ಕಚೇರಿ ಗಳಲ್ಲಿ ವೈದ್ಯರಸಹಿತ ಸಹಾಯವಾಣಿ ಪ್ರಾರಂಭಿಸುವಂತೆಯೂ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಲೂಕು ಕೇಂದ್ರಗಳಲ್ಲಿ ಆಸ್ಪತ್ರೆಗಳ ಸುಸಜ್ಜಿತ ಆಸ್ಪತ್ರೆಗಳ ಸಂಖ್ಯೆ ಕಡಿಮೆ ಇರುವುದರಿಂದ ಅಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು ಇದರ ಬಗ್ಗೆ ತಾಲೂಕು ಹಾಗೂ ಜಿಲ್ಲಾಕಾಂಗ್ರೆಸ್‌ ಸಮಿತಿ. ಪ್ರಮುಖವಾಗಿ ಯುವ ಕಾಂಗ್ರೆಸ್‌ ಹೆಚ್ಚು ಗಮನಹರಿಸಬೇಕು ಎಂದು ನಿರ್ದೇಶನ ನೀಡಲಾಗಿದ್ದು, ಜಿಲ್ಲಾಮತ್ತು ತಾಲೂಕು ಮಟ್ಟದಲ್ಲಿ ಒಂದೊಂದು ತಂಡ ರಚಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಣ್ಣ ಸಣ್ಣ ಆಡಿಯೊ, ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚುರ ಪಡಿಸಿ. ಅವಕಾಶ ಇದ್ದ ಕಡೆ ಸ್ಯಾನಿಟೈಸರ್‌,ಮಾಸ್ಕ್ ವಿತರಿಸಿ. ವೈದ್ಯರ ಘಟಕ ಹಾಗೂ ಯುವ ಘಟಕಕೈಗೊಳ್ಳುವ ಕಾರ್ಯಕ್ರಮಗಳನ್ನು ಸಣ್ಣ ವರದಿ ರೂಪದಲ್ಲಿ ಕೆಪಿಸಿಸಿಗೆ ರವಾನಿಸಿ ಎಂದು ತಿಳಿಸಲಾಗಿದೆ.

ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌, ಮಾಜಿ ಸಚಿವ ಕೃಷ್ಣ ಬೈರೇಗೌಡ ಸಹಿತ ಕಾಂಗ್ರೆಸ್‌ ಶಾಸಕರು ರೈತರ ಹೊಲಗಳಿಗೆ ಹೋಗಿ ಹಣ್ಣು, ತರಕಾರಿ ಖರೀದಿಸಿ ಬಡವರಿಗೆ ಹಂಚಿಕೆ ಮಾಡಿದ್ದರು. ಈ ವರ್ಷ ವೈದ್ಯಕೀಯ ನೆರವು

ಕೆಪಿಸಿಸಿ ವತಿಯಿಂದ ಕೋವಿಡ್ಪೀಡಿತರು ಹಾಗೂ ಕುಟುಂಬ ವರ್ಗದವರಿಗೆ ನೆರವಾಗಲು ವಿಶೇಷ ವೈದ್ಯರತಂಡ ರಚಿಸಲಾಗುತ್ತಿದೆ. ಸಹಾಯವಾಣಿ ಕೇಂದ್ರಗಳನ್ನೂ ತೆರೆಯಲು ಸಿದ್ಧತೆ ನಡೆಸಲಾಗಿದೆ .ವೈದ್ಯರ ಘಟಕ ಹಾಗೂ ಯುವ ಕಾಂಗ್ರೆಸ್‌ ಘಟಕಕ್ಕೆ ಇದರ ಜವಾಬ್ದಾರಿ ನೀಡಲಾಗುವುದು. ಸಲೀಂ ಅಹಮದ್‌, ಕೆಪಿಸಿಸಿ ಕಾರ್ಯಾಧ್ಯಕ್ಷ

ಎಸ್‌. ಲಕ್ಷ್ಮಿನಾರಾಯಣ

ಟಾಪ್ ನ್ಯೂಸ್

6-

Kundapura: ಸುಜ್ಞಾನ್‌ ಪಿಯು ಕಾಲೇಜು: ಸಂಬ್ರಮದ ಕ್ರಿಸ್‌ಮಸ್‌ ಆಚರಣೆ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

5-mudigere

Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

electricity

Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!

CT-Ravi-BJP

Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ

ABV3

A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ

Basa-Horatti

ಮೇಲ್ಮನೆಗೆ ನಾನೇ ಫೈನಲ್‌, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

6-

Kundapura: ಸುಜ್ಞಾನ್‌ ಪಿಯು ಕಾಲೇಜು: ಸಂಬ್ರಮದ ಕ್ರಿಸ್‌ಮಸ್‌ ಆಚರಣೆ

Theft Case: ಬೀಗ ಹಾಕಿದ್ದ ಮನೆಗೆ ಕನ್ನ: ಓರ್ವ ಸೆರೆ

Theft Case: ಬೀಗ ಹಾಕಿದ್ದ ಮನೆಗೆ ಕನ್ನ: ಓರ್ವ ಸೆರೆ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.