ಕೋವಿಡ್ ಪರೀಕ್ಷೆ ಶುಲ್ಕ ಇಳಿಕೆ
Team Udayavani, Dec 10, 2020, 6:33 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಖಾಸಗಿ ಪ್ರಯೋಗಾಲಯಗಳಲ್ಲಿ ಕೋವಿಡ್ ಸೋಂಕು ಪರೀಕ್ಷೆ ಶುಲ್ಕವನ್ನು ಇಳಿಕೆ ಮಾಡಿ ರಾಜ್ಯ ಸರಕಾರ ಬುಧವಾರ ಆದೇಶಿಸಿದ್ದು, ಆರ್‌ಟಿಪಿಸಿಆರ್ ಪರೀಕ್ಷೆಗೆ 800 ರೂ., ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗೆ 400 ರೂ. ನಿಗದಿ ಪಡಿಸಿದೆ.
ಈ ಹಿಂದೆ ಖಾಸಗಿಯಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆಗೆ 1,200 ರೂ., ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗೆ 700 ರೂ. ಶುಲ್ಕ ಇತ್ತು. ಸದ್ಯ ಕೊರೊನಾ ಪರೀಕ್ಷೆಗಳನ್ನು ನಡೆಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕ ಹಾಗೂ ಇತರ ಅಗತ್ಯ ವಸ್ತುಗಳ ದರಗಳನ್ನು ಪರಿಗಣಿಸಿ ಹಾಗೂ ಕೊರೊನಾ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಆಧರಿಸಿ ಖಾಸಗಿ ಪ್ರಯೋಗಾಲಯಗಳಲ್ಲಿ ನಡೆಸುವ ಪರೀಕ್ಷೆಗಳ ಶುಲ್ಕವನ್ನು ಇಳಿಕೆ ಮಾಡಿದೆ.
ಸರಕಾರಿ ಆಸ್ಪತ್ರೆಗಳಿಂದ ಖಾಸಗಿ ಪ್ರಯೋಗಾಲಯಗಳಿಗೆ ರವಾನಿ ಸುವ ಪ್ರತಿ ಮಾದರಿಗೆ 500 ರೂ., ಖಾಸಗಿ ಆಸ್ಪತ್ರೆಗಳು ಹಾಗೂ ಪ್ರಯೋಗಾಲಯಗಳಲ್ಲಿ ನಡೆಸುವ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ಶುಲ್ಕ 500 ರೂ., ಖಾಸಗಿ ಆಸ್ಪತ್ರೆಯಲ್ಲಿ ಟ್ರೂ ನ್ಯಾಟ್ ಪರೀಕ್ಷೆ 1,250 ರೂ., ಸಿಬಿ ನ್ಯಾಟ್ ಪರೀಕ್ಷೆಗೆ 2,400 ರೂ. ಶುಲ್ಕ ನಿಗದಿಪಡಿಸಲಾಗಿದೆ.
ಭಾರತೀಯ ವೈದ್ಯಕೀಯ ಸಂಶೋ ಧನಾ ಸಂಸ್ಥೆ (ಐಸಿಎಂಆರ್) ಮಾನ್ಯತೆ ಪಡೆದ ರಾಜ್ಯದ ಪ್ರಯೋ ಗಾಲಯಗಳಿಗೆ ಮಾತ್ರ ನೂತನ ಶುಲ್ಕ ಅನ್ವಯವಾಗಲಿದ್ದು, ಹೆಚ್ಚು ವರಿ ಶುಲ್ಕ ವಿಧಿಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕಾರಲ್ಲಿ ಒಬ್ಬರಿದ್ದರೂ ಮಾಸ್ಕ್ ಕಡ್ಡಾಯ!
ಕಾರಿನ ಕಿಟಿಕಿಗಳನ್ನು ತೆರೆದುಕೊಂಡು ಪ್ರಯಾಣಿಸುತ್ತಿದ್ದರೆ, ಕಾರಲ್ಲಿ ಒಬ್ಬನೇ ವ್ಯಕ್ತಿ ಇದ್ದರೂ ಮಾಸ್ಕ್ ಧರಿಸುವುದು ಕಡ್ಡಾಯ. ಕಿಟಿಕಿಗಳನ್ನು ಮುಚ್ಚಿದ್ದರೆ ಮಾಸ್ಕ್ ಧರಿಸಲೇಬೇಕೆಂದಿಲ್ಲ.
ಇದು ಹೊಸ ಅಧಿಸೂಚನೆಯಲ್ಲಿರುವ ಅಂಶ. ನಿಯಮ ಉಲ್ಲಂಘನೆ ದಂಡವನ್ನು ಸರಕಾರ ಪರಿಷ್ಕರಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ನಿಯಮ ಉಲ್ಲಂಘಿಸಿದರೆ ಆ ಸ್ಥಳ ಅಥವಾ ಸಂಸ್ಥೆ ಮಾಲಕರಿಗೆ ದಂಡ ವಿಧಿಲಾಗುವುದು. ಸಾಮಾನ್ಯ ಪಾರ್ಟಿ ಹಾಲ್, ಮಳಿಗೆಗೆ 5,000 ರೂ., ಹವಾನಿಯಂತ್ರಿತ ಪಾರ್ಟಿ ಹಾಲ್, ಮಳಿಗೆಗಳು, ತ್ರೀ ಸ್ಟಾರ್ ಹೊಟೇಲ್, ಮದುವೆ ಸಭಾಂಗಣಗಳಿಗೆ 10,000 ರೂ., ತೆರೆದ ಜಾಗದಲ್ಲಿ ಕಾರ್ಯಕ್ರಮ/ರ್ಯಾಲಿ ಆಯೋಜಿಸಿದರೆ ಆಯೋಜಕರಿಗೆ 10,000 ರೂ. ದಂಡ ನಿಗದಿಪಡಿಸಲಾಗಿದೆ.
800 ಆರ್‌ಟಿಪಿಸಿಆರ್ ಪರೀಕ್ಷೆ
400 ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆ ಖಾಸಗಿ ಪ್ರಯೋಗಾಲಯಗಳಿಗೆ ಅನ್ವಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್ ಕಾಳಿಂಗ’:ಅಧಿಕೃತವಾಗಿ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.