ರಾಜ್ಯಕ್ಕೆ ಬಂತು 5 ಲಕ್ಷ ಡೋಸ್ ಕೋವಿಡ್ ಲಸಿಕೆ
Team Udayavani, May 4, 2021, 6:30 AM IST
ಬೆಂಗಳೂರು: ಲಸಿಕೆ ಕೊರತೆ ಎದುರಿಸುತ್ತಿದ್ದ ರಾಜ್ಯಕ್ಕೆ ಕೊಂಚ ನೆಮ್ಮದಿ ಎಂಬಂತೆ ಸೋಮ ವಾರ ಐದು ಲಕ್ಷ ಡೋಸ್ ಲಸಿಕೆ ಬಂದಿದೆ.
ಪುಣೆಯಿಂದ ಸೋಮವಾರ ಬೆಳಗ್ಗೆ ಬೆಂಗಳೂರಿಗೆ ಕೊವಿಶೀಲ್ಡ್‌ನ ಐದು ಲಕ್ಷ ಡೋಸ್ ಬಂದಿದ್ದು, 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ವಿತರಿಸುವಂತೆ ಸೂಚನೆ ನೀಡಲಾಗಿದೆ. ಹೀಗಾಗಿ ಮುಂದಿನ ನಾಲ್ಕು ದಿನ ನಿರಾತಂಕವಾಗಿ ಲಸಿಕೆ ವಿತರಿಸಬಹುದಾಗಿದೆ. ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಈವರೆಗೆ 1.05 ಕೋಟಿ ಡೋಸ್ ಲಸಿಕೆ ಬಂದಿದ್ದು, ಈ ಪೈಕಿ 99 ಲಕ್ಷ ಡೋಸ್ ವಿತರಿಸಲಾಗಿದೆ.
ಈ ಹಿಂದೆ ಎ. 28ರಂದು 4 ಲಕ್ಷ ಡೋಸ್‌ನಷ್ಟು ಲಸಿಕೆಯನ್ನು ಕೇಂದ್ರ ಸರಕಾರ ಕಳುಹಿಸಿಕೊಟ್ಟಿದ್ದು, ಈ ವಾರದ ಪಾಲು ಐದು ಲಕ್ಷ ಡೋಸ್ ಬಂದಿದೆ. ಸೋಂಕು ಹೆಚ್ಚಿರುವ ಜಿಲ್ಲೆಗಳಿಗೆ ಇದನ್ನು ವಿತರಿಸಲಾಗಿದ್ದು, ಎರಡನೇ ಡೋಸ್ ಹಾಕಿಸಿಕೊಳ್ಳುವವರಿಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಲಸಿಕೆ ವಿಭಾಗದ ಉಪ ನಿರ್ದೇಶಕಿ ಡಾ| ಬಿ.ಎನ್. ರಜನಿ ತಿಳಿಸಿದ್ದಾರೆ.
ಅರ್ಧಕ್ಕರ್ಧ ಕುಸಿದ ವಿತರಣೆ :
ಎಪ್ರಿಲ್‌ನಲ್ಲಿ ನಿತ್ಯ ಸರಾಸರಿ 2 ಲಕ್ಷದಂತೆ 60.5 ಲಕ್ಷ ಡೋಸ್ ವಿತರಿಸಲಾಗಿತ್ತು. ಒಂದು ದಿನ ದಾಖಲೆ 2.7 ಲಕ್ಷ ಮಂದಿ ಲಸಿಕೆ ಪಡೆದಿದ್ದರು. ಲಸಿಕೆ ಕೊರತೆಯಿಂದ ಎಪ್ರಿಲ್ ಕೊನೆಗೆ ಅರ್ಧ ಕ್ಕೆ ಇಳಿದಿದೆ. ಮೇ 2ರಂದು 40 ಸಾವಿರಕ್ಕೆ ಇಳಿದಿದೆ.
40 ಲಕ್ಷ ಮಂದಿಗೆ ಬೇಕು 2ನೇ ಡೋಸ್ :
ಆರೋಗ್ಯ ಇಲಾಖೆ ಮಾಹಿತಿಯ ಪ್ರಕಾರ ಮಾರ್ಚ್‌ನಿಂದ ಎಪ್ರಿಲ್ 15ರ ವರೆಗೆ ಲಸಿಕೆ ಪಡೆದವರು ಈ ತಿಂಗಳಲ್ಲಿ ಎರಡನೇ ಡೋಸ್ ಪಡೆಯಬೇಕಿದೆ. 25 ಲಕ್ಷ ಹಿರಿಯರು, 45-59 ವಯೋಮಾನದ 15 ಲಕ್ಷ ಮಂದಿಗೆ ಪ್ರಸಕ್ತ ತಿಂಗಳಲ್ಲಿ 2ನೇ ಡೋಸ್ ನೀಡಬೇಕಿದೆ.
2ನೇ ಡೋಸ್ ಲಸಿಕೆ ಪಡೆಯಿರಿ :
ಮೊದಲ ಡೋಸ್ ಲಸಿಕೆ ಪಡೆದು 6 ವಾರಗಳಾಗಿರುವ ಹಿರಿಯರು ಮತ್ತು ಆರೋಗ್ಯ ಸಮಸ್ಯೆ ಹೊಂದಿರುವವರು 2ನೇ ಡೋಸ್ ಪಡೆಯಿರಿ. ಮೊದಲ ಡೋಸ್ ಪಡೆದಲ್ಲಿಯೇ 2ನೇ ಡೋಸ್ ಪಡೆಯಬೇಕೆಂಬ ನಿಯಮವಿಲ್ಲ. ದಾಸ್ತಾನು ಇರುವ ಕಡೆ ತೆರಳಿ ಲಸಿಕೆ ಪಡೆಯಿರಿ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಸೀರಂಗೆ ಪೂರ್ತಿ ಮೊತ್ತ ಪಾವತಿ : ಕೊವಿಶೀಲ್ಡ್‌ಗಾಗಿ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಪೂರ್ಣ ಮೊತ್ತ 1,732.50 ಕೋಟಿ ರೂ. ನೀಡಲಾಗಿದೆ. ಇದರಿಂದ ಮುಂದಿನ 3 ತಿಂಗಳಲ್ಲಿ ಲಸಿಕೆ ಪೂರೈಕೆ ಆಗಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
2-3 ತಿಂಗಳು ಲಸಿಕೆ ಕೊರತೆ :
ದೇಶದಲ್ಲಿ 2-3 ತಿಂಗಳು ಲಸಿಕೆ ಕೊರತೆ ಉಂಟಾಗಲಿದೆ. ರಾತ್ರಿ ಬೆಳಗಾಗುವುದರೊಳಗೆ ಲಸಿಕೆ ಉತ್ಪಾದನೆ ಹೆಚ್ಚಿಸಲು ಸಾಧ್ಯವಿಲ್ಲ. ಎಲ್ಲರಿಗೂ ಲಸಿಕೆ ನೀಡಬೇಕಾಗಿರುವುದರಿಂದ ಉತ್ಪಾದನೆಗೆ ಹೆಚ್ಚು ಸಮಯ ತೆಗೆದುಕೊಳ್ಳಲಿದೆ. ಅದು ಸುಲಭದ ಕೆಲಸವಲ್ಲ ಎಂದು ಎಂದು ಸೀರಂ ಸಂಸ್ಥೆಯ ಸಿಇಒ ಆದರ್ ಪೂನಾವಾಲಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.