ಅಂದು ಜನೋತ್ಸವ ಪ್ರಶ್ನಿಸಿದವರು, ಇಂದು ಸೂತಕದ ಮನೆಯಲ್ಲಿ ಸಂಭ್ರಮ ಮಾಡುತ್ತಿದ್ದಾರೆ: ಸಿಟಿ ರವಿ


Team Udayavani, Aug 3, 2022, 6:04 PM IST

tdy-15

ಚಿಕ್ಕಮಗಳೂರು: ದೇವರು ಸಿದ್ದರಾಮಯ್ಯನವರಿಗೆ ಆಯಸ್ಸು-ಆರೋಗ್ಯ ಕೊಟ್ಟು ಕಾಪಾಡಲಿ. ಎರಡ್ಮೂರು ದಿನದ ಮಳೆಗೆ 13 ಜನ ಮಳೆಗೆ ಮೃತಪಟ್ಟಿದ್ದಾರೆ.  ಸೂತಕದ ಮನೆಯಲ್ಲಿ ಸಂಭ್ರಮ ಎಷ್ಟು ಸರಿ.  ಕಾಂಗ್ರೆಸ್ ಸಂವೇದನಾಶೀಲತೆ ಕಳೆದುಕೊಳ್ಳುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದರು.

ನಗರದಲ್ಲಿ ಮಾತಾನಾಡಿದ ಅವರು, ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕೆ ರಾಷ್ಟ್ರೀಯ ನಾಯಕರೆಲ್ಲಾ ಬಂದಿದ್ದಾರೆ.  ಸಂಕಷ್ಟದಲ್ಲಿದ್ದಾಗ ಹಾಡಿ-ಹೊಗಳುವುದು ಮಾನವೀಯತೆ ಇರುವವರಿಗೆ ಶೋಭೆ ತರುವುದಲ್ಲ.  ಬಿಜೆಪಿ ಸರ್ಕಾರವೂ 3 ವರ್ಷದ ತುಂಬಿದ್ದಕ್ಕೆ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಾರ್ಯಕರ್ತ ಪ್ರವೀಣ್ ಸಾವನ್ನಪ್ಪಿದ್ದಕ್ಕೆ ಎಲ್ಲರೂ ಒಮ್ಮತದ ನಿರ್ಧಾರ ಮಾಡಿ ರದ್ದು ಮಾಡಿದ್ವಿ. ಅಂದು ನಮಗೆ ಪ್ರಶ್ನಿಸಿದರು, ಇಂದು ಸೂತಕದ ಮನೆಯಲ್ಲಿ ಸಂಭ್ರಮ ಅಂತ ಕೆಲವರಿಗಾದರೂ ಅನ್ನಿಸಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.

ಒಗ್ಗಟ್ಟು ಎಷ್ಟು ದಿನ ಇರುತ್ತದೆ ಎನ್ನುವುದು ಪ್ರಶ್ನಾರ್ಥಕ ಸಂಗತಿ. ಇವತ್ತು ಕೈಹಿಡಿದು ಒಗ್ಗಟ್ಟು ತೋರಿಸಿದರು. ಇದೇ ಜನ ಪರಮೇಶ್ವರ್ ರನ್ನು ಸೋಲಿಸಿದರು.  ಒಗ್ಗಟ್ಟು ಎಷ್ಟು ದಿನ ಇರುತ್ತೆ ಅನ್ನೋದನ್ನು ನೋಡೋಣ ಎಂದರು.

ಇದನ್ನೂ ಓದಿ: ಕಾಂಗ್ರೆಸ್ ಇಂದಿರಾ ಕಾಲದಲ್ಲಿದ್ದಂತೆ ಇನ್ನು ಅಧಿಕಾರದಲ್ಲಿ ಇರಲ್ಲ:ಶಾಸಕ ಕುಲ್ ದೀಪ್ ರಾಜೀನಾಮೆ

ರಾಮಮಂದಿರ ಕಟ್ಟುವಾಗ ಶಾಲೆ ಕಟ್ಟಿ ಎಂದು ಹೇಳುತ್ತಿದ್ದರು.  ಗುಡ್ಡ ಕುಸಿದು, ಅತಿವೃಷ್ಟಿಯಿಂದ ಹತ್ತಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಕಾರ್ಯಕ್ರಮಕ್ಕಾಗಿ ಹತ್ರತ್ರ 100 ಕೋಟಿ ಖರ್ಚು ಮಾಡಿದ್ದಾರೆ. ಇದರಲ್ಲಿ ಜನರಿಗೆ ಬದುಕು ಕಟ್ಟಿಕೊಡಬಹುದಿತ್ತು. ಯಾರಿಗೂ ವಿವೇಚನೆಯೇ ಇಲ್ಲದಿರುವುದು ಆ ಪಕ್ಷದ ಅವನತಿಗೆ ಸಾಕ್ಷಿಯಾಗಿದೆ ಎಂದರು.

