ಕೋವಿಡ್: ಇನ್ನು 7 ದಿನ ಹೋಂ ಐಸೊಲೇಶನ್
14 ದಿನಗಳ ಬದಲಾಗಿ ಹೊಸ ವ್ಯವಸ್ಥೆ 10 ದಿನಕ್ಕೇ ಬಿಡುಗಡೆ, ಸೋಂಕು ಪರೀಕ್ಷೆ ಇಲ್ಲ
Team Udayavani, Aug 12, 2020, 6:15 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳುವವರಿಗೆ 14 ದಿನಗಳ ಹೋಂ ಕ್ವಾರಂಟೈನ್ ಬದಲಾಗಿ ಏಳು ದಿನ ಮನೆಯಲ್ಲಿಯೇ ಐಸೊಲೇಶನ್ ನಿಯಮ ಜಾರಿಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಸೋಂಕು ಲಕ್ಷಣ ಇಲ್ಲದವರು ಮತ್ತು ಅಲ್ಪ ಪ್ರಮಾಣದ ಲಕ್ಷಣ ಹೊಂದಿರುವ ಪ್ರಕರಣಗಳಲ್ಲಿ ಸೋಂಕುಪೀಡಿತರು ಆಸ್ಪತ್ರೆ, ಕೊರೊನಾ ಕೇರ್ ಸೆಂಟರ್‌ನಿಂದ ಬಿಡುಗಡೆಯಾದ ಬಳಿಕ ಕಡ್ಡಾಯವಾಗಿ 14 ದಿನಗಳ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕಿತ್ತು. ಸದ್ಯ ಏಳು ದಿನಗಳ ಐಸೊಲೇಶನ್‌ಗೆ ಸೂಚಿಸಲಾಗಿದೆ. 14 ದಿನಗಳ ಹೋಂ ಕ್ವಾರಂಟೈನ್ ನಿಯಮ ಕೈಬಿಡಲಾಗಿದೆ.
10 ದಿನಕ್ಕೆ ಬಿಡುಗಡೆ: ಸೋಂಕು ಪರೀಕ್ಷೆ ಇಲ್ಲ
ಸೋಂಕು ಲಕ್ಷಣ ಇಲ್ಲದ ಮತ್ತು ಅಲ್ಪ ಪ್ರಮಾಣದ ಲಕ್ಷಣ ಹೊಂದಿರುವ ಪ್ರಕರಣಗಳಲ್ಲಿ ಪರೀಕ್ಷೆ ನಡೆದ ದಿನದಿಂದ 10ನೇ ದಿನಕ್ಕೆ ಬಿಡುಗಡೆ ಮಾಡಲು ಸೂಚಿಸಲಾಗಿದೆ. ಹಿಂದೆ ಸೋಂಕುಪೀಡಿತರು ಆಸ್ಪತ್ರೆ, ಕೊರೊನಾ ಕೇರ್ ಸೆಂಟರ್‌ಗೆ ದಾಖಲಾಗಿ 10 ದಿನದ ಬಳಿಕ ಬಿಡುಗಡೆ ಮಾಡಲಾಗುತ್ತಿತ್ತು. ಬಿಡುಗಡೆ ವೇಳೆ ಸೋಂಕು ಪರೀಕ್ಷೆ ಅಗತ್ಯವಿಲ್ಲ ಎಂದು ಮತ್ತೂಮ್ಮೆ ಸ್ಪಷ್ಟಪಡಿಸಲಾಗಿದೆ. ಒಂದು ವೇಳೆ ಬಿಡುಗಡೆ ಬಳಿಕ ಲಕ್ಷಣ ಕಾಣಿಸಿಕೊಂಡರೆ ಸಮೀಪದ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗಬೇಕು ಎಂದು ಸೂಚಿಸಿದೆ.
