ಮತಾಂತರ ನಿಷೇಧ ಕಾಯ್ದೆ : ವಿಧಾನಸಭೆಯಲ್ಲಿ ರಾಜ್ಯ ಸರಕಾರದಿಂದ ಘೋಷಣೆ
Team Udayavani, Sep 22, 2021, 7:10 AM IST
ಬೆಂಗಳೂರು: ಬಲವಂತ ಮತ್ತು ಆಮಿಷ ವೊಡ್ಡಿ ಮತಾಂತರ ಪ್ರಕರಣಗಳು ಹೆಚ್ಚುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಮಾದರಿ ಯಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಇರಾದೆ ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಮಂಗಳವಾರ ಶೂನ್ಯವೇಳೆ ಯಲ್ಲಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಮಾತನಾಡಿ, ತನ್ನ ತಾಯಿಯನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡ ಲಾಗಿದೆ. ತನ್ನ ಚಿತ್ರದುರ್ಗ ಜಿಲ್ಲೆ, ತನ್ನ ಕ್ಷೇತ್ರದಲ್ಲಿ ಕ್ರೈಸ್ತ ಮಿಷನರಿ ಗಳು ಮತ್ತು ಸಂಘಟನೆಗಳು ಬಲವಂತವಾಗಿ ಬಡವ ರನ್ನು, ಮುಗ್ಧರನ್ನು ಮತಾಂತರಗೊಳಿಸುತ್ತಿವೆ. ಉಡುಪಿ, ಚಿತ್ರದುರ್ಗ ಜಿಲ್ಲೆಗಳಲ್ಲೂ ಇಂಥ ಘಟನೆ ನಡೆದಿವೆ ಎಂದು ಹೇಳಿ, ಸರಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂಬಂಧ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ. ಆಮಿಷವೊಡ್ಡಿ ಮತಾಂತರ ನಡೆಸುವುದು ಕಾನೂನಿಗೆ ವಿರುದ್ಧ ವಾಗಿದೆ. ಪೊಲೀಸರಿಗೆ ಈ ಕುರಿತು ಸ್ಪಷ್ಟ ನಿರ್ದೇಶನ ನೀಡಿದ್ದು, ಸೂಕ್ತ ಕ್ರಮ ತೆಗೆದು ಕೊಳ್ಳಲು ತಿಳಿಸಲಾಗಿದೆ ಎಂದರು.
ಜನರ ಮುಗ್ಧತೆ, ದೌರ್ಬಲ್ಯ ಅಥವಾ ಇನ್ನಿತರ ಸನ್ನಿವೇಶಗಳನ್ನು ಬಳಸಿ ಕೊಂಡು ಮತಾಂತರ ಮಾಡು ವುದರಿಂದ ಸಮಾಜದಲ್ಲಿ ಶಾಂತಿ ಕದಡುವ ಸಂಭವ ಇದೆ ಎಂದು ಹೇಳಿದ ಸಚಿವರು, ಈ ಕುರಿತು ರಾಜ್ಯ ಸರಕಾರ ಸೂಕ್ತ ಕಾನೂನನ್ನು ಜಾರಿಗೆ ತರಲು ಚಿಂತನೆ ನಡೆಸಿದೆ ಎಂದು ತಿಳಿಸಿದರು.
ಅತ್ಯಾಚಾರ ಮತ್ತಿತರ ಸುಳ್ಳು ಪ್ರಕರಣಗಳನ್ನು ದಾಖಲಿ ಸಿದ್ದು ಕಂಡುಬಂದಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು. ಮತಾಂತರದ ಹಿಂದೆ ವ್ಯವಸ್ಥಿತ ಜಾಲವೇ ಇದೆ. ಅದನ್ನು ಹೇಗೆ ತಡೆಗಟ್ಟಲು ಸಾಧ್ಯ ಎಂಬ ಚರ್ಚೆ ಆಗುತ್ತಿದೆ. ಸದ್ಯವೇ ಸೂಕ್ತ ಕಾನೂನನ್ನು ತರಲಾಗುವುದು. ಶಾಂತಿಭಂಗಕ್ಕೆ ಕಾರಣವಾಗುವ ಸಂಘಟನೆ ಅಥವಾ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಎಲ್ಲೆಲ್ಲಿ ಮತಾಂತರ ನಿಷೇಧ ಕಾಯ್ದೆ? : ಒಡಿಶಾ, ಮಧ್ಯಪ್ರದೇಶ, ಅರುಣಾಚಲ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಗುಜರಾತ್, ಛತ್ತೀಸ್ ಗಢ, ಉತ್ತರ ಪ್ರದೇಶ.
ಎಸ್‌ಸಿ, ಎಸ್‌ಟಿ ಸೌಲಭ್ಯ ಯಾಕೆ? :
ಮತಾಂತರದ ಬಗ್ಗೆ ವಿವರ ನೀಡಿದ ಗೂಳಿಹಟ್ಟಿ ಶೇಖರ್, ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ವರ್ಗ ಗಳನ್ನು ಗುರಿ ಮಾಡಲಾಗುತ್ತಿದೆ. ಮುಸ್ಲಿಂ ಸಮುದಾಯ ದವರನ್ನೂ ಮತಾಂತರಗೊಳಿಸಲಾಗುತ್ತಿದೆ. ಇದರಿಂದ ಕೆಲವು ಕುಟುಂಬ ಗಳು ಸಮಸ್ಯೆ ಅನುಭವಿಸಿವೆ. ವಿರೋಧಿಸಿದರೆ ಅತ್ಯಾಚಾರದಂಥ ಸುಳ್ಳು ಪ್ರಕರಣ ದಾಖಲಿಸ ಲಾಗುತ್ತಿದೆ ಎಂದು ಆರೋಪಿಸಿದರು. ಸ್ವಂತ ಇಚ್ಛೆ ಇದ್ದರೆ ಮತಾಂತರಗೊಳ್ಳಲಿ, ಆದರೆ ಬಲವಂತದ ಮತಾಂತರ ಸಲ್ಲದು. ಹಾಗೆ ಮತಾಂತರಗೊಳ್ಳುವವರು ಎಸ್‌ಸಿ, ಎಸ್‌ಟಿ ಸೌಲಭ್ಯಗಳನ್ನು ಪಡೆಯುವುದನ್ನು ನಿಲ್ಲಿಸಲಿ ಎಂದು ಸವಾಲೆಸೆದರು.
