ವಿಚಾರಣೆಗೆ ಡಿಕೆಶಿ ಹಾಜರ್
Team Udayavani, Aug 8, 2017, 8:46 AM IST
ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ವೇಳೆ ಪತ್ತೆಯಾಗಿದೆ ಎನ್ನಲಾದ ನೂರಾರು ಕೋಟಿ ರೂ. ಮೌಲ್ಯದ ಆಸ್ತಿ- ಪಾಸ್ತಿ, ನಗದು ಹಾಗೂ ಹಲವು ದಾಖಲೆಗಳಿಗೆ ವಿವರ ನೀಡುವ ಸಂಬಂಧ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸೋಮವಾರ ಆದಾಯ ತೆರಿಗೆ ಇಲಾಖೆ ಕಚೇರಿಗೆ ಖುದ್ದು ಹಾಜರಾಗಿ ವಿಚಾರಣೆ ಎದುರಿಸಿದರು.
ಸತತ ನಾಲ್ಕು ದಿನಗಳ ದಾಳಿ ಬಳಿಕ ಇಲಾಖೆ ಕಚೇರಿಗೆ ಹಾಜರಾಗುವಂತೆ ಆದಾಯ ತೆರಿಗೆ ಇಲಾಖೆ ನೀಡಿದ್ದ ಸಮನ್ಸ್ ಪ್ರಕಾರ ಡಿಕೆಶಿ ತಮ್ಮ ಸೂಕ್ತ ದಾಖಲೆಗಳು ಹಾಗೂ ತಮ್ಮ ಆಡಿಟರ್ ಜೊತೆ ಐಟಿ ಕಚೇರಿಗೆ ಆಗಮಿಸಿ ಲೆಕ್ಕ ಪತ್ರಗಳ ವಿವರ ನೀಡಿದರು. ಸಚಿವ ಡಿಕೆಶಿ ಜೊತೆ ಸಹೋದರನಾದ ಸಂಸದ ಡಿ.ಕೆ.ಸುರೇಶ್, ವಿಧಾನಪರಿಷತ್ ಸದಸ್ಯ ರವಿ ಹಾಗೂ ಆಪ್ತರಾದ ಜ್ಯೋತಿಷಿ ದ್ವಾರಕಾನಾಥ್ ಸಹ ಸೋಮವಾರ ಐಟಿ ಅಧಿಕಾರಿಗಳ ಕಚೇರಿಗೆ ಹಾಜರಾದ ರಾದರೂ ಪ್ರತ್ಯೇಕವಾಗಿ ಅವರ ವಿಚಾರಣೆ ನಡೆಸಲಾಯಿತು. ಆ.2ರಿಂದ 5ರವರೆಗೆ ನಡೆದ ದಾಳಿ ವೇಳೆ ಸಚಿವ ಶಿವಕುಮಾರ್ ಸಹೋದರ ಸುರೇಶ್, ಆಪ್ತ ಜ್ಯೋತಿಷಿ ದ್ವಾರಕಾ ನಾಥ್, ಮಾವ ತಮ್ಮಯ್ಯ, ಧವನಂ ಜ್ಯುವೆಲ್ಲರ್ಸ್, ಶರ್ಮಾ ಟ್ರಾವೆಲ್ಸ್, ಉದ್ಯಮಿ ಸಚಿನ್ ನಾರಾಯಣ್ ಸೇರಿದಂತೆ ಡಿಕೆಶಿ ಅವರ ಜತೆ ವ್ಯವಾಹಾರಿಕ ಸಂಬಂಧ ಇವರುವವರಿಗೆ ಸಮನ್ಸ್ ನೀಡಲಾಗಿತ್ತು. ಸುಮಾರು 300 ಕೋಟಿ ರೂ. ಅಘೋಷಿತ ಆಸ್ತಿ ದಾಖಲೆ, ಚಿನ್ನಾಭರಣಗಳು ದಾಳಿ ವೇಳೆ ಪತ್ತೆಯಾಗಿತ್ತು. ಈ ಪೈಕಿ 100 ಕೋಟಿ ಮೊತ್ತ ಆಸ್ತಿ ಶಿವಕುಮಾರ್ ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿದೆ ಎಂದು ಹೇಳಲಾಗಿತ್ತು.
