ಲಸಿಕೆಯ ಮಂದಹಾಸ
ಜಗತ್ತಿನ ದೊಡ್ಡ ಲಸಿಕೆ ವಿತರಣೆ ಆರಂಭ, ಮೊದಲ ದಿನ 1.90 ಲಕ್ಷ ಮಂದಿಗೆ ಲಸಿಕೆ
Team Udayavani, Jan 17, 2021, 6:00 AM IST
ಹೊಸದಿಲ್ಲಿ/ ಬೆಂಗಳೂರು: ವಿಜ್ಞಾನಿಗಳ ತಿಂಗಳಾನುಗಟ್ಟಲೆ ಶೋಧದ ತಪಸ್ಸು ಅಂದೊಂದು ದಿನ ದುಃಖದ ಕಗ್ಗತ್ತಲಲ್ಲಿ ಹಚ್ಚಿದ್ದ ಕೋಟಿ ಹಣತೆಗಳಿಗೂ ಮಿಗಿಲಾದ ತೇಜಸ್ಸೊಂದನ್ನು ಹೊಮ್ಮಿಸಿದೆ. “ಲಸಿಕೆ’ಯೆಂಬ ಜೈವಿಕದ್ರವ “ಜೀವ ಜ್ಯೋತಿ’ಯಾಗಿ ಶನಿವಾರ ಸಹಸ್ರಾರು ಭಾರತೀಯರ ದೇಹ ಪ್ರವೇಶಿಸಿದೆ.ಜಗತ್ತಿನ ಅತೀ ದೊಡ್ಡ ಲಸಿಕೆ ಹಾಕುವ ಅಭಿಯಾನಕ್ಕೆ ದಿಲ್ಲಿ ಯಲ್ಲಿ ಪ್ರಧಾನಿ ಮೋದಿ ಶ್ರೀಕಾರ ಹಾಕುತ್ತಿದ್ದಂತೆ, ಇತ್ತ ಬೆಂಗಳೂರಿನಲ್ಲೂ ಸಿಎಂ ಯಡಿಯೂರಪ್ಪ ಲಸಿಕೆ ವಿತರಣೆಗೆ ಚಾಲನೆ ನೀಡಿದರು.
ರಾಜ್ಯದ 243 ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ವಿತರಣೆಗೆ ಚಾಲನೆ ದೊರೆತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಸೋಮವಾರದಿಂದ ಮುಂದುವರಿಯಲಿದೆ. ರವಿವಾರ ಖಾಸಗಿ ಆಸ್ಪತ್ರೆಗಳಲ್ಲಿ ವಿತರಣೆ ನಡೆಯಲಿದೆ. ಕೆಲವು ಜಿಲ್ಲೆಗಳಲ್ಲಿ ಕೋವಿನ್ ಪೋರ್ಟಲ್ ಕೈಕೊಟ್ಟ ಪರಿಣಾಮ ಗೊಂದಲ ಉಂಟಾಯಿತು. ಇವುಗಳನ್ನು ಶೀಘ್ರ ಸರಿಪಡಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿಎಸ್‌ವೈ ಚಾಲನೆ :
ಶನಿವಾರ ಬೆಳಗ್ಗೆ 11ಕ್ಕೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರಾಜ್ಯಮಟ್ಟದ ಲಸಿಕೆ ವಿತರಣೆ ಅಭಿಯಾನಕ್ಕೆ ಸಿಎಂ ಚಾಲನೆ ನೀಡಿದರು. ಆಸ್ಪತ್ರೆಯ ಡಿ ಗ್ರೂಪ್ ಸಿಬಂದಿ ನಾಗರತ್ನಾ ಎಂಬವರಿಗೆ ಮೊದಲ ಲಸಿಕೆ ನೀಡಲಾಯಿತು.
ಲಸಿಕೆ ಪಡೆದ ತಜ್ಞರು :
ಲಸಿಕೆ ಕುರಿತು ನಂಬಿಕೆ ಹೆಚ್ಚಿಸಲು ರಾಜ್ಯ ಕೋವಿಡ್ ನಿಯಂತ್ರಣ ತಜ್ಞರ ಸಲಹಾ ಸಮಿತಿ ಮುಖ್ಯಸ್ಥ ಡಾ| ಸುದರ್ಶನ್, ಮಣಿ ಪಾಲ್ ಆಸ್ಪತ್ರೆ ಮುಖ್ಯಸ್ಥ ಡಾ| ಸುದರ್ಶನ್ ಬಲ್ಲಾಳ್ ಮತ್ತಿತರರು ಲಸಿಕೆ ಸ್ವೀಕರಿಸಿದರು.
ವಿಜ್ಞಾನಿಗಳಿಗೆ ಮೋದಿ ಅಭಿನಂದನೆ ;
ಜಗತ್ತಿನ ಅತೀ ದೊಡ್ಡ ಲಸಿಕೆ ವಿತರಣೆ ಪ್ರಕ್ರಿಯೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ, ದೇಶದ ವಿಜ್ಞಾನಿಗಳನ್ನು ಶ್ಲಾ ಸಿದರು. ಈ ಲಸಿಕೆಗಳು ಜಾಗತಿಕವಾಗಿ ವಿಶ್ವಾಸ ಗಳಿಸಿಕೊಂಡಿವೆ. ದೇಶದ ಸ್ಥಿತಿಗತಿಯನ್ನು ಗಮನದಲ್ಲಿ ಇರಿಸಿಕೊಂಡೇ ಈ ಲಸಿಕೆ ತಯಾರಿಸಲಾಗಿದೆ. ಇದು ಒಂದು ರೀತಿಯಲ್ಲಿ ನಿರ್ಣಾಯಕ ಗೆಲುವು ಎಂದು ಅಭಿನಂದನೆ ಸಲ್ಲಿಸಿದರು.
ದೇಶದ ಮೊದಲ ಲಸಿಕೆ ಮನೀಶ್‌ಗೆ :
ದೇಶದ ಮೊತ್ತ ಮೊದಲ ಲಸಿಕೆ ಪಡೆಯುವ ಭಾಗ್ಯ ಲಭಿಸಿದ್ದು 33 ವರ್ಷದ ಮನೀಶ್ ಕುಮಾರ್ ಅವರಿಗೆ. ಹೊಸದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾರ್ಮಿಕನಾಗಿರುವ ಮನೀಶ್‌ಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಲಸಿಕೆ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.