ಕಾಂಗ್ರೆಸ್: ಮನೆಯಲ್ಲೇ ಕುಳಿತು ರಾಜಕೀಯ ಮಾಡಿದರೆ ನೋ ಟಿಕೆಟ್
Team Udayavani, Jul 20, 2021, 9:46 AM IST
ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆಯ ಕನಸು ಕಾಣುತ್ತಿದ್ದ ಮಹಿಳಾ ನಾಯಕಿಯರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ “ಶಾಕ್’ ನೀಡಿದ್ದು,ಮನೆಯೊಳಗೆ ಕುಳಿತು ರಾಜಕೀಯ ಮಾಡುವವರಿಗೆನೋ”ಟಿಕೆಟ್’ ಎಂಬ ಖಡಕ್ ಮುನ್ಸೂಚನೆ ಹೊರಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರವಿದ್ದಾಗ ಅಧಿಕಾರ ಅನುಭವಿಸಿರುವ ಅರ್ಧ ಡಜನ್ ಮಾಜಿ ಸಚಿವೆಯರು ಮನೆ ಬಿಟ್ಟು ಕದಲದ ಬಗ್ಗೆ ಅಸಮಾಧಾನ ಹೊರಹಾಕಿರುವ ಡಿ.ಕೆ.ಶಿವಕುಮಾರ್ ಚುನಾವಣೆ ಬಂದಾಗ ಮಾತ್ರ ಕಾಣಿಸಿಕೊಳ್ಳುವವರಿಗೆ ಅವಕಾಶ ಕೊಡಲಾಗದು ಎಂಬ ಸಂದೇಶ ರವಾನಿಸಿದ್ದಾರೆ.
ಮುಂದಿನ ಒಂದು ವರ್ಷ ನಿರಂತರವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಫರ್ಪಾಮೆನ್ಸ್ ತೋರಿಸಿದರೆ ಮಾತ್ರ ಟಿಕೆಟ್ ಎಂದು “ಟಾರ್ಗೆಟ್’ ನೀಡಿದ್ದಾರೆಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಕೆಪಿಸಿಸಿ ಅಧ್ಯಕ್ಷನಾಗಿ ಒಂದು ವರ್ಷದಿಂದ ಯಾರ್ಯಾರು ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಯಾರ್ಯಾರು ತಟಸ್ಥವಾಗಿದ್ದಾರೆ ಎಂಬ ಪಟ್ಟಿ ಮಾಡಿಕೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಹಿಳಾ ನಾಯಕಿಯರ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿಮನೆಬಿಟ್ಟುಹೊರಬರದಿದ್ದರೆ ಕಷ್ಟಎಂದು ನೇರವಾಗಿಯೇ ಹೇಳಿದ್ದಾರೆಂದು ತಿಳಿದು ಬಂದಿದೆ.
ಮಹಿಳಾ ಮುಖಂಡರ ಸಭೆಯಲ್ಲಿ ಪಕ್ಷ ಸಂಘಟನೆಗೆ ಮಹಿಳಾ ನಾಯಕಿಯರು ಸಾಥ್ ನೀಡದ ಬಗ್ಗೆ ಅಸಮಾಧಾನ ಹೊರಹಾಕಿ ರಾಜ್ಯಪ್ರವಾಸ ಮಾಡಿ ಪಂಚಾಯಿತಿ ಮಟ್ಟಕ್ಕೆ ಹೋಗಿ ಸಂಘಟನೆ ಮಾಡಿ. ಮಹಿಳಾ ಕಾಂಗ್ರೆಸ್ ಶಕ್ತಿಯುತವಾಗಿ ಮಾಡಿ ಎಂದು ನಿರ್ದೇಶನ ನೀಡಿದ್ದಾರೆ.