ಸಮನ್ಸ್ ಹಿನ್ನೆಲೆಯಿಂದಾಗಿ ಸೋಮವಾರ ಮಧ್ಯಾಹ್ನ 11.30ರ ಸುಮಾರಿಗೆ ಕ್ವೀನ್ಸ್ ರಸ್ತೆಯಲ್ಲಿರುವ ಐಟಿ ಕಚೇರಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್, ಸಹೋದರ ಡಿ.ಕೆ.ಸುರೇಶ್ ನೇರವಾಗಿ ಆದಾಯ ತೆರಿಗೆ ಇಲಾಖೆಯ 4ನೇ ಮಹಡಿಯ ತನಿಖಾ ವಿಭಾಗಕ್ಕೆ ತೆರಳಿದರು. ನಂತರ 10 ನಿಮಿಷಗಳ
ಅಂತರದಲ್ಲಿ ಆಪ್ತ ಜ್ಯೋತಿಷಿ ದ್ವಾರಕಾನಾಥ್, ವಿಧಾನಪರಿಷತ್ ಸದಸ್ಯ ರವಿ ಆಗಮಿಸಿ ಅವರೂ ಕೂಡ ವಿಚಾರಣಾ ಕೊಠಡಿಗೆ ತೆರಳಿದರು. ಆದರೆ, ನಾಲ್ವರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಿದ ಅಧಿಕಾರಿಗಳು, ಮೊದಲೇ ಸಿದ್ದಪಡಿಸಿಕೊಂಡಿದ್ದ ನೂರಾರು ಪ್ರಶ್ನೆಗಳಿಗೆ ಖೀಕವಾಗಿಯೂ ಹಾಗೂ ಲಿಖೀತವಾಗಿಯೂ ಉತ್ತರ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ತನಿಖಾ ಕೊಠಡಿಗೆ ತೆರಳಿದ ಶಿವಕುಮಾರ್ 15 ನಿಮಿಷಗಳ ಬಳಿಕ ಆದಾಯ ತೆರಿಗೆ ಇಲಾಖೆ ತನಿಖಾ ವಿಭಾಗದ ಮಹಾನಿರ್ದೇಶಕ ಬಿ.ಆರ್.ಬಾಲಕೃಷ್ಣನ್ ಕೊಠಡಿಗೆ ತೆರಳಿದರು. ಅರ್ಧಗಂಟೆ ಕಾಲ ಡಿಜಿ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಶಿವಕುಮಾರ್, ಬಳಿಕ ಮತ್ತೆ ತನಿಖಾ
ವಿಭಾಗದ ಕೊಠಡಿಗೆ ತೆರಳಿ ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ಎದುರಿಸಿದರು. ಈ ಸಂದರ್ಭದಲ್ಲಿ ಶಿವಕುಮಾರ್ ಸೇರಿದಂತೆ ತಮ್ಮ ಆಪ್ತರ ಮನೆಗಳಲ್ಲಿ ಪತ್ತೆಯಾದ ದಾಖಲೆಗಳು ಹಾಗೂ ಮೌಲ್ಯಯುತ ವಸ್ತುಗಳನ್ನು ಅವರ ಸಮ್ಮುಖದಲ್ಲೇ ತೆರೆದು ವಿವರಣೆ ಪಡೆದುಕೊಂಡಿದ್ದು ಇದನ್ನು ಚಿತ್ರೀಕರಿಸಿಕೊಂಡಿದ್ದಾರೆ. ಮಧ್ಯಾಹ್ನ 3.30ರವರೆಗೆ ವಿಚಾರಣೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.
