ಪ್ರತಿಷ್ಠೆ ಮುಖ್ಯವಾಗಬಾರದು, ಯಾವುದು ಆಗಬಾರದಿತ್ತೋ ಅದು ಆಗಿದೆ: ಕೆ. ಪ್ರತಾಪಚಂದ್ರ ಶೆಟ್ಟಿ
Team Udayavani, Dec 16, 2020, 1:58 PM IST
ಬೆಂಗಳೂರು: ವಿಧಾನ ಪರಿಷತ್ತಿನಲ್ಲಿ ಮಂಗಳವಾರ ನಡೆದ ಘಟನೆಯ ಬಗ್ಗೆ ಹಾಗೂ ಸದನದ ಘನತೆ ಕಾಪಾಡುವ ಬಗ್ಗೆ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಉದಯವಾಣಿಯೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ.
ಸದನಕ್ಕೆ ಕಪ್ಪು ಚುಕ್ಕೆ ಇಡುವಂತಹಈ ಘಟನೆಯ ಬಗ್ಗೆ ನಿಮಗೆ ಏನು ಅನಿಸಿತು ?
ಬೇಲಿಯೇ ಎದ್ದು ಹೊಲ ಮೇಯ್ದರೆ ಏನು ಮಾಡಲು ಆಗುತ್ತದೆ? ಜವಾಬ್ದಾರಿ ಇರುವವರು ಪೀಠದ ಬಳಿಇದ್ದಾಗ ಈ ರೀತಿ ಘಟನೆ ನಡೆದಿರು ವುದು ಬೇಸರ ತಂದಿದೆ. ಇಂದಿನ ಘಟನೆಯ ಬಗ್ಗೆ ನಾನು ಯಾರನ್ನೂ ಸಮರ್ಥಿಸುವುದಿಲ್ಲ.ಕಾಂಗ್ರೆಸ್,ಜೆಡಿಎಸ್, ಬಿಜೆಪಿ ಎಲ್ಲರಿಂದಲೂ ತಪ್ಪಾಗಿದೆ. ಕಾಂಗ್ರೆಸ್‌ನವರು ಬಲವಂತವಾಗಿ ಇಳಿಸಿರುವ ಬಗ್ಗೆ ಜಿಜ್ಞಾಸೆಇದೆ.
ಯಾರಾದರೂ ಪ್ರಚೋದನೆ ಮಾಡಿದ್ದಾರೆ ಅನಿಸಿದೆಯಾ?
ಯಾರೋ ಪ್ರಚೋದನೆ ಮಾಡಿದ್ದಾರೆ ಅಂತ ನಾನು ಹೇಳುವುದಿಲ್ಲ. ಈ ಘಟನೆಯನ್ನು ನೋಡಿದರೆ ಎಲ್ಲವೂಅರ್ಥವಾಗುತ್ತದೆ. ಸಭಾಪತಿ ಇಲ್ಲದಿರುವಾಗ ಉಪ ಸಭಾಪತಿ ಕೂರಬಹುದು. ಅವರೂ ಸದನದ ಒಳಗೆ ಬರಲು ಒಂದು ಮಾರ್ಗವಿದೆ. ಯಾವುದನ್ನೂ ಲೆಕ್ಕಿಸದೇ ನಡೆದುಕೊಂಡರೆ ಹೇಗೆ ?
ಘಟನೆ ನಿಮಗೆ ಬೇಸರ ತಂದಿದೆಯಾ?
ಬೇಸರ ಆಗೋದಲ್ಲ… ಇದಕ್ಕಿಂತ ಇನ್ನೇನು ನೋಡಲು ಸಾಧ್ಯ? ಮಾಧ್ಯಮಗಳಲ್ಲಿ ಎಲ್ಲ ಕಡೆ ಹೋಗುತ್ತದೆ. ಮೇಲ್ಮನೆಯ ಬಗ್ಗೆ ಸಾರ್ವಜನಿಕರಲ್ಲಿ ಕೆಟ್ಟ ಅಭಿಪ್ರಾಯ ಹೋಗುತ್ತದೆ. ಇದರಲ್ಲಿ ತಲೆ ಹೋಗುವುದೇನಿದೆ. ಇದರಲ್ಲಿ ದಿನಗಳ ಲೆಕ್ಕ ಮಾತ್ರ ಇರೋದು, ಒಬ್ಬ ವ್ಯಕ್ತಿಯನ್ನು ಕೂರಿಸುವುದು,ಇಳಿಸುವುದಕ್ಕೆ ಒಂದು ವ್ಯವಸ್ಥೆ ಇದೆ. ನೋಟಿಸ್ ಕೊಟ್ಟಿರುವ ಬಗ್ಗೆ ತೀರ್ಮಾನ ಮಾಡಿರುವುದೇ ತಪ್ಪಾದರೆ ಹೇಗೆ ? ದಬ್ಟಾಳಿಕೆ ಮತ್ತು ದೌರ್ಜನ್ಯವೇ ಮುಖ್ಯ ಆಗೋದಾದ್ರೆ ಹೇಗೆ ? ಯಾವುದನ್ನು ಮಾಡಬಾರದಿತ್ತೂ ಅದು ಆಗಿದೆ. ಪ್ರತಿಷ್ಠೆ ಮುಖ್ಯ ಆಗಬಾರದು.
