ಕೊರೊನಾ.. ಕರೋನಾ.. ಕೆರೋನಾ..?
Team Udayavani, Mar 9, 2020, 3:04 AM IST
ಎಲ್ಲೆಡೆ ಕೊರೊನಾ ಸೋಂಕು ಭೀತಿ ಹೆಚ್ಚಾಗಿದ್ದು, ರಾಜ್ಯದಲ್ಲಿ ಸೋಂಕು ಹರಡದಂತೆ ಸರ್ಕಾರ ಅಗತ್ಯ ಕ್ರಮಗಳ ಕೈಗೊಳ್ಳುತ್ತಿರುವುದು ತಿಳಿದಿರುವ ವಿಚಾರ. ರೋಗ ಹರಡುವ ವೈರಸ್ ಬಗ್ಗೆ ಪದ ಬಳಕೆಯನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮಾಡುತ್ತಿದ್ದಾರೆ. ಅನೇಕರು ಕೊರೊನಾ ಎಂಬುದನ್ನು ಕರೋನಾ, ಕರನಾ, ಕೋರನಾ ಎಂದೆಲ್ಲಾ ಪದ ಬಳಕೆ ಮಾಡುತ್ತಿದ್ದಾರೆ. ಈ ನಡುವೆ ಸಚಿವರೊಬ್ಬರು ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ “ಕೆರೋನಾ” ಎನ್ನುವ ಮೂಲಕ ಈ ಸಾಲಿಗೆ ಹೊಸ ಪದ ಸೃಷ್ಟಿಸಿದರು. ಅಲ್ಲದೇ ನೊವೆಲ್ ಕೊರೊನಾ ವೈರಸ್ ಸೋಂಕು ಡಿಸೆಂಬರ್‌ನಿಂದ ಇತ್ತೀಚೆಗೆ ಕಾಣಿಸಿಕೊಂಡಿದೆ.
ಆದರೆ ಸಚಿವರು ಮಾತನಾಡು ವಾಗ “ಕೆರೋನಾ ವೈರಸ್ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳು ಒಟ್ಟೊಟ್ಟಾಗಿ ಸೇರಿಕೊಂಡು ಆರು ತಿಂಗಳಿಂದ ಅಧ್ಯಯನ ಮಾಡಿದ್ದೇವೆ, ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ’ ಎನ್ನುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು. ಈ ಎರಡು ಅಂಶಗಳಿಂದ ಸುದ್ದಿಗೋಷ್ಠಿಯಲ್ಲಿದ್ದವರಿಗೆ ಯಾವುದು ಈ ಆರು ತಿಂಗಳಿಂದ ರಾಜ್ಯ ಸರ್ಕಾರದ ಎರಡು ಇಲಾಖೆಗಳು ಅಧ್ಯಯನ ನಡೆಸುತ್ತಿರುವ “ಕೆರೋನಾ ವೈರಸ್’ ಎಂಬ ಗೊಂದಲ ಮೂಡಿತು.
ಸಂಚಾರ ಪೊಲೀಸರಿಗೇ ಹವಾ!
ಕೊರೊನಾ ಭೀತಿಗೆ ಎಚ್ಚೆತ್ತುಕೊಂಡಿರುವ ಕೆಲವರು ಮಾಸ್ಕ್ಗಳ ಮೊರೆ ಹೋಗಿದ್ದಾರೆ. ಮತ್ತೂಂದೆಡೆ, ಸಂಚಾರ ಪೊಲೀಸರು ಡ್ರಿಂಕ್ ಆಂಡ್ ಡ್ರೈವ್ ಪ್ರಕರಣಗಳಲ್ಲಿ ವಾಹನ ಸವಾರರು ಮದ್ಯ ಸೇವಿಸಿದ್ದಾರಾ? ಇಲ್ಲವೇ? ಎಂಬುದನ್ನು ತಿಳಿಯಲು ಯಂತ್ರಗಳನ್ನು ಊದಲು ಹೇಳುತ್ತಾರೆ. ಅಲ್ಲದೆ, ಮದ್ಯಪಾನ ಬಗ್ಗೆ ಖಚಿತ ಪಡಿಸಿಕೊಳ್ಳಲು ಮುಖದ ಹತ್ತಿರ ಬಂದು ನಿಮ್ಮ ಹೆಸರು ಏನು? ಎಲ್ಲಿಂದ ಬಂದಿದ್ದಿರಿ? ಎಂದು ಕೇಳುತ್ತಿದ್ದ ಸಂಚಾರ ಪೊಲೀಸರಿಗೆ ವಾಹನ ಸವಾರರೇ “ಕೊರೊನಾ’ ಶಾಕ್ ಕೊಟ್ಟಿದ್ದಾರೆ!