165ಕ್ಕೂ ಅಧಿಕ ಪ್ರಶ್ನೆಗಳಿಗೆ ಉತ್ತರ: ಶಿವಕುಮಾರ್ ಅವರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ ಐಟಿ ಅಧಿಕಾರಿಗಳು ಹಾಗೂ ತನಿಖಾ ವಿಭಾಗದ ಮುಖ್ಯಸ್ಥ ಬಾಲಕೃಷ್ಣನ್, ಸುಮಾರು 165ಕ್ಕೂ ಅಧಿಕ ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೊದಲೇ ಸಿದ್ದಪಡಿಸಿಕೊಂಡಿದ್ದ ಪ್ರಶ್ನೆಗಳಿಗೆ ಮೌಖೀಕ ಹಾಗೂ ಲಿಖೀತ ರೂಪದಲ್ಲಿ ಉತ್ತರ ನೀಡಿದ್ದಾರೆ. ಇನ್ನು ಕೆಲ ದಾಖಲೆಗಳ ಕುರಿತು ಮಾಹಿತಿ ಪಡೆಯಬೇಕಿದ್ದು, ಮುಂದಿನ ದಿನಗಳಲ್ಲಿ ವಿಚಾರಣೆ ಕರೆಯುವ ಸಾಧ್ಯತೆಯಿದೆ. ವಿಚಾರಣೆ ವೇಳೆ ಸಹೋದರರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಐಟಿ ಮೂಲಗಳು ತಿಳಿಸಿವೆ.
“ಜಸ್ಟ್ ವೇಟ್ ಆ್ಯಂಡ್‌ವಾಚ್’-ಡಿಕೆಶಿ
ವಿಚಾರಣೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಡಿ.ಕೆ.ಶಿವಕುಮಾರ್, ವಿಚಾರಣೆ ಸಂಬಂಧ ಸಮನ್ಸ್ ನೀಡಿದ್ದರು. ಅದಕ್ಕೆ ಬಂದಿದ್ದೇನೆ. ಈ ಹಿಂದೆಯೂ ಅನೇಕ ಬಾರಿ ಐಟಿ ವಿಚಾರಣೆ ಎದುರಿಸಿದ್ದೇನೆ. ಅಧಿಕಾರಿಗಳು ಗೌರವಯುತವಾಗಿ ನೋಡಿಕೊಂಡಿದ್ದಾರೆ. ಮತ್ತೂಮ್ಮೆ ಕರೆದರೂ ವಿಚಾರಣೆಗೆ ಬರುತ್ತೇನೆ. ಅವರು ಕೇಳಿದ್ದಕ್ಕೆಲ್ಲ ಉತ್ತರ ಕೊಟ್ಟಿದ್ದೇನೆ. ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿಲ್ಲ. ಅಗತ್ಯವಿದ್ದರೆ ಕರೆಯುತ್ತೇವೆ ಎಂದು ಹೇಳಿದ್ದಾರೆ. ಪಂಚನಾಮೆ ಕುರಿತು ನಮ್ಮ ಲೆಕ್ಕಪರಿಶೋಧರು ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿ ಮುಂದಿನ ಪ್ರಕ್ರಿಯೆ ನಡೆಸುತ್ತಾರೆ. ದಾಳಿ ರಾಜಕೀಯ ಪ್ರೇರಿತದ ಬಗ್ಗೆ ಏನೂ ಹೇಳಲ್ಲ. ಜಸ್ಟ್ ವೇಟ್ ಆ್ಯಂಡ್ ವಾಚ್ ಎಂದಷ್ಟೇ ಪ್ರತಿಕ್ರಿಯೆ ನೀಡಿದರು.
70 ಕೋಟಿ ಸಾಲ?
ಸಚಿವ ಶಿವಕುಮಾರ್ ಅವರು ತಮ್ಮ ಸಂಬಂಧಿಕರು ಹಾಗೂ ಕೆಲ ಖಾಸಗಿ ಸಂಸ್ಥೆಗಳ ಮಾಲೀಕರಿಂದ ಸುಮಾರು 70 ಕೋಟಿಗೂ ಅಧಿಕ ಸಾಲ ಪಡೆದುಕೊಂಡಿದ್ದಾರೆ ಎಂದು ಐಟಿ ಮೂಲಗಳಿಂದ ತಿಳಿದು ಬಂದಿದೆ. ವಿಚಾರಣೆ ವೇಳೆ ತಾವು ಮಾಡಿಕೊಂಡಿರುವ ಸಾಲದ ಬಗ್ಗೆಯೂ ಪ್ರಸ್ತಾಪ ಮಾಡಿರುವ ಶಿವಕುಮಾರ್, ಈ ಹಿಂದೆ ತುರ್ತು ಸಂದರ್ಭದಲ್ಲಿ ತಮ್ಮ ಆಪ್ತ ಸಂಬಂಧಿಕರು ಹಾಗೂ ಖಾಸಗಿ ಸಂಸ್ಥೆಗಳಿಂದ 70 ಕೋಟಿ ರೂ. ಅಧಿಕ ಹಣ ಸಾಲ ಪಡೆಕೊಂಡಿದ್ದೇನೆ ಎಂದು ವಿವರಣೆ ನೀಡಿರುವುದಾಗಿ ಐಟಿ ಮೂಲಗಳು ತಿಳಿಸಿವೆ.