ತನ್ನ ಸ್ವಂತ ಅನುಭವ ಹೇಳಿಕೊಂಡ ಗೂಳಿ ಹಟ್ಟಿ ಶೇಖರ್, ತಾಯಿ ಮತಾಂತರಗೊಂಡ ಬಳಿಕ ಹಳ್ಳಿಯ ಮನೆಯಲ್ಲಿ ನಾವು ಪೂಜೆ ಮಾಡುವಂತೆಯೂ ಇಲ್ಲ. ಮೌಡ್ಯ ಪ್ರತಿ ಬಂಧಕ ಕಾಯ್ದೆ ಜಾರಿ ಬಳಿಕ ಇದನ್ನು ದುರ್ಬಳಕೆ ಮಾಡಿಕೊಂಡು ಕ್ರೈಸ್ತ ಮಿಷನರಿ ಗಳು ಮುಗ್ಧ ಜನರನ್ನು ಚರ್ಚ್ ಗೆ ಕರೆದೊಯ್ದು ಬ್ರೈನ್ ವಾಶ್ ಮಾಡುತ್ತಿವೆ. ಚಿತ್ರದುರ್ಗ ಜಿಲ್ಲೆ ಯಲ್ಲೇ 15ರಿಂದ 20 ಸಾವಿರ ಜನರನ್ನು ಮತಾಂತರಗೊಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯ ಕೆ.ಜೆ. ಜಾರ್ಜ್ ಮಧ್ಯಪ್ರವೇಶಿಸಿ, ಬಲವಂತದ ಮತಾಂತರಕ್ಕೆ ತಮ್ಮ ವಿರೋಧ ವಿದೆ. ಆದರೆ ಚರ್ಚ್ ಎನ್ನುವ ಮೂಲಕ ಅದನ್ನು ಸಾರ್ವತ್ರಿಕವಾಗಿ ದೂಷಣೆ ಮಾಡುವುದು ಸರಿಯಲ್ಲ ಎಂದರು. ಜೆಡಿಎಸ್ ಶಾಸಕ ದೇವಾನಂದ್ ಮಾತನಾಡಿ, ವಿಜಯಪುರ ಜಿಲ್ಲೆ ಯಲ್ಲಿಯೂ ಮತಾಂತರ ಹಾವಳಿ ಹೆಚ್ಚಾ ಗಿದೆ. ಬಂಜಾರ ಸಮುದಾಯವನ್ನು ಮತಾಂತರ ಗೊಳಿಸಲಾಗುತ್ತಿದೆ. ಅಲ್ಲಿ ಎರಡು ಬಣ ಗಳಾಗಿದ್ದು, ಸಮಾಜದ ಶಾಂತಿ ಮತ್ತು ಕುಟುಂಬದ ಸದಸ್ಯರ ನಡುವೆ ಸಮನ್ವಯ, ಸೌಹಾರ್ದ ಕದಡಿದೆ ಎಂದು ಸರಕಾರದ ಗಮನ ಸೆಳೆದರು.
ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ದನಿಗೂಡಿಸಿ, ತಾವು ಶಾಸಕರಾಗಿ ವಿಪಕ್ಷದಲ್ಲಿದ್ದಾಗ ಮತಾಂತರದ ಬಗ್ಗೆ ಸದನದಲ್ಲಿ ಚರ್ಚೆ ಯಾಗಿತ್ತು ಎಂದು ಜ್ಞಾಪಿಸಿದರು. ಈ ಬಗ್ಗೆ ಸರಕಾರ ಸೂಕ್ರ ಕ್ರಮ ಕೈಗೊಳ್ಳಬೇಕೆಂದು ಕಾಗೇರಿಯವರು ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Waqf Property: ಆಡು ಮುಟ್ಟದ ಸೊಪ್ಪಿಲ್ಲ, ವಕ್ಫ್ ಮುಟ್ಟದ ಸ್ವತ್ತಿಲ್ಲ: ತೇಜಸ್ವಿ ಸೂರ್ಯ
Waqf issue: ಬಿಜೆಪಿ ಅಧಿಕಾರದಲ್ಲಿದ್ದಾಗ ಕತ್ತೆ ಕಾಯಿತಿದ್ದರಾ?: ಪ್ರಿಯಾಂಕ್ ಖರ್ಗೆ
Bellary; ಲೂಟಿ ಮಾಡಿದ ರೆಡ್ಡಿಯನ್ನು ಯಾಕೆ ಪಕ್ಷಕ್ಕೆ ಸೇರಿಸಿದಿರಿ: ಮೋದಿಗೆ ಸಿಎಂ ಪ್ರಶ್ನೆ
MUST WATCH
ಹೊಸ ಸೇರ್ಪಡೆ
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.