ರಾಜ್ಯದ 5 ಜಿಲ್ಲೆಗಳಲ್ಲಿಂದು ಕೋವಿಡ್ ಲಸಿಕೆ ಡ್ರೈ ರನ್: ಹೇಗಿದೆ ಡ್ರೈ ರನ್ ಆರೋಗ್ಯ ಕೇಂದ್ರ?
Team Udayavani, Jan 2, 2021, 9:25 AM IST
ಬಿಬಿಎಂಪಿ ವ್ಯಾಪ್ತಿಯ ಕಾಮಾಕ್ಷಿ ಪಾಳ್ಯದ ಪ್ರಾಥಮಿಕ ಆರೋಗ್ಯ ಕೇಂದ್ರ.
ಬೆಂಗಳೂರು: ರಾಜ್ಯದ ಐದು ಜಿಲ್ಲೆಗಳ 16 ಆರೋಗ್ಯ ಕೇಂದ್ರಗಳಲ್ಲಿ ಶನಿವಾರ ಬೆಳಿಗ್ಗೆ ಕೊರೊನಾ ಲಸಿಕೆ ಡ್ರೈ ರನ್ ಗೆ (ಲಸಿಕೆ ವಿತರಣೆ ಅಣಕು) ಚಾಲನೆ ದೊರೆತಿದೆ.
ಶಿವಮೊಗ್ಗ, ಬೆಂಗಳೂರು, ಕಲಬುರಗಿ, ಬೆಳಗಾವಿ ಹಾಗೂ ಮೈಸೂರಿನ ವಿವಿಧ ತಲಾ ಒಂದು ಪ್ರಾಥಮಿಕ ಆರೋಗ್ಯ ಕೆಂದ್ರ, ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಅಥವಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡ್ರೈ ರನ್ ನಡೆಯುತ್ತಿದೆ.
ಈ ಆರೋಗ್ಯ ಕೇಂದ್ರಗಳನ್ನು ಅರ್ಧ ದಿನದ ಮಟ್ಟಿಗೆ ಡ್ರೈ ರನ್ ಗೆ ಮೀಸಲಿಡಲಾಗಿದ್ದು, ಕೆಂದ್ರಗಳ ಮುಂಭಾಗ ಲಸಿಕೆ ಅಣಕು ಕುರಿತಾದ ಮಾಹಿತಿ ಫಲಕ, ಬ್ಯಾನರ್ ಹಾಕಲಾಗಿದೆ. ಬೆಳಿಗ್ಗೆ 9 ರಿಂದ 11 ಗಂಟೆಗೆವರೆಗೂ ನಡೆಯಲಿದೆ.
ಶುಕ್ರವಾರ ಕೇಂದ್ರ ಸರ್ಕಾರದಿಂದ ಆನ್ ಲೈನ್ ತರಬೇತಿ ಪಡೆದಿರುವ ಆರೋಗ್ಯ ಕೇಂದ್ರಗಳ ಸಿಬ್ಬಂದಿ ತಮಗೆ ನಿಯೋಜಿಸಿರುವ ಸ್ಥಳಗಳಲ್ಲಿ ಕುಳಿತು, ಕಾರ್ಯಾರಂಭಿಸಿದ್ದಾರೆ.
ಇದನ್ನೂ ಓದಿ:ಸ್ತ್ರೀರೋಗ ತಜ್ಞೆ ಪದ್ಮಿನಿ ಪ್ರಸಾದ್ ಹೆಸರಿನಲ್ಲಿ ವಂಚನೆ: ಮೋಸ ಹೋದ ಹಲವು ಮಹಿಳೆಯರು
ಹೇಗಿದೆ ಲಸಿಕೆ ಡ್ರೈ ರನ್ ಆರೋಗ್ಯ ಕೇಂದ್ರ?