ಪಿ.ಎಫ್.ಐ. ಎಸ್.ಡಿ.ಪಿ.ಐನ ಬಿಜೆಪಿ ಬೆಳೆಸಿದರೆ, ನೀವ್ಯಾಕೆ 2500 ಜನರ ಕೇಸ್ ಹಿಂಪಡೆದ್ರಿ . ನಿಮಗೂ ಪಿ.ಎಫ್.ಐಗೂ ಇರುವ ನೆಂಟಸ್ಥನ ಏನು, ಕೇಸ್ ಏಕೆ ವಾಪಸ್ ಪಡೆದ್ದೀರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಸಿ.ಟಿ.ರವಿ ಪ್ರಶ್ನಿಸಿದರು.

ಪಿ.ಎಫ್.ಐ. ಕೇಸ್ ಹಿಂಪಡೆಯಿರಿ ಎಂದು ನಾವೇನು ನಿಮಗೆ ಅರ್ಜಿ ಕೊಟ್ಟಿರಲಿಲ್ಲ.ಬಜರಂಗದಳ, ರೈತಸಂಘ, ಕನ್ನಡಪರ ಸಂಘಟನೆಗಳ ಮೇಲಿನ ಕೇಸ್ ಹಿಂಪಡೆಯಿರಿ ಎಂದು ಅರ್ಜಿ ಹಾಕಿದ್ದು. ಪಿ.ಎಫ್.ಐ. ಕ್ರಿಮಿನಲ್ ಎಂದು ಸಿಎಂ ಆದ ನಿಮಗೆ ಗೊತ್ತಿರಲಿಲ್ಲವಾ…? ಹೇಳಿ, ನಿಮ್ಮ ಹಾಗೂ ಪಿ.ಎಫ್.ಐ ಹಾಗೂ ಎಸ್.ಡಿ.ಪಿ.ಐ ಎನ್ ನೆಂಟಸ್ತನ ಅಂತ ಜಗತ್ತಿಗೆ ಗೊತ್ತಾಗುತ್ತದೆ ಎಂದು ಗುಡುಗಿದರು.

ಪಿ.ಎಫ್.ಐ. ಟಾರ್ಗೆಟ್ ಮಾಡುತ್ತಾ ಇರುವುದು ಬಜರಂಗದಳ, ಆರ್.ಎಸ್.ಎಸ್. ರಾಷ್ಟ್ರೀಯವಾದಿ ಸಂಘಟನೆಗಳನ್ನು. ಇಬ್ಬರ ಉದ್ದೇಶ ಆರ್.ಎಸ್.ಎಸ್. ಟಾರ್ಗೆಟ್ ಮಾಡುವುದು, ನೆಂಟಸ್ತನ ಇದ್ರೆ ನಿಮ್ಮಿಬ್ಬರಿಗೆ ಇರುವುದು. ರಾಜ್ಯದಲ್ಲಿ ಕೋಮು ಗಲಭೆ ಹೆಚ್ಚಾಗಿದ್ರೆ, ವೈಚಾರಿಕ ಕಾರಣಕ್ಕೆ ಹತ್ಯೆಯಾಗಿದ್ರೆ ಸಿದ್ದರಾಮಯ್ಯ ಸರ್ಕಾರ ಕಾರಣ ಎಂದು ವಾಗ್ದಾಳಿ ನಡೆಸಿದರು.

ಟಾಪ್ ನ್ಯೂಸ್

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ

Koppala–women

Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ

CTR-DGP

Winter Session Issue: ಬಂಧನ, ಪೊಲೀಸ್‌ ದೌರ್ಜನ್ಯ: ಡಿಜಿಪಿಗೆ ಸಿ.ಟಿ.ರವಿ ದೂರು

Court1

Valmiki Nigama: ಜಪ್ತಿ ಮಾಡಿರುವ 6.11 ಕೋಟಿ ರೂ. ಬಿಡುಗಡೆಗೆ ಸೂಚನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.