ವಿದೇಶದಲ್ಲಿ ನೆಗೆಟಿವ್,ರಾಜ್ಯದಲ್ಲಿ ಪಾಸಿಟಿವ್
Team Udayavani, Dec 18, 2021, 12:55 PM IST
ಬೆಂಗಳೂರು: ಕೊರೊನಾ ರೂಪಾಂತರಿ ಒಮಿಕ್ರಾನ್ ಪ್ರಕರಣಗಳು ಒಂದೊಂದಾಗಿ ಪತ್ತೆಯಾಗುತ್ತಿವೆ. ಆದರೆ ಅದರ ಮೂಲ ಮಾತ್ರ ಇನ್ನೂ ನಿಗೂಢವಾಗಿದೆ!
ಅಂತಾರಾಷ್ಟ್ರೀಯ ಪ್ರಯಾಣಿಕರು ಆಯಾನಿಲ್ದಾಣಗಳಿಂದ ವಿಮಾನ ಏರುವಾಗ ನೆಗೆಟಿವ್ ಆಗಿರುತ್ತಾರೆ. ರಾಜ್ಯಕ್ಕೆ ಬಂದಿಳಿದಾಗ ಪಾಸಿಟಿವ್‌ಆಗಿ ಮಾರ್ಪಾಡುತ್ತಿದ್ದಾರೆ. ಹಾಗಿದ್ದರೆ ಈಸೋಂಕಿನ ಮೂಲ ಯಾವುದು ಎಂಬ ಜಿಜ್ಞಾಸೆ ಎಲ್ಲರನ್ನೂ ಕಾಡತೊಡಗಿದೆ.
ರಾಜ್ಯದಲ್ಲಿ ಪತ್ತೆಯಾದ 8 ಒಮಿಕ್ರಾನ್ ಪ್ರಕರಣದಲ್ಲಿ 5 ವಿದೇಶಿ ಪ್ರಯಾಣದ ಹಿನ್ನೆಲೆಇರುವವರಿಗೆ ಸೋಂಕು ದೃಢಪಟ್ಟಿದೆ. ಅವರಲ್ಲಿ ಯುಕೆಯಿಂದ ಬಂದ 19 ವರ್ಷದ ಯುವತಿ, ದಕ್ಷಿಣ ಆಫ್ರಿಕಾದ 66 ವರ್ಷದ ವ್ಯಕ್ತಿ ಹಾಗೂ ನೈಜೀರಿಯಾದ ವ್ಯಕ್ತಿಯಲ್ಲಿ 72 ಗಂಟೆಯೊಳಗಿನಆರ್‌ಟಿಪಿಸಿಆರ್ ನೆಗೆಟಿವ್ ವರದಿಯಿಂದಸಲ್ಲಿಕೆ ಮಾಡಿದ್ದು, ರಾಜ್ಯದಲ್ಲಿ ಪರೀಕ್ಷಿಸಿದಾಗ ಪಾಸಿಟಿವ್ ಪತ್ತೆಯಾಗಿದೆ. ಕಳೆದ 15 ದಿನಗಳಲ್ಲಿ ಸುಮಾರು 10ರಿಂದ 20ಕ್ಕೂ ಅಧಿಕ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಪಾಸಿಟಿವ್‌ಬಂದಿದ್ದು, ಅವರಲ್ಲಿ ಕೆಲವರಿಗೆ ಒಮಿಕ್ರಾನ್‌ಪತ್ತೆಯಾಗಿಲ್ಲ, ಇನ್ನೂ ಕೆಲವರ ಜಿನೋಮ್ ಸಿಕ್ವೇನ್ಸಿಂಗ್ ವರದಿ ಬಾಕಿ ಇದೆ.
ಅಲ್ಲಿ ನೆಗೆಟಿವ್ ಇಲ್ಲಿ ಪಾಸಿಟಿವ್: ದೇಶದಿಂದ ಇನ್ನೊಂದು ದೇಶಕ್ಕೆ ಪ್ರಯಾಣಿಸಬೇಕಾದರೆ ಕಡ್ಡಾಯವಾಗಿ 72 ಗಂಟೆಯೊಳಗಿನ ಕೊರೊನಾ ನೆಗೆಟಿವ್ ವರದಿ ಹೊಂದಿರಬೇಕು. ಈ ವರದಿ ಸರಕಾರ ಪ್ರಮಾಣಿಕೃತ ಖಾಸಗಿ ಅಥವಾ ಸರಕಾರಿ ಲ್ಯಾಬ್‌ಗಳಲ್ಲಿನ ನೆಗೆಟಿವ್ ವರದಿ ಹೊಂದಿರಬೇಕು. ಇಂಥ ವರದಿಯೊಂದಿಗೆ ಪ್ರಸ್ತುತ ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಯಾಣಿಕರು ಕೆಲವೇ ಗಂಟೆಯಲ್ಲಿ ಸೋಂಕಿಗೆ ತುತ್ತಾಗುತ್ತಿದ್ದಾರೆ.
ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಶೇ.68ಕ್ಕೆ ಏರಿಕೆ: ಒಮಿಕ್ರಾನ್ ಸೋಂಕು
ಹರಡುತ್ತಿರು ಹೈರಿಸ್ಕ್ ರಾಷ್ಟ್ರಗಳಿಂದ ರಾಜ್ಯಕ್ಕೆ ಆಗಮಿಸುವವರ ಸಂಖ್ಯೆ ವಾರದಲ್ಲಿ ಶೇ.68ಕ್ಕೆ ಏರಿಕೆಯಾಗಿದೆ. ಕಳೆದ 47ದಿನಗಳಲ್ಲಿ ಹೈರಿಸ್ಕ್ ದೇಶಗಳಿಂದ 10,336 ಮಂದಿ ಅಂತಾರಾಷ್ಟ್ರೀಯಪ್ರಯಾಣಿಕರು ಆಗಮಿಸಿದ್ದಾರೆ. ಡಿ.1ರಿಂದಡಿ.5ರ ವರೆಗೆ 1218 ಮಂದಿ, ಡಿ.6ರಿಂದ 9ವರೆಗೆ 2,549 ಮಂದಿ ಹಾಗೂ ಡಿ.10ರಿಂದ 15ವರೆಗೆ ಅವಧಿಯಲ್ಲಿ ಸುಮಾರು 3,739 ಮಂದಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ನಕಲಿ ದಾಖಲೆ ಗುಮಾನಿ :
66ರ ವರ್ಷದ ಒಮಿಕ್ರಾನ್ ಸೋಂಕಿತ ದಕ್ಷಿಣ ಆಫ್ರಿಕಾ ವ್ಯಕ್ತಿ ನಕಲಿ ದಾಖಲೆನೀಡಿ, ವಿದೇಶಕ್ಕೆ ಹಾರಿರುವ ಬಗ್ಗೆಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಅಂತೆಯೇ ಭಾರತಕ್ಕೆ ಆಗಮಿಸಲು ನಕಲಿವರದಿಗಳನ್ನು ಆಯಾ ವಿಮಾನನಿಲ್ದಾಣದಲ್ಲಿ ಸಲ್ಲಿಕೆಯಾಗುತ್ತಿದೆಯೇ ಎನ್ನುವ ಗುಮಾನಿ ಕಾಡುತ್ತಿದೆ.
ಕೋವಿಡ್ ವೈರಸ್ ದೇಹಕ್ಕೆ ಸೇರಿದ ತತ್ ಕ್ಷಣ ನಡೆಸಲಾಗುವ ಆರ್‌ಟಿಪಿಸಿಆರ್ ವರದಿಯಲ್ಲಿ ಪಾಸಿಟಿವ್ ಪತ್ತೆಯಾಗುವ ಸಾಧ್ಯತೆ ಕಡಿಮೆ ಇದೆ. ದೇಹ ಸೇರಿದ ವೈರಾಣು ಹಂತ ಹಂತವಾಗಿ ವೃದ್ಧಿಯಾದಂತೆ ಕೆಲವರಲ್ಲಿ ಕೊರೊನಾ ಲಕ್ಷಣಗಳು ಪತ್ತೆಯಾದರೆ ಇನ್ನೂ ಕೆಲವರಲ್ಲಿ ಲಕ್ಷಣಗಳು ಕಂಡು ಬರುವುದಿಲ್ಲ. ಈ ವೇಳೆ ವ್ಯಕ್ತಿಯ ಸ್ವಾéಬ್ ಪರೀಕ್ಷಿಸಿ ದಾಗ ಕೋವಿಡ್ ಪಾಸಿಟಿವ್ ಕಂಡು ಬರುತ್ತದೆ. ಈ ನಿಟ್ಟಿನಲ್ಲಿ ಹೈರಿಸ್ಕ್ ರಾಷ್ಟ್ರಗಳಿಂದ ಬರುವವರು ಕಡ್ಡಾಯವಾಗಿ ಹೋಮ್ ಅಥವಾ ಆಸ್ಪತ್ರೆಯಲ್ಲಿ ಐಸೋಲೇಶನ್‌ಗೆ ಒಳಗಾಬೇಕು. ಇಲ್ಲವಾದರೆ ಸೋಂಕು ಇತರರಿಗೂ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. -ಡಾ.ನಸೀಮ್ ಎ.ಹುಸೇನ್, ಹಿರಿಯ ವೈದ್ಯಾಧಿಕಾರಿ, ಸ್ಪೆಶಲಿಸ್ಟ್ ಆಸ್ಪತ್ರೆ ಬೆಂಗಳೂರು
-ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.