ವಿದೇಶ ನಿರ್ಗಮಿತರಿಗೆ ಕಡ್ಡಾಯ ಪರೀಕ್ಷೆ
Team Udayavani, Nov 27, 2021, 5:30 AM IST
ಬೆಂಗಳೂರು: ಕೋವಿಡ್ ರೂಪಾಂತರ ಬಿ.1.1529 ಪತ್ತೆಯಾಗಿರುವ ದೇಶಗಳಿಂದ ಆಗಮಿಸುವ ಪ್ರಯಾಣಿಕರ ಕಡ್ಡಾಯ ಸೋಂಕು ಪರೀಕ್ಷೆ ನಡೆಸಿ ಒಂದು ವೇಳೆ ಸೋಂಕು ದೃಢಪಟ್ಟರೆ ವಂಶವಾಯಿ ಪರೀಕ್ಷೆಗೆ ಕಳಿಸುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಡೆಲ್ಟಾ ತಳಿಗಿಂತಲೂ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿರುವ ಈ ನೂತನ ರೂಪಾಂತರ ತಳಿಯು ಬೋಟ್ಸ್‌ವಾನ (3), ದಕ್ಷಿಣ ಆಫ್ರಿಕಾ (6), ಹಾಂಗ್‌ಕಾಂಗ್‌ನಲ್ಲಿ (1) ಪತ್ತೆಯಾಗಿದೆ. ಈ ದೇಶಗಳಿಂದ ರಾಜ್ಯಕ್ಕೆ ಆಗಮಿಸವ ಅಥವಾ ಪ್ರಯಾಣ ಹಿನ್ನೆಲೆ ಹೊಂದಿರುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿಯೇ ಕಡ್ಡಾಯ ಪರೀಕ್ಷೆಗೊಳಪಡಿಸಬೇಕು.
ಎರಡು ವಾರ ನಿಗಾದಲ್ಲಿರಿಸಬೇಕು. ಒಂದು ವೇಳೆ ಸೋಂಕು ದೃಢಪಟ್ಟರೇ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಆದ್ಯತೆ ಮೇರೆಗೆ ವಂಶವಾಯಿ ಪರೀಕ್ಷೆಗೆ ಕ್ರಮ ವಹಿಸಬೇಕು. ಜತೆಗೆ ಸೋಂಕಿತರ ಸಂಪರ್ಕಿತರ ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚಿಸಲಾಗಿದೆ.
ಹೊಸ ಪ್ರಕರಣ 400ಕ್ಕೆ ಹೆಚ್ಚಳ
ರಾಜ್ಯದಲ್ಲಿ ಐದು ದಿನಗಳಿಂದ ಕೊರೊನಾ ಸೋಂಕಿನ ಹೊಸ ಪ್ರಕರಣಗಳು ಏರಿಕೆಯಾಗುತ್ತಿದ್ದು, ಶುಕ್ರವಾರ 400 ಗಡಿದಾಟಿದ್ದು, ಒಂದೇ ವಾರದಲ್ಲಿ ದುಪ್ಪಟ್ಟಾಗಿದೆ. ಪರೀಕ್ಷೆ ಹೆಚ್ಚಳವಾಗದಿದ್ದರೂ ಸೋಂಕು ಏರಿರುವುದು ಆತಂಕ ಮೂಡಿಸಿದೆ.
ಇದನ್ನೂ ಓದಿ:ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆ ಪರಿಹರಿಸಲು ಸಚಿವ ನಾಗೇಶ್ ಭರವಸೆ
2 ಡೋಸ್ ಪಡೆದವರಿಗೂ ಸೋಂಕು
ಬೆಂಗಳೂರು ಹೊರ ವಲಯದ ಬೋರ್ಡಿಂಗ್ ಶಾಲೆಯ 33 ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜೊಂದರ 12 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಎರಡೂ ಡೋಸ್ ಲಸಿಕೆ ಪಡೆದ ಕಾಲೇಜು ವಿದ್ಯಾರ್ಥಿಗಳಲ್ಲೂ ಸೋಂಕು ದೃಢಪಟ್ಟಿರುವುದು ಆತಂಕ ಮೂಡಿಸಿದೆ.
ಧಾರವಾಡ: 182 ಮಂದಿಗೆ ಸೋಂಕು
ಧಾರವಾಡದ ಖಾಸಗಿ ವೈದ್ಯಕೀಯ ಕಾಲೇಜಿನ 66 ಮಂದಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಎಲ್ಲರಿಗೂ ಪರೀಕ್ಷೆ ನಡೆಸಿದ್ದು, ಈಗ 157 ವಿದ್ಯಾರ್ಥಿಗಳು ಹಾಗೂ 25 ವೈದ್ಯರು ಸೇರಿ ಒಟ್ಟು 182 ಜನರಿಗೆ ಸೋಂಕು ದೃಢಪಟ್ಟಿದೆ. ಆಸ್ಪತ್ರೆಯ ಹೊರರೋಗಿಗಳ ವಿಭಾಗದ ಸೇವೆಗಳು ಹಾಗೂ ಹೊಸ ರೋಗಿಗಳ ಪ್ರವೇಶವನ್ನು ನ.28ರವರೆಗೆ ಸ್ಥಗಿತಗೊಳಿಸಲಾಗಿದೆ. ಕಾಲೇಜಿನ ಸುತ್ತಲಿನ 500 ಮೀ. ವ್ಯಾಪ್ತಿಯ ಶಾಲೆ-ಕಾಲೇಜುಗಳಿಗೆ ರವಿವಾರದವರೆಗೆ ರಜೆ ಘೋಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.