ನಾಳೆ ರಾಜ್ಯದ 7 ಕಡೆ ಸಹಕಾರ ಸಪ್ತಾಹ ಆಯೋಜನೆ
Team Udayavani, Nov 13, 2019, 3:04 AM IST
ಬೆಂಗಳೂರು: ಸಹಕಾರ ಕ್ಷೇತ್ರಕ್ಕೆ ವಿಶೇಷ ಪ್ರೋತ್ಸಾಹ ನೀಡಿದ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಸ್ಮರಣಾರ್ಥ ನ.14ರಂದು ಪ್ರತಿವರ್ಷ ಸಹಕಾರ ಸಪ್ತಾಹ ಆಯೋಜಿಸಲಾಗುತ್ತದೆ.
ಈ ವರ್ಷ 7 ಕಡೆ ಸಪ್ತಾಹ ನಡೆಸಲಾಗುತ್ತಿದ್ದು, ನ.14ರಂದು ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಪ್ತಾಹ ಉದ್ಘಾಟಿಸಿ, “ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಗೃಹ ಮತ್ತು ಸಹಕಾರ ಸಚಿವ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ವಹಿಸಲಿದ್ದು, ಸಚಿವರಾದ ವಿ.ಸೋಮಣ್ಣ, ಜೆ.ಸಿ.ಮಾಧುಸ್ವಾಮಿ ಪಾಲ್ಗೊಳ್ಳಲಿದ್ದಾರೆ.
ಇನ್ನು ನ.15ಕ್ಕೆ ಕೊಪ್ಪಳ, 16ಕ್ಕೆ ಯಾದಗಿರಿ, 17ಕ್ಕೆ ಧಾರವಾಡ, 18ಕ್ಕೆ ಉಡುಪಿ, 19ಕ್ಕೆ ಚಿತ್ರದುರ್ಗದಲ್ಲಿ ಸಪ್ತಾಹ ನಡೆಯಲಿದ್ದು, ನ.20ರಂದು ಮೈಸೂರಿನಲ್ಲಿ ಸಮಾರೋಪ ಸಮಾರಂಭ ಜರುಗಲಿದೆ. ಈ ಬಾರಿಯ ಧ್ಯೇಯವಾಕ್ಯ “ನವ ಭಾರತದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ಎಂದಾಗಿದ್ದು, ಸಹಕಾರದ ವಿಷಯದ ಕುರಿತು ವಿಚಾರಗೋಷ್ಠಿ, ಸಭೆ, ಸಮ್ಮೇಳನಗಳು ನಡೆಯಲಿವೆ ಎಂದು ಸಹಕಾರ ಮಂಡಳಿ ತಿಳಿಸಿದೆ.
“ಯಶಸ್ವಿನಿ’ ಯೋಜನೆ ಪುನಾರಂಭಕ್ಕೆ ಒತ್ತಾಯ- ಎನ್.ಗಂಗಣ್ಣ: ಯಶಸ್ವಿನಿ ಆರೋಗ್ಯ ಯೋಜನೆ ಪುನಾರಂಭ, ಅಕಾಲಿಕ ಮರಣ ಹೊಂದಿದ ರೈತರ ಸಾಲಮನ್ನಾ ಸೇರಿ ಪ್ರಮುಖ ಬೇಡಿಕೆಗಳನ್ನು 66ನೇ ಅಖೀಲ ಭಾರತ ಸಹಕಾರ ಸಪ್ತಾಹದಲ್ಲಿ ಸರ್ಕಾರದ ಮುಂದಿಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎನ್.ಗಂಗಣ್ಣ ತಿಳಿಸಿದ್ದಾರೆ.