ಆರಂಭದಲ್ಲಿ ಸೋಂಕು ಲಕ್ಷಣ ಕಾಣಿಸಿಕೊಂಡು ಚಿಕಿತ್ಸೆ ಬಳಿಕ ಗುಣಮುಖರಾದವರಿಗೆ ಕೊನೆಯ ಮೂರು ದಿನ ಸೋಂಕು ಲಕ್ಷಣ ಇಲ್ಲದಿದ್ದರೆ 10ನೇ ದಿನ ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು. ಒಂದು ವೇಳೆ 14 ದಿನ ಸೋಂಕು ಲಕ್ಷಣ ಇದ್ದರೆ ಮೂರು ದಿನಗಳ ಬಳಿಕ, ಅಂದರೆ 17ನೇ ದಿನ ಸೋಂಕು ಪರೀಕ್ಷೆ ಮಾಡದೆ ಬಿಡುಗಡೆ ಮಾಡಬಹುದು. ಸೋಂಕುಪೀಡಿತರ ಬಿಡುಗಡೆಗೆ ಮುನ್ನ ಮೂರು ದಿನ ಸೋಂಕಿನ ಲಕ್ಷಣವಿರಬಾರದು. ಉಳಿದಂತೆ ಎಚ್‌ಐವಿ, ಕಸಿ ಚಿಕಿತ್ಸೆಗೆ ಒಳಗಾದ ಸೋಂಕುಪೀಡಿತರಿಗೆ ಸಂಪೂರ್ಣ ಗುಣಮುಖರಾದ ಬಳಿಕ ಒಮ್ಮೆ ಸೋಂಕು ಪರೀಕ್ಷೆ ಮಾಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕೆಂದು ಪರಿಷ್ಕೃತ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಮನೆಯಲ್ಲಿ ಆರೈಕೆ: ಹೋಂ ಕೇರ್
ಸೋಂಕು ದೃಢಪಟ್ಟು ಲಕ್ಷಣ ಇಲ್ಲದೆ ಮನೆಯಲ್ಲಿಯೇ ಆರೈಕೆಯಲ್ಲಿದ್ದರೆ ಅದನ್ನು “ಹೋಂ ಕೇರ್’ ಎಂದು ನಮೂದಿಸಬೇಕು. ಲಕ್ಷಣ ಕಾಣಿಸಿಕೊಂಡ ಅನಂತರದ ಹತ್ತು ದಿನ ಅಥವಾ ಪರೀಕ್ಷೆಗೆ ಒಳಗಾದ ಅನಂತರದ 10 ದಿನ ಹೋಂ ಕೇರ್‌ನಲ್ಲಿರಬೇಕು. ಅನಂತರ 7 ದಿನ ಹೋಂ ಐಸೊಲೇಶನ್‌ನಲ್ಲಿರಬೇಕು. ಜತೆಗೆ 60 ವರ್ಷ ಮೇಲ್ಪಟ್ಟ ಸೋಂಕುಪೀಡಿತರಿಗೂ ವೈದ್ಯರ ತಪಾಸಣೆ ಬಳಿಕ ಹೋಂ ಕೇರ್‌ಗೆ ಅವಕಾಶ ನೀಡಲಾಗಿದೆ. ಸೋಂಕುಪೀಡಿತ ಗರ್ಭಿಣಿಯರು ಹೆರಿಗೆ ದಿನಾಂಕದ ಎರಡು ವಾರದ ವರೆಗೆ ಹೋಂ ಕೇರ್‌ನಲ್ಲಿರಬಹುದು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ವ್ಯತ್ಯಾಸ ಏನು?
ಕ್ವಾರಂಟೈನ್ ಎಂದರೆ ಸೋಂಕುಪೀಡಿತನ ಸಂಪರ್ಕ, ಸೋಂಕು ಲಕ್ಷಣ ಇದ್ದಾಗ ಬಾಹ್ಯ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧ್ಯವಾಗಬಾರದು ಎಂದು ಮನೆಯಲ್ಲಿಯೇ ಇರುವುದು. ಸ್ವಯಂ ಐಸೊಲೇಶನ್ ಎಂದರೆ ಮನೆಯಲ್ಲಿ ಆರೈಕೆಯಲ್ಲಿರುವ ಜತೆಗೆ ಸ್ವಯಂ ಆರೋಗ್ಯದ ಮೇಲೆ ನಿಗಾ ವಹಿಸುವುದು ಎಂದರ್ಥ ಎಂದು ಆರೋಗ್ಯ ಇಲಾಖೆ ವೈದ್ಯರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.