ಅಶ್ಲೀಲ ಚಿತ್ರ ತೋರಿಸಿ ಬ್ಲ್ಯಾಕ್‌ಮೇಲ್ ಮಾಡಿ 12 ಲಕ್ಷ ರೂ. ವಂಚನೆ
Team Udayavani, Oct 26, 2022, 8:05 AM IST
ಬೆಂಗಳೂರು: ಅಪರಿಚಿತ ನಂಬರ್‌ನಿಂದ ವಾಟ್ಸ್‌ಆ್ಯಪ್ ಕರೆ ಮಾಡಿ ಮಹಿಳೆಯ ಫೋಟೊ ತೆಗೆದುಕೊಂಡ ಸೈಬರ್ ಕಳ್ಳರು ಅಶ್ಲೀಲವಾಗಿ ಫೋಟೊ ಎಡಿಟ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿ 12 ಲಕ್ಷ ರೂ. ಲಪಟಾಯಿಸಿದ್ದಾರೆ.
ಬನಶಂಕರಿ ನಿವಾಸಿ 31 ವರ್ಷದ ಮಹಿಳೆ ವಂಚನೆಗೊಳಗಾದವರು. ಅಪರಿಚಿತ ನಂಬರ್‌ನಿಂದ ದೂರುದಾರ ಮಹಿಳೆಯ ವಾಟ್ಸ್ ಆ್ಯಪ್‌ಗೆ ಲಿಂಕ್ ಬಂದಿತ್ತು. ಆ ಲಿಂಕ್ ಕ್ಲಿಕ್ ಮಾಡಿದಾಗ ಅದರಲ್ಲಿ ಕೇಳಿದ ಮಾಹಿತಿಯನ್ನು ದೂರುದಾರರು ನೀಡಿದ್ದರು.
ಇದಾದ ಕೆಲ ಹೊತ್ತಿನ ಬಳಿಕ ಮಹಿಳೆಯ ಮೊಬೈಲ್‌ನಲ್ಲಿರುವ ಕಾಂಟೆಕ್ಟ್ ಹಾಗೂ ಗ್ಯಾಲರಿಯನ್ನು ಹ್ಯಾಕ್ ಮಾಡಿದ ಸೈಬರ್ ಕಳ್ಳರು, ವಿವಿಧ ನಂಬರ್‌ಗಳಿಂದ ವಾಟ್ಸ್‌ಆ್ಯಪ್‌ಗೆ ವೀಡಿಯೋ ಕರೆ ಮಾಡಿದ್ದರು. ಕರೆ ಸ್ವೀಕರಿಸಿದಾಗ ದೂರುದಾರ ಮಹಿಳೆಯ ಗಮನಕ್ಕೆ ಬಾರದಂತೆ ಅವರ ಫೋಟೊವನ್ನು ಸೈಬರ್ ಕಳ್ಳರು ಸೆರೆಹಿಡಿದಿದ್ದಾರೆ. ಅನಂತರ ಆ ಫೋಟೊವನ್ನು ಅಶ್ಲೀಲ ಫೋಟೊಗಳ ಜತೆಗೆ ಎಡಿಟ್ ಮಾಡುತ್ತೇವೆ ಎಂದು ಬ್ಲ್ಯಾಕ್‌ಮೇಲ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದರು.
ಇದರಿಂದ ಆತಂಕಗೊಂಡ ಮಹಿಳೆಯು ಸೈಬರ್ ಕಳ್ಳರು ಸೂಚಿಸಿದ ಬ್ಯಾಂಕ್ ಖಾತೆಗೆ ಹಂತ-ಹಂತವಾಗಿ ಒಟ್ಟು 12 ಲಕ್ಷ ರೂ. ಜಮೆ ಮಾಡಿದ್ದರು. ಮಹಿಳೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.