2,000ಕ್ಕಿಂತ ಕೆಳಕ್ಕಿಳಿದ ಕೋವಿಡ್
Team Udayavani, Nov 10, 2020, 1:07 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ನಾಲ್ಕು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಕೊರೊನಾ ಸೋಂಕು ಪ್ರಕರಣಗಳು ಎರಡು ಸಾವಿರಕ್ಕಿಂತ ಕೆಳಕ್ಕಿಳಿದಿದ್ದು, ಸೋಂಕಿತರ ಸಾವು ಕೂಡ 20ರೊಳಗೆ ದಾಖಲಾಗಿದೆ.
ಸೋಮವಾರ 1,963 ಮಂದಿಗೆ ಸೋಂಕು ತಗಲಿದ್ದು, 2,686 ಮಂದಿ ಗುಣಮುಖರಾಗಿದ್ದಾರೆ. ಜತೆಗೆ 19 ಸೋಂಕಿತರು ಮೃತಪಟ್ಟಿದ್ದಾರೆ. ಬೆಂಗಳೂರು (978) ಹೊರತುಪಡಿಸಿದರೆ ರಾಜ್ಯ ಯಾವ ಜಿಲ್ಲೆಗಳಲ್ಲಿಯೂ ಹೊಸ ಕೊರೊನಾ ಪ್ರಕಣಗಳು ನೂರರ ಗಡಿ ದಾಟಿಲ್ಲ. ಐದು ಜಿಲ್ಲೆಗಳಲ್ಲಿ ಬೆರಳೆಣಿಕೆ ಮಂದಿಗೆ ಸೋಂಕು ತಗಲಿದ್ದು, 19 ಜಿಲ್ಲೆಗಳಲ್ಲಿ ಸೋಂಕಿತರ ಸಾವು ವರದಿಯಾಗಿಲ್ಲ. ಈ ಹಿಂದೆ ಜುಲೈ 7ರಂದು ರಾಜ್ಯದ ಸೋಂಕು ಪ್ರಕರಣಗಳು 1,492 ವರದಿಯಾಗಿದ್ದವು. ಅನಂತರ ಏರಿಕೆ ಹಾದಿ ಹಿಡಿದಿತ್ತು. ಸೋಂಕಿತರ ಸಾವು ಕೂಡ ಜುಲೈ ಬಳಿಕ ಇದೇ ಮೊದಲ ಬಾರಿ 20ಕ್ಕಿಂತ ಕಡಿಮೆಯಾಗಿವೆ. ಕಳೆದ ವಾರಷ್ಟೇ ಪ್ರಕರಣಗಳು 3,000ದಿಂದ 2,000ಕ್ಕೆ ಇಳಿದಿತ್ತು.
ಪರೀಕ್ಷೆಯೂ ಇಳಿಕೆ
ನಿತ್ಯ ಒಂದು ಲಕ್ಷ ನಡೆಯುತ್ತಿದ್ದ ಸೋಂಕು ಪರೀಕ್ಷೆಗಳು ಈಗ 84 ಸಾವಿರಕ್ಕೆ ಇಳಿಕೆಯಾಗಿವೆ. ಈ ರೀತಿ ಪರೀಕ್ಷೆಗಳು ಕಡಿಮೆಯಾಗಿರುವುದು ಹೊಸ ಪ್ರಕರಣಗಳು ಇಳಿಕೆಯಾಗಲು ಕಾರಣ ಎನ್ನಲಾಗಿದೆ. ರಾಜ್ಯದಲ್ಲಿ ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 8.48 ಲಕ್ಷಕ್ಕೆ ತಲುಪಿದ್ದು, ಈ ಪೈಕಿ 8.04 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಈ ಮೂಲಕ ರಾಜ್ಯದ ಗುಣಮುಖ ದರ ಶೇ. 94.7ಕ್ಕೆ ಏರಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.