ಸ್ತ್ರೀ ಶಕ್ತಿ ಸಂಘಟನಾ ಸಮಿತಿ ರಚಿಸಿ ಮಾಜಿ ಸಚಿವರು, ಹಾಲಿ ಶಾಸಕರು, ಮಾಜಿ ಶಾಸಕರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ವರು, ಮಾಜಿ ಮೇಯರ್‌ಗಳು ಸೇರಿ 28 ಮಹಿಳಾ ನಾಯಕಿಯರನ್ನು ನೇಮಿಸಿದ್ದು ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಕನಿಷ್ಠ 1 ಸಾವಿರ ಹೊಸ ಸಕ್ರಿಯ ಮಹಿಳಾ ಮುಖಂಡರನ್ನು ಪಕ್ಷ ಸಂಘಟನೆಯಲ್ಲಿ ತೊಡಗಿಸುವ ಜವಾಬ್ದಾರಿ ವಹಿಸಲಾಗಿದೆ. ಆರು ತಂಡಗಳಾಗಿ ರಚಿಸಿ ಜಿಲ್ಲಾವಾರು ಹೊಣೆಗಾರಿಕೆ ಹಂಚಿಕೆ ಮಾಡಲಾಗಿದೆ.
ಪಂಚಾಯಿತಿಯಲ್ಲಿ ಚುನಾವಣೆಗಳಲ್ಲಿ ಶೇ.50ರಷ್ಟು ಮೀಸಲಾತಿಯಡಿ ಅವಕಾಶ ಪಡೆದು ಚುನಾಯಿತರಾದರು ಆ ನಂತರ ದೂರ ಸರಿದಿದ್ದಾರೆ. ಅವರನ್ನೆಲ್ಲಾ ಭೇಟಿ ಮಾಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಹಾಗೂ ಸ್ತ್ರೀ ಶಕ್ತಿ ಸಂಘಟನೆಗಳ ಜತೆ ನಿರಂತರ ಸಂಪರ್ಕ ಸಾಧಿಸಿ ಅವರ ಒಲವು ಗಳಿಸುವ ಗುರಿ ಸಹ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
30ಟಿಕೆಟ್‌ಗೆ ಡಿಮ್ಯಾಂಡ್ : ಈ ಮಧ್ಯೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಗೊಂದರಂತೆ ಕನಿಷ್ಠ 30 ಸ್ಥಾನಗಳಲ್ಲಿ ಮಹಿಳೆಯರಿಗೆ ಅವಕಾಶ ಕೊಡಬೇಕೆಂಬಪ್ರಸ್ತಾವನೆ ಮಹಿಳಾ ಕಾಂಗ್ರೆಸ್ ಪರವಾಗಿ ಕೆಪಿಸಿಸಿ ಅಧ್ಯಕ್ಷರ ಮುಂದಿಡಲಾಗಿದೆ. ಹಾಲಿ ಇರುವ ಆರು ಶಾಸಕರ ಜತೆಗೆ, ಉಮಾಶ್ರೀ, ರಾಣಿ ಸತೀಶ್,ಮೋಟಮ್ಮ, ಸುಮಾ ವಸಂತ್, ಜಯಮಾಲಾ, ಶಾರದಾ ಮೋಹನ್‌ಶೆಟ್ಟಿ, ಪುಷ್ಪಾ ಅಮರನಾಥ್,ಪದ್ಮಾವತಿ, ಗಂಗಾಂಬಿಕೆ, ವಾಸಂತಿ ಶಿವಣ್ಣ, ಮಲ್ಲಾಜಮ್ಮ ಸೇರಿ ಹದಿನೈದಕ್ಕೂ ಹೆಚ್ಚು ಮಂದಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆಗೆ ತಯಾರಿನಡೆಸಿದ್ದಾರೆ.ಹೀಗಾಗಿ, ಮಹಿಳೆಯರಿಗೆ30ಟಿಕೆಟ್ ಮೀಸಲಿಡಬೇಕೆಂಬ “ಡಿಮ್ಯಾಂಡ್’ ಇಟ್ಟಿದ್ದಾರೆ.
ರಾಜ್ಯವ್ಯಾಪಿ ಪ್ರವಾಸ ಮಾಡಿ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಒಂದು ಸಾವಿರ ಮಹಿಳಾ ನಾಯಕಿಯರನ್ನು ಗುರುತಿಸಿಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಕೆಪಿಸಿಸಿ ಅಧ್ಯಕ್ಷರುಸೂಚಿಸಿದ್ದಾರೆ. ಅದರಂತೆ ನಾವುಕಾರ್ಯೋನ್ಮುಖರಾಗಿದ್ದೇವೆ. –ಪುಷ್ಪಾ ಅಮರನಾಥ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ
-ಎಸ್. ಲಕ್ಷ್ಮೀನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.