ನೀವು ಬಿಎಸಿ ಕರೆಯಬಹುದಿತ್ತಲ್ಲಾ ಎಂಬ ಅಭಿಪ್ರಾಯ ಇತ್ತು ?
ಬಿಎಸಿ ಕರೆಯಬೇಕೆಂದರೆ ಹೇಗೆ ? ಇದೆಲ್ಲ ಪೊಲಿಟಿಕಲ್ ಗೇಮ್ ಅಲ್ಲ. ಬಿಎಸಿ ಸಭೆಕರೆಯುವುದು ಕಲಾಪನಡೆಸಲಿಕ್ಕೆ.11ಗಂಟೆಗೆಕಲಾಪಕರೆಯಲಾಗಿತ್ತು. ಅಧಿವೇಶನ ಆರಂಭವಾದ ಮೇಲೆ ಯಾವ ವಿಷಯ ಚರ್ಚೆಯಾಗಬೇಕು ಎನ್ನುವುದು ಮಧ್ಯಾಹ್ನದ ಸಮಯದಲ್ಲಿ ಚರ್ಚೆ ನಡೆಸುವುದು. ಇದು ಆ ಹಂತಕ್ಕೆ ಹೋಗಲೇ ಇಲ್ಲ. ಪೀಠದ ವಿಚಾರದಲ್ಲಿ ರಾಜಕಾರಣ ಸರಿಯಲ್ಲ.
ಬಿಜೆಪಿಯವರು, ಅವರಿಗೆ ಸ್ಪಷ್ಟಬಹುಮತ ಇದೆ ಸಭಾಪತಿ ರಾಜೀನಾಮೆ ನೀಡಬೇಕು ಎನ್ನುತ್ತಾರೆ ?
ಹೌದು,ಅವರುಹೇಳಿರುವುದು ನೈತಿಕ ಮಟ್ಟದಲ್ಲಿ.ಬಿಜೆಪಿಯವರು ನೋಟಿಸ್ ಕೊಟ್ಟಾಗ ಬಹುಮತ ಇರ ಲಿಲ್ಲ. ಅವರಿಗೆ ಬಹುಮತ ಬಂದಿರುವುದು ಅನಿರ್ದಿಷ್ಟಾವಧಿ ಮುಂದೂಡಿದ ಮೇಲೆ, ಸದನವನ್ನು 11.30 ಕ್ಕೆ ಅನಿರ್ದಿಷ್ಟಾವಧಿಗೆ ಮುಂದೂಡಿದ ಮೇಲೆ ಜೆಡಿಎಸ್‌ನವರು 1.30ಕ್ಕೆ ಕಾರ್ಯದರ್ಶಿಗೆ ಬೆಂಬಲದ ಪತ್ರ ಕೊಟ್ಟಿದ್ದಾರೆ. ಇಲ್ಲಿ ಮತ್ತೂಂದು ಜೀವಂತ ಇರುವ ವಿಚಾರ ಇದೆಯಲ್ಲ. ಅದು ಇತ್ಯರ್ಥವಾಗಬೇಕಲ್ಲ. ಈಗಾಗಲೇ ಬಿಜೆಪಿ ನೋಟಿಸ್‌ಗೆ ಹಿಂಬರಹ ಕೊಟ್ಟಿರುವುದರಿಂದ ಹೊಸದಾಗಿ ನೋಟಿಸ್ ಕೊಟ್ಟರೆ ಅದನ್ನು ಪರಿಗಣಿಸಬಹುದು. ಅವರು ಬಹುಮತದ ಪಟ್ಟಿ ಮೊದಲೇ ಕೊಟ್ಟಿದ್ದರೆ ,ಈಪರಿಸ್ಥಿತಿ ಬರುತ್ತಿರಲಿಲ್ಲ.