ಶಿವಕುಮಾರ್ ಬ್ಯಾಕ್ ಟು ವಿಧಾನಸೌಧ
ಬೆಂಗಳೂರು: ಆದಾಯ ತೆರಿಗೆ ಇಲಾಖೆ ದಾಳಿಯಿಂದ ಒತ್ತಡಕ್ಕೊಳಗಾಗಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸೋಮವಾರ ಎಂದಿನಂತೆ ಕೆಲಸ ಕಾರ್ಯದಲ್ಲಿ ತೊಡಗಿಕೊಂಡರು. ಸಮನ್ಸ್ ಹಿನ್ನೆಲೆಯಲ್ಲಿ ಐಟಿ ಇಲಾಖೆ ಅಧಿಕಾರಿ ಗಳ ಮುಂದೆ ಹಾಜರಾಗಿ ವಿಚಾರಣೆ ಮುಗಿದ ನಂತರ ಇಡೀ ದಿನ ಇಲಾಖೆಯ ಪ್ರಗತಿ ಪರಿಶೀಲನೆ ಕಾರ್ಯ ನಡೆಸಿದರು. ಬೆಳಗ್ಗೆಯೇ ಸದಾಶಿವನಗರ ನಿವಾಸ “ಕೆಂಕೇರಿ’ಯಲ್ಲಿ ಇಂಧನ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು ನಂತರ ಐಟಿ ಇಲಾಖೆ ಕಚೇರಿಗೆ ಹೋಗಿ ಮತ್ತೆ ಸಂಪುಟ ಸಭೆಗೆ ಹಾಜರಾದರು. ನಂತರ ವಿಧಾನಸೌಧದ ತಮ್ಮ ಕಚೇರಿಗೂ ಭೇಟಿ ನೀಡಿ ಕಡತ ಪರಿಶೀಲನೆ ನಡೆಸಿ ಅಧಿಕಾರಿಗಳ ಜತೆ ಸಭೆ ನಡೆಸಿದರು. ನಂತರ ತಮ್ಮ ನಿವಾಸದಲ್ಲಿ ಸ್ವ ಕ್ಷೇತ್ರದಿಂದ ಬಂದಿದ್ದ ಪಕ್ಷದ ಕಾರ್ಯಕರ್ತರು, ಮುಖಂಡರ ಜತೆ ಸಮಾಲೋಚನೆ ನಡೆಸಿದರು.
ಡಿಕೆಶಿಗೆ ಕೇಳಿದ ಪ್ರಮುಖ ಪ್ರಶ್ನೆಗಳು
- 2008-2016ರವರೆಗಿನ ಐಟಿ ರಿರ್ಟನ್ಸ್‌ನಲ್ಲಿರುವ ಆದಾಯ ತೆರಿಗೆ ಎಷ್ಟು?
- 2013-2016ರ ಅವಧಿಯಲ್ಲಿ ಆಸ್ತಿಯ ಮೊತ್ತ ಏರಿಕೆಯಾದ ಮೂಲ ಯಾವುದು?
- 2016-17ನೇ ಸಾಲಿನಲ್ಲಿ ಎಷ್ಟು ಮೊತ್ತದ ಆದಾಯ ತೆರಿಗೆ ಪಾವತಿಸಿದ್ದೀರಾ?
- ನಿಮ್ಮ ಒಡೆತನದ ಯಾವ ಕಂಪನಿಯಿಂದ ಹೆಚ್ಚು ಆದಾಯ ಬರುತ್ತಿದೆ?
- ಪ್ರತೀ ವರ್ಷದ ನಿವ್ವಳ ಆಸ್ತಿ ಹೆಚ್ಚಳ ಬಗ್ಗೆ ಐಟಿ ಗಮನಕ್ಕೆ ತಂದಿದ್ದೀರಾ?