ಇದೀಗ ಸಂಚಾರ ಪೊಲೀಸರು ಮತ್ತು ವಾಹನ ಸವಾರರ ನಡುವಿನ ವಾಕ್ಸಮರಕ್ಕೂ ಕಾರಣವಾಗಿದೆ. ಊದಲು ಹೇಳುವಾಗ ಹೊಸ ಪೈಪ್ ಹಾಕಿ ಎಂದು ವಾಹನ ಸವಾರ ಪಟ್ಟು ಹಿಡಿದರೆ, ಸಂಚಾರ ಪೊಲೀಸರು ಮೊದಲು ಊದಬೇಕು. ನಂತರ ಪೈಪ್ ಹಾಕಿ ಎಷ್ಟು ಪ್ರಮಾಣದಲ್ಲಿ ಕುಡಿದಿದ್ದಿರಾ ಎಂದು ಖಚಿತ ಪಡಿಸಿಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಇಬ್ಬರ ನಡುವೆ ವಾಗ್ವಾದ ನಡೆಯುತ್ತಿದೆ. ಯಂತ್ರ ಊದಿದಾಗ ಸೋಂಕು ಹರಡುವ ಸಾಧ್ಯತೆಯಿದೆ. ನಿಮಗೂ ರೋಗ ಅಂಟಿಕೊಳ್ಳುತ್ತದೆ ಎಚ್ಚರಿಕೆಯಿಂದ ಇರುವಂತೆ ವಾಹನ ಸವಾರರೇ ಸಂಚಾರ ಪೊಲೀಸರಿಗೆ ಸಲಹೆ ನೀಡುತ್ತಿದ್ದಾರೆ. ಅದರಿಂದ ವಿಚಲಿತಗೊಂಡ ಸಂಚಾರ ಪೊಲೀಸರು ಪ್ರತಿಯೊಬ್ಬರಿಗೂ ಹೊಸ ಪೈಪ್ ಹಾಕಿ ಡ್ರಿಂಕ್ ಆ್ಯಂಡ್ ಡ್ರೈವ್ ಪರಿಶೀಲನೆ ಮಾಡುತ್ತಿದ್ದಾರಂತೆ.
ಯಾವ ಕಡೆ ಧಿಕ್ಕಾರ?
ಸರ್.ಪುಟ್ಟಣ್ಣ ಚೆಟ್ಟಿ ಪುರಭವನದ ಮುಂದೆ ಪ್ರತಿಭಟನೆಗೆ ಅವಕಾಶ ನೀಡದೆ ಇರುವುದನ್ನು ವಿರೋಧಿಸಿ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯ ಕೌನ್ಸಿಲ್ ಕಟ್ಟಡದ ಎದುರು ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಇದೇ ಸಮಯಕ್ಕೆ ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ತಮ್ಮ ಬೇಡಿಕೆ ಈಡೇರಿಸುವಂತೆ ಕೌನ್ಸಿಲ್ ಕಟ್ಟಡದ ಸಮೀಪವೇ ಪ್ರತಿಭಟನೆ ಮಾಡಲು ಪ್ರಾರಂಭಿಸಿದರು. ವಿರೋಧ ಪಕ್ಷದ ಸದಸ್ಯರ ಪ್ರತಿಭಟನೆ ವರದಿ ಮಾಡುತ್ತಿದ್ದ ಕ್ಯಾಮರಾದ ಕಣ್ಣುಗಳು ನೌಕರರ ಸಂಘದ ಪ್ರತಿಭಟನೆಯತ್ತ ತಿರುಗಿದವು.ಆದರೆ, ಮಾಧ್ಯಮ ಪ್ರತಿನಿಧಿಗಳು ಮಾತ್ರ ಯಾವ ಧಿಕ್ಕಾರದ ಕಡೆ ಹೋಗಬೇಕು ಎಂದು ತಿಳಿಯದೆ ಗೊಂದಲಕ್ಕೆ ಬಿದ್ದರು. ಮಾಧ್ಯಮಗಳ ಗಮನ ಸೆಳೆಯಲು ಎರಡೂ ಕಡೆ ಪೈಪೋಟಿಯ ಮೇಲೆ ಧಿಕ್ಕಾರದ ಕೂಗು ಕೇಳಿಸಿತು!
* ಲಕ್ಷ್ಮಿ, ಪಾಗೋಜಿ, ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.