Politics: ಡಿಕೆಶಿ ಕೇಡಿ ತರ ಆಡಬಾರದು.. ತಿರುಗೇಟು ನೀಡಿದ ಸಿಟಿ ರವಿ
Team Udayavani, Oct 18, 2023, 1:43 PM IST
ಚಿಕ್ಕಮಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ಅವರು ಕೇಡಿ ತರ ಆಡಬಾರದು. ಕೆಡಿಯ ರೀತಿ ನಡೆದು ಕೊಳ್ಳುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು.
ಸಿ.ಟಿ.ರವಿ ಲೂಟಿ ರವಿ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇಡಿಯ ರೀತಿಯಲ್ಲಿ ನಡೆದುಕೊಳ್ಳುವುದು ಒಳ್ಳೆಯ ಲಕ್ಷಣವಲ್ಲ. ಅವರು ಕೆಡಿ ರೀತಿ ನಡೆದುಕೊಳ್ಳುವುದು ಪಕ್ಷ-ರಾಜ್ಯ ಎರಡಕ್ಕೂ ಒಳ್ಳೆಯದಲ್ಲ ಎಂದರು.
ಐಟಿ ದಾಳಿ ಸಂಬಂಧಿಸಿದಂತೆ ಕಾಂಗ್ರೆಸ್ ನವರ ಬೇನಾಮಿ ಹಣ ಅಂತ ನಮಗೆ ಬಂದಿರುವ ವರದಿ. ಇವರೇ, ನಂಬರ್ 1, ನಂಬರ್ 2 ಅಂತ ಬೇನಾಮಿಗಳ ಮೂಲಕ ಸಂಗ್ರಹಿಸಿರುವ ಹಣ ಎಂದು ನಮಗೆ ಬಂದಿರುವ ಮಾಹಿತಿ. ನಮ್ಮ ಆರೋಪ ನಿರಾಕರಿಸುವ ಅಧಿಕಾರ ಅವರಿಗಿದೆ ಎಂದು ತಿಳಿಸಿದರು.
ನಿರಾಕರಿಸುವ ಬರದಲ್ಲಿ ಕುಮಾರಸ್ವಾಮಿ ಅವರಿಗೆ ನಕಲಿ ಸ್ವಾಮಿ ಅಂತ ಹೇಳೋದು. ಆಶ್ವಥ್ ನಾರಯಣ್ ಅವರಿಗೆ ನವರಂಗಿ ನಾರಾಯಣ ಅನ್ನುವುದು. ನನಗೆ ಸಿ .ಟಿ. ತೆಗೆದು ಲೂಟಿ ಅನ್ನೋದು ಹಂಗಾದ್ರೆ ನಿಮ್ಮ ಡಿಕೆ ತೆಗೆದು ಕೇಡಿ ಅನ್ನಬಹುದಲ್ವಾ ಎಂದರು.
ಕೇಡಿ ಮನಸ್ಥಿತಿಯಲ್ಲಿ ವಿವರಿಸುವುದನ್ನು ಬಿಡಬೇಕು. ಉಪ ಮುಖ್ಯಮಂತ್ರಿ ತಮಗಿರುವ ಜವಬ್ದಾರಿಯ ಅರಿವಿಟ್ಟು ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಹೆದರಿಸುವ, ಬೆದರಿಸುವ, ರಾಜಕಾರಣ ಮಾಡುತ್ತಾರೆ. ಇಲ್ಲಿ ಹೆದರೋಕೆ-ಬೆದರೋಕೆ ಯಾರಿದ್ದಾರೆ ಎಂದು ಹೇಳಿದರು.
ಅವರು ರಾಕ್ಷಸ ವಂಶಕ್ಕೆ ಸೇರಿದವರಾ? ಕೇಡಿ ವಂಶಕ್ಕೆ ಸೇರಿದವರ, ಇಷ್ಟಕ್ಕೂ ನನ್ನ ಅಸ್ತಿ ಸಾವಿರಾರು ಕೋಟಿ ಎನಿಲ್ಲಾ… ಲೂಟಿ ಯಾರು ಮಾಡಿದ್ದಾರೆ ಅನ್ನೋದನು ರಾಜ್ಯದ ಜನರಿಗೆ ಗೊತ್ತಿದೆ ಎಂದು ಹೇಳಿದರು.
ಆಸ್ತಿಯಲ್ಲಿ ಅಜಗಜಾಂತರ ವ್ಯತ್ಯಾಸ ಆಗಿರುವುದು ಯಾರದ್ದು ಡಿ.ಕೆ.ಶಿವಕುಮಾರ್ ಅವರೇ ಎಂದು ಪ್ರಶ್ನಿಸಿರುವ ಅವರು, ನೀವು ಏನು ಮಾತನಾಡ್ತೀರೋ ಅದು ನಿಮಗೆ ಅನ್ವಯವಾಗುತ್ತದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು
Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.