- ನಿಮ್ಮ ಪತ್ನಿಯ ಹೆಸರಿನಲ್ಲಿರುವ ಷೇರು ಪ್ರಮಾಣ ಎಷ್ಟಿದೆ?
- ಬಿಸ್ಕೆಟ್ ಕಂಪನಿಯಲ್ಲಿ ನಿಮ್ಮ ಪತ್ನಿ ಹೂಡಿರುವ ಹಣ ಯಾರದ್ದು?
- ನಿಮ್ಮ ಪತ್ನಿಯ ಸಾಲದ ಮರುಪಾವತಿಯ ಮೂಲ ಯಾವುದು?
- ನಿಮ್ಮ ಮೂವರು ಮಕ್ಕಳ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳು ಎಷ್ಟು?
- ನಿಮ್ಮ ಹಾಗೂ ಸಂಬಂಧಿಕರ ಖಾತೆಗಳು ಎಷ್ಟು? ಚಾಲ್ತಿ ಖಾತೆಯಲ್ಲಿ ಎಷ್ಟು ಹಣವಿದೆ?
- ಶೋಭಾ ಡೆವೆಲಪರ್ಸ್ ಕಂಪನಿಯಲ್ಲಿ ಹೂಡಿರುವ ಹಣದ ಮೂಲ?
- ಶೋಭಾ ಡೆವೆಲಪರ್ಸ್ ಹೂಡಿಕೆ ಹಣವನ್ನು ನಿಮ್ಮ ಆದಾಯದಲ್ಲಿ ತೋರಿಸಿದ್ದೀರಾ?
- ನೀವು ಶಾಸಕ, ಸಚಿವನಾಗಿ ಪಡೆಯುತ್ತಿರುವ ಸಂಬಳದ ವಿವರ?
- ನಿಮ್ಮ ಹೆಸರಿನಲ್ಲಿರುವ ಶಿಕ್ಷಣ ಸಂಸ್ಥೆಗಳ ವಾರ್ಷಿಕ ವರಮಾನ ಎಷ್ಟು?
- ಡೊನೇಷನ್ ರೂಪದಲ್ಲಿ ಬಂದ ಹಣವನ್ನು ಸಿಬ್ಬಂದಿ ಪಡೆಯುತ್ತಿದ್ದಾರಾ?
- ನಿಮ್ಮ ಶಿಕ್ಷಣ ಸಂಸ್ಥೆಗಳಿಂದ ಸರ್ಕಾರಕ್ಕೆ ಎಷ್ಟು ತೆರಿಗೆ ಪಾವತಿಸುತ್ತಿರಾ?
- ಹೆಚ್ಚುವರಿ 300 ಕೋಟಿ ಆಸ್ತಿ ಬಗ್ಗೆ ಯಾಕೆ ಘೋಷಿಸಿಕೊಂಡಿಲ್ಲ?
- ಸಚಿನ್ ನಾರಾಯಣ್ ಜತೆ ಯಾವ ಉದ್ಯಮಕ್ಕೆ ಹಣ ಹೂಡಿಕೆ ಮಾಡಿದ್ದೀರಿ?
- ಶರ್ಮಾ ಟ್ರಾವೆಲ್ಸ್‌ನಲ್ಲಿ ನಿಮ್ಮ ಭಾಗದ ಷೇರು ಎಷ್ಟೇದೆ?
ಐಟಿ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗೆ ಸಮರ್ಪಕವಾದ ಉತ್ತರ ಕೊಟ್ಟಿದ್ದೇನೆ. ಅವರ ವಿಚಾರಣೆಗೆ ಸಹಕಾರ ಕೊಟ್ಟಿದ್ದೇನೆ. ಮತ್ತೆ ನನ್ನನು ವಿಚಾರಣೆಗೆ ಕರೆಸುವ ಸಾಧ್ಯತೆ ಕಮ್ಮಿ ಎಂದು ಭಾವಿಸಿದ್ದೇನೆ. ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗುತ್ತೇನೆ.
ದ್ವಾರಕಾನಾಥ್ , ಜ್ಯೋತಿಷಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.