ಪರಿಷತ್ ಆಡಳಿತ ನಿರ್ವಹಣೆ ಪೇಪರ್‌ಲೆಸ್
Team Udayavani, Feb 3, 2018, 11:10 AM IST
ಬೆಂಗಳೂರು: ರಾಜ್ಯ ವಿಧಾನ ಪರಿಷತ್ ಆಡಳಿತ ನಿರ್ವಹಣೆಯನ್ನು ಕಾಗದರಹಿತವನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿಧಾನ ಪರಿಷತ್ ಸಭಾಪತಿ ಡಿ. ಎಚ್.ಶಂಕರ ಮೂರ್ತಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಲಕ್ನೋದಲ್ಲಿ ನಡೆದ ಮುಖ್ಯ ಸಚೇತಕರ ಸಮಾವೇಶದಲ್ಲಿ ವಿಧಾನ ಮಂಡಲ ಸಚಿವಾಲಯವನ್ನು ಕಾಗದ ರಹಿತ ಮಾಡಲು ಕೇಂದ್ರ ಸರ್ಕಾರ ಶೇ. 95 ಹಣಕಾಸಿನ ನೆರವು ನೀಡುವುದಾಗಿ ಹೇಳಿದೆ. ಈ ಹಿನ್ನೆಲೆಯಲ್ಲಿ ಕಾಗದ ರಹಿತ ಪರಿಷತ್ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು. ದೇಶದಲ್ಲಿ ಹರಿಯಾಣ ವಿಧಾನಸಭೆ ಕಾಗದ ರಹಿತವಾಗಿ ಕಾರ್ಯ ಕಲಾಪ ನಡೆಸುತ್ತಿದೆ. ಮಹಾರಾಷ್ಟ್ರ ಮತ್ತು ರಾಜಸ್ಥಾನ ಕೂಡ ಇದೇ ಮಾದರಿ ಅನುಸರಿಸಿದೆ. ರಾಜ್ಯ ವಿಧಾನ ಮಂಡಲವೂ ಕಾಗದ ರಹಿತ ಮಾಡಲಾಗುವುದು ಎಂದರು. ಈ ಕುರಿತು ಚುನಾವಣೆ ನಂತರ ಎಲ್ಲಾ ಶಾಸಕರಿಗೂ ತರಬೇತಿ ನೀಡಲಾಗುವುದು. ಜನಪ್ರತಿನಿಧಿಗಳು ತಂತ್ರಜ್ಞಾನ ಅಳವಡಿಸಿಕೊಳ್ಳುವ ಕುರಿತು ಸ್ವತಃ ಪ್ರಧಾನಿಯೇ ಸಂಸದರಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಶಾಸಕರು ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು
ಹೇಳಿದರು.
5ರಿಂದ ಅಧಿವೇಶನ ಆರಂಭ
ಫೆ.5ರಿಂದ ಈ ವರ್ಷದ ಮೊದಲ ಅಧಿವೇಶನ ಆರಂಭವಾಗಲಿದೆ. ಮೊದಲ ದಿನ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ
ಭಾಷಣ ಮಾಡಲಿದ್ದಾರೆ. ಫೆ.9ರವರೆಗೂ ಅಧಿವೇಶನ ನಡೆಯಲಿದ್ದು, ಫೆ.16ರಿಂದ 28ರವರೆಗೆ ಬಜೆಟ್ ಅಧಿವೇಶನ ನಡೆಯಲಿದೆ.
ಈ ಅಧಿವೇಶನದಲ್ಲಿ ಮೂರು ವಿಧೇಯಕಗಳು ಮಂಡನೆಯಾಗಲಿವೆ. ಇತ್ತೀಚಿನ ದಿನಗಳಲ್ಲಿ ಮಹತ್ವದ ವಿಧೇಯಕಗಳು ಚರ್ಚೆಯಾಗದೇ ಅಂಗೀಕಾರವಾಗುತ್ತಿಲ್ಲ. ವಿಧಾನ ಮಂಡಲದ ಅಧಿವೇಶನ ವರ್ಷಕ್ಕೆ ಕನಿಷ್ಠ 60 ದಿನ ನಡೆಯಬೇಕು ಎಂದು ನಿಯಮ ಮಾಡಿದ್ದರೂ ಕೇವಲ ಒಂದು ವರ್ಷ ಮಾತ್ರ 60 ದಿನ ಅಧಿವೇಶನ ನಡೆಸಿದ್ದು, ನಾವೇ ಮಾಡಿದ ನಿಯಮ ಪಾಲನೆ ಮಾಡಲು ಆಗುತ್ತಿಲ್ಲ ಎಂದು ಸಭಾಪತಿ ಶಂಕರಮೂರ್ತಿ ಬೇಸರ ವ್ಯಕ್ತಪಡಿಸಿದರು.
ವಿಧಾನ ಮಂಡಲದ ಶಾಸಕರ ಸಂಬಳ ಹೆಚ್ಚಳ ಮಾಡುವ ಕುರಿತಂತೆ ಯಾವುದೇ ಪ್ರಸ್ತಾಪ ಬಂದಿಲ್ಲ. ಸಂಬಳ ಹೆಚ್ಚಳಕ್ಕೆ ಪ್ರಸ್ತಾಪ ಬಂದರೂ ಅವಕಾಶ ನೀಡುವುದಿಲ್ಲ.
ಡಿ.ಎಚ್.ಶಂಕರಮೂರ್ತಿ, ವಿಧಾನಪರಿಷತ್ ಸಭಾಪತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
CTRavi; ಯಾರು,ಯಾರನ್ನು,ಯಾವಾಗ ಖರೀದಿಸಲು ಪ್ರಯತ್ನಿಸಿದ್ದಾರೆ?: ಸಿಎಂಗೆ ಸಿ.ಟಿ.ರವಿ ಪ್ರಶ್ನೆ
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.