ಈ ಬೆಳವಣಿಗೆಯ ಬಗ್ಗೆ ನಿಮಗೆ ಬೇಸರವಾಗಿದೆಯಾ?
ನನ್ನಿಂದ ಯಾವುದೇ ತಪ್ಪಾಗಿಲ್ಲ. ಹೀಗಾಗಿ ನನಗೆ ಯಾವುದೇ ಬೇಸರವಾಗಿಲ್ಲ. ತಪ್ಪು ಮಾಡಿದವರು ಬೇಸರ ಮಾಡಿಕೊಳ್ಳಬೇಕು. ಈಗ ನಡೆದಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಮುಂದೆ ಈ ರೀತಿಯ ಘಟನೆ ನಡೆಯದಂತೆ ಏನ್ ಮಾಡಬೇಕು ಎನ್ನುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ಯಾರದೋ ಸೀಟಿನಲ್ಲಿ ಯಾರೋ ಬಂದುಕೂಡುವುದು ಉಡಾಫೆಯಲ್ಲವೇ?
ಪಕ್ಷದ ವತಿಯಿಂದ ರಾಜೀನಾಮೆ ಕೊಡಬಾರದು ಎಂಬಒತ್ತಡ ಇದೆಯಾ?
ಕಾಂಗ್ರೆಸ್ ಒಂದು ಪಕ್ಷವಾಗಿ ಅದಕ್ಕೆ ಅದರದ್ದೇ ಆದ ನಿಲುವು ಇರಬಹುದು. ನನ್ನ ಪ್ರಕಾರ ಬಿಜೆಪಿಯವರು ನೀಡಿರುವ ನೋಟಿಸ್ ತಿರಸ್ಕೃತವಾಗಿರುವುದರಿಂದ ಅವರು ಮತ್ತೆ ನೋಟಿಸ್ ಕೊಟ್ಟರೆ ಅದನ್ನು ಪರಿಗಣಿಸಿ ಮುಂದಿನ ತೀರ್ಮಾನಕೈಗೊಳ್ಳಬಹುದು.
ಘಟನೆ ಬಗ್ಗೆ ಯಾರಿಗಾದರೂ ಪತ್ರ ಬರೆಯುತ್ತಿದ್ದೀರಾ ? :
ಆ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಇದು ಪೂರ್ವ ನಿಯೋಜಿತ ಇದ್ದ ಹಾಗಿದೆ. ಅಧಿಕಾರಿಗಳು ಯಾವುದನ್ನು ಮಾಡಲು ಬರುವುದಿಲ್ಲ ಎನ್ನುವುದನ್ನುಸ್ಪಷ್ಟವಾಗಿ ಸದಸ್ಯರಿಗೆ ಹೇಳಬೇಕಾಗುತ್ತದೆ. ಸದಸ್ಯರಿಗೆ ಸ್ಪಷ್ಟವಾದ ಮಾಹಿತಿಗಳು ಗೊತ್ತಿರುವುದಿಲ್ಲ. ಅಧಿಕಾರಿಗಳು ಅಂತಹದರ ಬಗ್ಗೆ ಸದಸ್ಯರಿಗೆ ಮಾಹಿತಿನೀಡಬೇಕು. ಸರ್ಕಾರ ಸದನಕರೆಯಲು ಹೇಳಿದ ಮೇಲೆ ಸಭೆಕರೆದಿದ್ದು,ಅಜೆಂಡಾದಲ್ಲಿ ಗೋಹತ್ಯೆ, ಪ್ರವಾಹದ ಬಗ್ಗೆ ಚರ್ಚೆ, ಪ್ರಶ್ನೋತ್ತರ,330ರಡಿಚರ್ಚೆ, ಗಮನ ಸೆಳೆಯುವ ಸೂಚನೆ ಎಲ್ಲದಕ್ಕೂ ಅವಕಾಶ ಇತ್ತು. ಉಪ ಸಭಾಪತಿಯನ್ನುಕೂರಿಸದೇ ಇದ್ದಿದ್ದರೆ ಏನೂ ಆಗುತ್ತಿರಲಿಲ.
–ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
ಹೈಕಮಾಂಡ್ ಸೂಚನೆಗೆ ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ: ಜಿ.ಪರಮೇಶ್ವರ್
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.