ರಾಜ್ಯದಲ್ಲಿಂದು 1255 ಕೋವಿಡ್ ಪಾಸಿಟವ್: ಮೂವರು ಸಾವು
Team Udayavani, Aug 24, 2022, 9:26 PM IST
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮರಣ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತಗಳು ಕಂಡು ಬರುತ್ತಿವೆ. ಪ್ರಸ್ತುತ ಸೋಂಕಿನಿಂದ ಮರಣ ಹೊಂದುತ್ತಿರುವವರಲ್ಲಿ ಯುವಜನರ ಸಂಖ್ಯೆ ಹೆಚ್ಚಾಗುತ್ತಿದೆ.
ಬುಧವಾರ ರಾಜ್ಯದ ಧಾರವಾಡ, ಮೈಸೂರು ಹಾಗೂ ಹಾಸನ ಜಿಲ್ಲೆಯ ಮೂವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಶೇ. 0.23 ಮರಣ ದರ ದಾಖಲಾಗಿದೆ. 2,186 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 9,775 ಸಕ್ರಿಯ ಪ್ರಕರಣಗಳಿವೆ.
ಬುಧವಾರ 1,255 ಪಾಸಿಟಿವ್ ವರದಿಯಾಗಿದೆ. ಬೆಂಗಳೂರು ನಗರ 747, ಮೈಸೂರು 114, ರಾಮನಗರ 49, ಹಾಸನ 45, ಕೋಲಾರ 29, ಶಿವಮೊಗ್ಗ 24, ರಾಯಚೂರು 21, ಬಳ್ಳಾರಿ 20, ಮಂಡ್ಯ, ಧಾರವಾಡ 19, ಬೆಂಗಳೂರು ಗ್ರಾಮಾಂತರ 18, ಕಲಬುರಗಿ 17, ಚಿಕ್ಕಮಗಳೂರು 16, ಉತ್ತರಕನ್ನಡ 14, ಕೊಡಗು , ದಕ್ಷಿಣಕನ್ನಡ 13, ಬೆಳಗಾವಿ 11, ತುಮಕೂರು 10, ಚಿಕ್ಕಬಳ್ಳಾಪುರ, ದಾವಣಗೆರೆ, ಉಡುಪಿ 9, ಚಾಮರಾಜನಗರ, ಹಾವೇರಿ 7, ಬಾಗಲಕೋಟೆ, ವಿಜಯಪುರ 6, ಚಿತ್ರದುರ್ಗ ಜಿಲ್ಲೆಯಲ್ಲಿ ಒಂದು ಪಾಸಿಟಿವ್ ವರದಿಯಾಗಿದೆ.
ಹೆಚ್ಚಿದ ಉಪತಳಿ ಪ್ರಕರಣ
ಜು. 1ರಿಂದ ಆ. 24ರ ವರೆಗೆ ಜಿನೋಮ್ ಸಿಕ್ವೇನ್ಸಿಂಗ್‌ಗೆ ಕಳುಹಿಸಲಾದ ವರದಿಯಲ್ಲಿ 2,759 ಮಾದರಿಗಳಲ್ಲಿ ಒಮಿಕ್ರಾನ್ ಬಿ 1, ಬಿ2, ಬಿಎ3, ಬಿಎ4, ಬಿಎ5 ಉಪತಳಿ ವರದಿಯಾಗಿದೆ. ಕಳೆದೊಂದು ತಿಂಗಳಿನಲ್ಲಿ ಜಿನೋಮ್ ಸಿಕ್ವೇನ್ಸಿಂಗ್ ಕಳುಹಿಸಿದ ಮಾದರಿಯಲ್ಲಿ ಶೇ. 95ರಷ್ಟು ಪ್ರಕರಣಗಳಲ್ಲಿ ಒಮಿಕ್ರಾನ್ ದೃಢವಾಗಿದೆ. ಉಳಿದಂತೆ ಬಿಎ1 ಶೇ. 14, ಬಿಎ2 ಶೇ. 56, ಬಿಎ3 ಶೇ.0. 19, ಬಿಎ4 ಶೇ. 1. 37, ಬಿಎ5 ಶೇ. 26.93 ಪ್ರಕರಣ ದಾಖಲಾಗಿದೆ. ರೂಪಾಂತರಿ ಪ್ರಕರಣಗಳು ವರದಿಯಾಗಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.