BSY ಅವರೇ, ಧೃತರಾಷ್ಟ್ರನ ಪುತ್ರ ಪ್ರೇಮವೇ ಕುರುಕ್ಷೇತ್ರಕ್ಕೆ ಕಾರಣ ತಿಳಿದಿದೆಯೇ : ಕಾಂಗ್ರೆಸ್
Team Udayavani, Aug 3, 2021, 1:54 PM IST
ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟದ ಚರ್ಚೆ ಜೋರಾದ ಬೆನ್ನಗಿ ಈವರೆಗೆ ಸಂಪುಟದ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಇಲ್ಲದ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪಅವರ ಪುತ್ರ ಬಿ. ವೈ ವಿಜಯೇಂದ್ರ ಹೆಸರು ಮುನ್ನಲೆಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್, ಬಿಜೆಪಿ ವಿರುದ್ದ ಕಿಡಿ ಕಾರಿದ್ದು, ತನ್ನ ಅಧಿಕೃತ ಟ್ವೀಟರ್ ಖಾತೆಯ ಮೂಲಕ ‘ತಾವು ವಿಪಕ್ಷಗಳಿಗೆ ಆರೋಪಿಸುತ್ತಿದ್ದ ಅದೇ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲು ಬಿಜೆಪಿ ರಾಜ್ಯ ಸರ್ಕಾರ ಬಹಳ ಉತ್ಸಾಹದಿಂದೆ’ ಎಂದು ಹೇಳಿದೆ.
ಇದನ್ನೂ ಓದಿ : ಕಾಂಗ್ರೆಸ್, ಚೀನಾದ ಕಮ್ಯುನಿಷ್ಟ್ ಪಕ್ಷದಿಂದ ಫಂಡ್ ಪಡೆದಂತೆ ವರ್ತಿಸುತ್ತಿದೆ : ನೂಪುರ ಶರ್ಮಾ
ಬಿ. ವೈ ವಿಜಯೇಂದ್ರ ಅವರಿಗೆ ರಾಜ್ಯದ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಬಿ. ಎಸ್ ಯಡಿಯೂರಪ್ಪ ಒತ್ತಡ ಹೇರಿದ್ದಾರೆ ಎಂಬ ವರದಿಯ ತುಣುಕೊಂದನ್ನು ಪೋಸ್ಟ್ ಮಾಡುವುದರೊಂದಿಗೆ, ‘ಸಿಎಂ ನಂತರ ಈಗ ಬಿವೈವಿ ಸರದಿ..! ಎಂಪಿ, ಎಂ ಎಲ್ ಎ, ಎಂ ಎಲ್ ಸಿ ಯಾವುದೇ ಚುನಾಯಿತ ಪ್ರತಿನಿಧಿಯೇ ಅಲ್ಲದ ಬಿ ವೈ ವಿಜಯೇಂದ್ರ ರಿಗೆ ಸಂಪುಟ ಸ್ಥಾನ’ ಎಂದು ಆಕ್ರೋಶ ಹೊರಹಾಕಿದೆ.
ಇನ್ನು, ಯಡಿಯೂರಪ್ಪನವರೇ, ಧೃತರಾಷ್ಟ್ರನ ಪುತ್ರ ಪ್ರೇಮವೇ ಕುರುಕ್ಷೇತ್ರಕ್ಕೆ ಕಾರಣ ತಿಳಿದಿದೆಯೇ ಎಂದು ಮಾರ್ಮಿಕವಾಗಿ ಪ್ರಶ್ನೆ ಮಾಡಿದೆ.
ತಾವು ವಿಪಕ್ಷಗಳಿಗೆ ಆರೋಪಿಸುತ್ತಿದ್ದ ಅದೇ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲು @BJP4Karnatakaಗೆ ಬಹಳ ಉತ್ಸಾಹ!
ಸಿಎಂ ನಂತರ ಈಗ BYV ಸರದಿ!
ಎಂಪಿ, ಎಂಎಲ್ಎ, ಎಂಎಲ್ಸಿ, ಯಾವುದೇ ಚುನಾಯಿತ ಪ್ರತಿನಿಧಿಯೇ ಅಲ್ಲದ @BYVijayendraರಿಗೆ ಸಂಪುಟ ಸ್ಥಾನ.@BSYBJPಅವರೇ, ಧೃತರಾಷ್ಟ್ರನ ಪುತ್ರಪ್ರೇಮವೇ ಕುರುಕ್ಷೇತ್ರಕ್ಕೆ ಕಾರಣ ತಿಳಿದಿದೆಯೇ! pic.twitter.com/Km8LamxawC— Karnataka Congress (@INCKarnataka) August 3, 2021
ಇದನ್ನೂ ಓದಿ : ಜನರ ಮೇಲೆ ಆರ್ಥಿಕ ಹೊರೆ ಹೇರುವ ಕೆಲಸದಲ್ಲಿ ಕೇಂದ್ರ ಯಶಸ್ವಿಯಾಗಿದೆ : ರಾಹುಲ್ ವ್ಯಂಗ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್
Illegal Property Case: ಸಚಿವ ಜಮೀರ್ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
MUST WATCH
ಹೊಸ ಸೇರ್ಪಡೆ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.