ಚರಂಡಿಯಲ್ಲಿ ತುಕ್ಕು ಹಿಡಿದ ಕಂಟ್ರಿ ಪಿಸ್ತೂಲುಗಳು
Team Udayavani, Feb 13, 2020, 3:04 AM IST
ಬೆಳಗಾವಿ: ತುಕ್ಕು ಹಿಡಿದ ನಾಲ್ಕು ಕಂಟ್ರಿ ಪಿಸ್ತೂಲುಗಳು ತಾಲೂಕಿನ ವಾಘವಡೆ ಗ್ರಾಮದ ಹೊರವಲಯದ ಚರಂಡಿಯಲ್ಲಿ ಪತ್ತೆಯಾಗಿವೆ. ಗ್ರಾಮದ ಹೊರವಲಯದ ಚರಂಡಿಯ ಕಸದಲ್ಲಿ ಬಿದ್ದಿದ್ದ ನಾಲ್ಕು ಕಂಟ್ರಿ ಪಿಸ್ತೂಲುಗಳನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪಿಸ್ತೂಲುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪಿಸ್ತೂಲುಗಳು ಇಲ್ಲಿಗೆ ಹೇಗೆ ಬಂದವು?,
ಯಾರು ಇವುಗಳನ್ನು ಎಸೆದಿರಬಹುದು?, ಇದಕ್ಕೆ ಏನಾದರೂ ಅಪರಾಧ ಪ್ರಕರಣದ ಹಿನ್ನೆಲೆ ಇದೆಯೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 15-20 ವರ್ಷಗಳ ಹಿಂದಿನ ಕಮ್ಮಾರಿಕೆಯಲ್ಲಿ ತಯಾರಾದ ಲೋಹದ ಪಿಸ್ತೂಲುಗಳು ಇದಾಗಿದ್ದು, ಸುಮಾರು ಐದಾರು ತಿಂಗಳ ಹಿಂದೆಯೇ ಇಲ್ಲಿ ಎಸೆದು ಹೋಗಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಪ್ರತಿ ಕ್ರಿಯೆ ನೀಡಿರುವ ಬೆಳಗಾವಿ ಗ್ರಾಮೀಣ ಪೊಲೀಸರು, ಈ ಕುರಿತು ವಿಜಯಪುರ ಪೊಲೀಸರನ್ನು ಸಂಪರ್ಕಿಸಲಾಗಿದೆ.
ಅನೇಕ ವರ್ಷಗಳ ಹಿಂದೆ ಇಂತಹ ಪಿಸ್ತೂಲು ಗಳು ಬಳಕೆಯಲ್ಲಿದ್ದವು. ಈಗ ಈ ತರಹದ ಪಿಸ್ತೂಲು ಗಳು ಎಲ್ಲಿಯೂ ಬಳಕೆ ಆಗಿಲ್ಲ ಎಂಬ ಮಾಹಿತಿ ಸಿಕ್ಕಿದೆ ಎಂದು ತಿಳಿಸಿದರು. ಬೆಳಗಾವಿ ಗ್ರಾಮೀಣ ಠಾಣೆ ಇನ್ಸ್‌ಪೆಕ್ಟರ್ ಸುನೀಲ ಕುಮಾರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕಂಟ್ರಿ ಪಿಸ್ತೂಲುಗಳನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಮುಂಚೆ ಇಂತಹ ಕಂಟ್ರಿ ಪಿಸ್ತೂಲುಗಳು ಜಪ್ತಿ ಆಗಿ ವೆಯೇ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.