ರಾಜ್ಯದ ವಿವಿಧೆಡೆ ನ.14 ರಿಂದ 20ರವರೆಗೆ ನಡೆಯುತ್ತಿರುವ ಸಹಕಾರ ಸಪ್ತಾಹದ ಹಿನ್ನೆಲೆಯಲ್ಲಿ ಮಂಗಳವಾರ ನಗರದ ರೇಸ್‌ಕೋರ್ಸ್ ವೃತ್ತದ ಬಳಿಯ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಈ ಬಾರಿಯ ಸಪ್ತಾಹದಲ್ಲಿ ರಾಜ್ಯದ ಜನರ ಸಮಸ್ಯೆಗಳನ್ನು ಸರ್ಕಾರದ ಮುಂದಿಡಲಾಗುವುದು. ಪ್ರಮುಖವಾಗಿ ಆರೋಗ್ಯ ಸೇವೆಯಲ್ಲಿ ಚಾಲ್ತಿಯಲ್ಲಿರುವ “ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ದಲ್ಲಿ ರೈತರಿಗೆ ಹಾಗೂ ಗ್ರಾಮೀಣ ಭಾಗದವರಿಗೆ ಸುಲಭವಾಗಿ ಸೌಲಭ್ಯ ಲಭ್ಯವಾಗುತ್ತಿಲ್ಲ. ಜತೆಗೆ, ಕೆಲ ತಾಂತ್ರಿಕ ತೊಡಕು ಉಂಟಾಗುತ್ತಿದೆ. ಹೀಗಾಗಿ, ಈ ಹಿಂದೆ ಇದ್ದ ಜನಸ್ನೇಹಿ ಯಶಸ್ವಿನಿ ಯೋಜನೆಯನ್ನೇ ಪುನಾರಂಭಿಸಬೇಕು ಎಂದು ಒತ್ತಾಯಿಸಲಾಗುತ್ತದೆ ಎಂದರು.
ರೈತ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಅಕಾಲಿಕ ಮರಣ ಹೊಂದಿದ ರೈತರ 25,000 ರೂ.ನಿಂದ 1 ಲಕ್ಷ ರೂ.ವರೆಗೂ ಸಾಲ ಮನ್ನಾ ಮಾಡುವ ಯೋಜನೆ ಹಮ್ಮಿಕೊಂಡಿದೆ. ಈವರೆಗೆ 5,317 ಮೃತ ರೈತರಿಗೆ 15.50 ಕೋಟಿ ರೂ.ಸಾಲ ಮನ್ನಾ ಮಾಡಿದೆ. ಈ ಯೋಜನೆಯನ್ನು ಎಲ್ಲಾ ಜಿಲ್ಲಾಗಳ ಸಹಕಾರ ಕೇಂದ್ರ ಬ್ಯಾಂಕ್‌ಗಳಲ್ಲಿ ಆರಂಭಿಸಲು ಮನವಿ ಸಲ್ಲಿಸಲಾಗುತ್ತದೆ.
ಹೀಗಾಗಿ ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳಲ್ಲಿಯೂ ಮೆಗಾ ಡೇರಿ ಆರಂಭಿಸಿ ಅಲ್ಲಿಯೇ ಹಾಲಿನ ಪೌಡರ್ ಉತ್ಪಾದನೆ ವ್ಯವಸ್ಥೆ ಕಲ್ಪಿಸಲು ಬೇಡಿಕೆ ಸಲ್ಲಿಸುತ್ತೇವೆ ಎಂದು ತಿಳಿಸಿದರು. ರಾಜ್ಯದಲ್ಲಿ ಒಟ್ಟಾರೆ 43 ಸಾವಿರಕ್ಕೂ ಹೆಚ್ಚು ಸಹಕಾರ ಸಂಘಗಳಿದ್ದು, 2 ಕೋಟಿ 32 ಲಕ್ಷ ಸದಸ್ಯರಿದ್ದಾರೆ. ಸಹಕಾರ ಬ್ಯಾಂಕ್‌ಗಳ 10 ಸಾವಿರ ಕೋಟಿ ರೂ.ಸಾಲಮನ್ನಾದಲ್ಲಿ 7,600 ಕೋಟಿ ರೂ. ಸಾಲಮನ್ನಾ ಪೂರ್ಣಗೊಂಡಿದೆ. ಉಳಿದ 2,400 ಕೋಟಿ ರೂ. ಮೊತ್ತದ ಸಾಲಮನ್ನಾಕ್ಕೆ ರೈತರ ದಾಖಲೆ ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.