Chalavadi Narayanaswamy ವಿರುದ್ಧ ರಾಜ್ಯಪಾಲರಿಗೆ ಕಾಂಗ್ರೆಸ್ ದೂರು
"ಶಿಕ್ಷಣ ಸಂಸ್ಥೆಗೆ ಸಿಎ ನಿವೇಶನ ಪಡೆದು ದುರ್ಬಳಕೆ'
Team Udayavani, Sep 4, 2024, 6:40 AM IST
ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹಿತ ಕಾಂಗ್ರೆಸ್ ನಾಯಕರ ವಿರುದ್ಧ ನಿವೇಶನ ಹಂಚಿಕೆಗೆ ಸಂಬಂಧಿಸಿ ಗಂಭೀರ ಆರೋಪ ಮಾಡಿದ್ದ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧವೇ ಈಗ ಆರೋಪಗಳು ಕೇಳಿಬಂದಿವೆ.
ನಾರಾಯಣಸ್ವಾಮಿ ಸಿಎ ನಿವೇಶನವನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ ಎಂದು ಆಡಳಿತಾರೂಢ ಕಾಂಗ್ರೆಸ್ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಸ್ವಜನ ಪಕ್ಷಪಾತದ ಹಿನ್ನೆಲೆಯಲ್ಲಿ ನಾರಾಯಣಸ್ವಾಮಿಯನ್ನು ಎರಡೂ ಸ್ಥಾನ (ಮೇಲ್ಮನೆ ಸದಸ್ಯತ್ವ ಮತ್ತು ವಿಪಕ್ಷ ನಾಯಕ)ಗಳಿಂದ ಅನರ್ಹಗೊಳಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹಮದ್ ನೇತೃತ್ವದಲ್ಲಿ ಮಂಜುನಾಥ ಭಂಡಾರಿ ಮತ್ತಿತರ 15 ಮಂದಿಯ ನಿಯೋಗ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿಯಾಗಿ ದೂರು ನೀಡಿತು. 2002ರ ನ. 24ರಿಂದ 2005ರ ಮೇ 5ರ ವರೆಗೆ ಕರ್ನಾಟಕ ಗೃಹ ಮಂಡಳಿ ಸದಸ್ಯರಾಗಿದ್ದ ನಾರಾಯಣಸ್ವಾಮಿ ನಿಯಮ ಉಲ್ಲಂಘಿಸಿ 25,841 ಚದರಡಿ ನಿವೇಶನವನ್ನು ತಮಗೆ ಹಂಚಿಕೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಶಾಲೆ ನಿರ್ಮಾಣ ಉದ್ದೇಶಕ್ಕೆ ಪಡೆದ ಭೂಮಿಯನ್ನು ಅನಂತರ ಅನ್ಯ ಉದ್ದೇಶಕ್ಕೆ ಬದಲಾಯಿಸಿದ್ದಾರೆ. ಈ ಮೂಲಕ ಸ್ವಜನ ಪಕ್ಷಪಾತ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.