ಆರೋಗ್ಯ ಕೇಂದ್ರದಲ್ಲಿ ನಾಲ್ಕು ಕೊಠಡಿಗಳಿರಲಿವೆ. ಒಂದನೇ ಕೊಠಡಿಯಲ್ಲಿ ಫಲಾನುಭವಿಗಳ ಮಾಹಿತಿ ಸಂಗ್ರಹ/ ದಾಖಲೆ ಪರಿಶೀಲನೆ ವಿಚಾರಣೆ ನಡೆಯುತ್ತಿದೆ. ಎರಡನೇಯ ಕೊಠಡಿಯಲ್ಲಿ ಆರೋಗ್ಯ ತಪಾಸಣೆ ಆ ನಂತರ ಲಸಿಕೆ ಪಡೆಯಲು ಸರತಿ ಟೋಕನ್ ನೀಡಲಾಗುತ್ತಿದೆ. ಮೂರನೆಯ ಕೊಠಡಿಯು ಲಸಿಕೆ/ ಚುಚ್ಚು ಮದ್ದಿನ ಕೊಠಡಿಯಾಗಿದ್ದು, ಅಣಕು ಆಗಿರುವುದರಿಂದ ಲಸಿಕೆ ನೀಡುತ್ತಿಲ್ಲ. ನಾಲ್ಕನೆ ಕೊಠಡಿಯು ವಿಶ್ರಾಂತಿಗೆ / ಅವಲೋಕನ ಮಾಡಲಾಗುತ್ತದೆ. ಇಲ್ಲಿ ಲಸಿಕೆ ಪಡೆದ ಬಳಿಕೆ ಯಾವುದೇ ಅಡ್ಡ ಪರಿಣಾಮ ಕಾಣಿಸಿಕೊಂಡರೆ (ತಲೆ ಸುತ್ತು, ಮೈ ತುರಿಕೆ) ಅವರಿಗೆ ತುರ್ತು ಚಿಕಿತ್ಸೆಗೆಂದು ಮೀಸಲಿಡಲಾಗಿದೆ.
ಕೇಂದ್ರ ಒಂದಕ್ಕೆ ಆರೋಗ್ಯ ಇಲಾಖೆ ನಿಗದಿ ಪಡಿಸಿರುವ 25 ಫಲಾನುಭವಿಗಳು ತಮಗೆ ಬಂದಿರುವ ಮೊಬೈಲ್ ಸಂದೇಶವನ್ನು ತೋರಿಸಿ ಕೇಂದ್ರ ಪ್ರವೇಶಿಸಿ ಪ್ರತಿ ಕೊಠಡಿಗೆ ಭೇಟಿ ಹಿಂದಿರುಗುತ್ತಿದ್ದಾರೆ.
ಪ್ರತಿ ಕೇಂದ್ರಕ್ಕೆ ಐದು ಸಿಬ್ಬಂದಿ ಇದ್ದಾರೆ. ಫಲಾನುವಿಗಳ ಮಾಹಿತಿ ಪಟ್ಟಿ, ದಾಖಲಾತಿ ಪರಿಶೀಲನೆಗೆ ಅಗತ್ಯ ತಾಂತ್ರಿಕ ಸಾಧನಗಳು, ಲಸಿಕೆ ಸಂಗ್ರಹ ಶೀತಲೀಕರಣ ಪಟ್ಟಿಗೆಗಳು (ಐಎಲ್ ಆರ್) ಕೇಂದ್ರದಲ್ಲಿವೆ.
ಈ ಡ್ರೈ ರನ್ ನಲ್ಲಿ ಚುಚ್ಚು ಮದ್ದು (ಲಸಿಕೆ) ನೀಡುವುದೊಂದನ್ನು ಬಿಟ್ಟು ಬಾಕಿ ಎಲ್ಲಾ ಚಟುವಟಿಕೆಗಳು ನಡೆಯಲಿವೆ ಎಂದು ಆರೋಗ್ಯ ಕೇಂದ್ರ ಸಿಬ್ಬಂದಿ ತಿಳಿಸಿದರು.
ಒಟ್ಟಾರೆ 16 ಆರೋಗ್ಯದ ಕೇಂದ್ರದಲ್ಲಿ 100 ಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿ, 375 ಫಲನಾನುಭವಿಗಳು (ಆರೋಗ್ಯ ಇಲಾಖೆ ನಿಯೋಜಿಸಿರುವ ಕಾರ್ಯಕರ್ತರು) ಭಾಗವಹಿಸುತ್ತಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
Naxal ಶರಣಾಗತಿ; ಚಿಕ್ಕಮಗಳೂರು ಡಿಸಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.