100ರಲ್ಲಿ ಮೂವರು ಮಾತ್ರ ಆಸ್ಪತ್ರೆಗೆ: ಲಸಿಕೆ ಪಡೆದವರಲ್ಲಿ ಸೋಂಕು ಹೆಚ್ಚಿಲ್ಲ: ಸಮೀಕ್ಷೆ
Team Udayavani, Aug 4, 2021, 6:40 AM IST
ಬೆಂಗಳೂರು: ರಾಜಧಾನಿಯಲ್ಲಿ 100 ಮಂದಿಗೆ ಕೊರೊನಾ ಸೋಂಕು ತಗಲಿದ್ದರೆ ಕೇವಲ 3 ಮಂದಿ ಮಾತ್ರ ಆಸ್ಪತ್ರೆ ದಾಖಲಾಗುತ್ತಿದ್ದಾರೆ..!- ಇದು ಕೊರೊನಾ ಲಸಿಕೆ ಎಫೆಕ್ಟ್ ಎಂದು ಬಿಬಿಎಂಪಿ ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಹೌದು, ಸೋಂಕು ಹತೋಟಿಯಲ್ಲಿ ಲಸಿಕೆ ಭಾರೀ ಪ್ರಭಾವ ಬೀರಿದೆ. ಬೆಂಗಳೂರಿನಲ್ಲಿ ಶೇ. 88ರಷ್ಟು ಲಸಿಕೆ (ಮೊದಲ ಡೋಸ್) ಗುರಿ ಸಾಧನೆಯಾಗಿದ್ದರ ಪರಿಣಾಮ ಕಳೆದ ಎರಡು ವಾರದಿಂದ ಸೋಂಕು ತಗಲಿದ್ದವರ ಪೈಕಿ ಶೇ. 3ರಷ್ಟು ಮಂದಿ ಮಾತ್ರ ಆಸ್ಪತ್ರೆ ದಾಖಲಾಗಿದ್ದಾರೆ.
ತಪಾಸಣೆ ಹೆಚ್ಚಳ:
ಕೇರಳದಲ್ಲಿ ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ ಕಳೆದ ಎರಡು ವಾರಗಳಿಂದ ಬೆಂಗಳೂರಿನಲ್ಲಿ ಮೂರನೇ ಅಲೆ ಆತಂಕ ಎದುರಾಗಿದೆ. ನಗರದ ಅಪಾರ್ಟ್‌ಮೆಂಟ್, ಬಸ್, ರೈಲ್ವೇ ವಿಮಾನ ನಿಲ್ದಾಣದಲ್ಲಿ ಸೋಂಕು ತಪಾಸಣೆ ಚುರುಕುಗೊಳಿಸಲಾಗಿದೆ.
ಲಸಿಕೆ ಪಡೆದವರಲ್ಲಿ ನಿರ್ಲಕ್ಷದಿಂದ ಸೋಂಕು:
ಲಸಿಕೆ ಪಡೆದವರಲ್ಲಿಯೂ ಸೋಂಕು ಕಂಡು ಬರುತ್ತಿರುವುದಕ್ಕೆ ಅವರ ನಿರ್ಲಕ್ಷ್ಯವೇ ಕಾರಣ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಲಸಿಕೆ ಮೊದಲ ಡೋಸ್ ಅಥವಾ ಎರಡೂ ಡೋಸ್ ಪಡೆದಿದ್ದೇನೆ ಎಂದು ಮಾಸ್ಕ್, ಸಾ ಮಾಜಿಕ ಅಂತರ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುವುದರಿಂದ ಸೋಂಕು ತಗಲುವ ಸಾಧ್ಯತೆಯಿದೆ. ಹೀಗಾಗಿ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಲಸಿಕೆ ಪಡೆದ ಬಹುತೇಕರಿಗೆ ಸೋಂಕಿನ ಗಂಭೀರ ಲಕ್ಷಣಗಳು ಕಂಡು ಬಂದಿಲ್ಲ. ಹೀಗಾಗಿ, ಮನೆ ಆರೈಕೆಯಲ್ಲಿದ್ದಾರೆ. ಇನ್ನು ಲಸಿಕೆ ಪಡೆದ ಯಾವ ರೋಗಿಯು ಐಸಿಯು ದಾಖಲಾಗಿಲ್ಲ – ಡಾ| ವಿಜಯೇಂದ್ರ, ಮುಖ್ಯ ಆರೋಗ್ಯಾಧಿಕಾರಿ, ಬಿಬಿಎಂಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.