ಮಕ್ಕಳ ಮೇಲಿನ ಸೈಬರ್ ಕ್ರೈಂ: ಕರ್ನಾಟಕ ನಂ.2
Team Udayavani, Nov 15, 2021, 12:38 PM IST
Representative Image used
ನವದೆಹಲಿ: ದೇಶದಲ್ಲಿ 2019ಕ್ಕೆ ಹೋಲಿಸಿದರೆ 2020ರಲ್ಲಿ ಮಕ್ಕಳ ಮೇಲಿನ ಸೈಬರ್ ಕ್ರೈಂನಲ್ಲಿ ಶೇ. 400 ಏರಿಕೆ ಕಂಡುಬಂದಿದೆ. ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೋ(ಎನ್ ಸಿಆರ್‌ಬಿ)ದ ವರದಿಯಲ್ಲಿ ಈ ವಂಶ ಬೆಳಕಿಗೆ ಬಂದಿದ್ದು, ಹೆಚ್ಚು ಅಪರಾಧಗಳು ನಡೆ ದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.
ರಾಜ್ಯ ದಲ್ಲಿ 2020ರಲ್ಲಿ 842 ಮಕ್ಕಳ ಮೇಲೆ ಸೈಬರ್ ಕ್ರೈಂ ವರದಿಯಾಗಿದೆ. ಉತ್ತರ ಪ್ರದೇಶ ಮೊದಲ ಸ್ಥಾನ ದ ಲ್ಲಿದ್ದು, ಅತಿ ಹೆಚ್ಚು ಅಂದರೆ 170 ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲಿ 144, ಮಹಾರಾಷ್ಟ್ರದಲ್ಲಿ 137, ಕೇರಳ 107 ಮತ್ತು ಒಡಿಶಾದಲ್ಲಿ 71 ಪ್ರಕರಣಗಳು ವರದಿಯಾಗಿವೆ.
ಇದನ್ನೂ ಓದಿ:- ಕುರಿ ವ್ಯಾಪಾರಕೆ ಪ್ರತ್ಯೇಕ ಸ್ಥಳ ಒದಗಿಸಿ
ಅಷ್ಟೂ ಪ್ರಕರಣಗಳಲ್ಲಿ 738 ಪ್ರಕರಣ ಗಳು ಖಾಸಗಿ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವು ದಾಗಿ ಬೆದರಿಕೆಯೊ ಡ್ಡಿದ ಕೇಸು ಗಳೇ ಆಗಿವೆ ಎಂದು ವರದಿ ಹೇಳಿ ದೆ. 2019ರಲ್ಲಿ ದೇಶಾದ್ಯಂತ ಒಟ್ಟು 164 ಪ್ರಕರಣಗಳು ವರದಿಯಾಗಿದ್ದವು.
ಹಾಗೆಯೇ 2018ರಲ್ಲಿ 117, 2017ರಲ್ಲಿ 79 ಪ್ರಕರಣಗಳು ದಾಖಲಾಗಿದ್ದವು. ಕೊರೊನಾ ಬಂದಾಗಿನಿಂದ ಮಕ್ಕಳು ಆನ್ ಲೈನ್ ತರಗತಿಗಳ ಮೊರೆ ಹೋಗಿದ್ದು, ಅಂತರ್ಜಾಲ ಬಳಕೆ ಹೆಚ್ಚಾಗಿದೆ. ಇದರಿಂದಾಗಿ ಅವರು ಹೆಚ್ಚೆಚ್ಚು ಅಪಾಯಕ್ಕೆ ತೆರೆದುಕೊ ಳ್ಳುತ್ತಿದ್ದಾರೆ ಎಂದು “ಮಕ್ಕಳು ಹಕ್ಕು ಮತ್ತು ನೀವು’ ಸಂಘಟನೆಯ ಮುಖ್ಯಸ್ಥರಾಗಿರುವ ಪೂಜಾ ಮರಾÌಹಾ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.