ದರ್ಶನ್ ಹಲ್ಲೆಮಾಡಿಲ್ಲ, ಬೈದಿದ್ದಷ್ಟೇ: ಸಂದೇಶ್
ದರ್ಶನ್ ಮತ್ತು ಸ್ನೇಹಿತರ ಗಲಾಟೆ ಸಂಬಂಧ‘ ತನಿಖೆಗೆ ಗೃಹ ಇಲಾಖೆ ಸೂಚನೆ
Team Udayavani, Jul 15, 2021, 6:22 PM IST
ಮೈಸೂರು : ನಟ ದರ್ಶನ್ ಮತ್ತು ಅವರ 20 ಮಂದಿ ಸ್ನೇಹಿತರು ಲಾಕ್ಡೌನ್ಗೂ ಮೊದಲು ತಮ್ಮ ಹೋಟೆಲ್ಗೆ ಬಂದಿದ್ದಾಗ, ಸಪ್ಲೈ ವೇಳೆ ಸಮಸ್ಯೆಯಾಗಿ ಸಣ್ಣ ಗಲಾಟೆಯಾಗಿದ್ದು ನಿಜ. ದರ್ಶನ್ ಅವರು ನಮ್ಮ ಸಿಬ್ಬಂದಿಗೆ ಬೈದಿದ್ದು, ಬಿಟ್ಟರೆ ಹಲ್ಲೆ ಮಾಡಿಲ್ಲ ಎಂದು ಸಂದೇಶ್ ಪ್ರಿನ್ಸ್ ಹೋಟೆಲ್ ಮಾಲೀಕ ಸಂದೇಶ್ ನಾಗರಾಜ್ ಅವರ ಪುತ್ರ ಸಂದೇಶ್ ಸ್ಪಷ್ಟನೆ ನೀಡಿದ್ದಾರೆ.
ದರ್ಶನ್ ವಿರುದ್ಧ ಇಂದ್ರಜಿತ್ ಲಂಕೇಶ್ ಆರೋಪದ ಬಳಿಕ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅಂದು ಆಹಾರ ಸಪ್ಲೈ ಮಾಡುವ ವಿಚಾರದಲ್ಲಿ ನಟ ದರ್ಶನ್ ಮತ್ತು ಮಹಾರಾಷ್ಟ್ರ ಮೂಲದ ಸಪ್ಲೈಯರ್ ನಡುವೆ ಸಣ್ಣ ಗಲಾಟೆಯಾಯಿತು, ದರ್ಶನ್ ಅವರು ಬೈದಿದ್ದು ಹೌದು, ಆದರೆ ಕಾರ್ಮಿಕನ ಮೇಲೆ ಹಲ್ಲೆ ಮಾಡಿಲ್ಲ, ಅದನ್ನು ಹೊರಗೆ ಹೇಳಿಕೊಂಡು ಬರುವಷ್ಟು ದೊಡ್ಡ ಗಲಾಟೆಯಾಗಿಲ್ಲ ಎಂದರು.
ಇದನ್ನೂ ಓದಿ : ಜರ್ಮನ್ ಬಹುಕೌಶಲ್ಯ ಅಭಿವೃದ್ದಿ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಸಚಿವಸಂಪುಟ ಅಸ್ತು : ಕಾರಜೋಳ
ಹೋಟೆಲ್ ನಲ್ಲಿ ರಾತ್ರಿ ವೇಳೆ ಗ್ರಾಹಕರು ಈ ರೀತಿ ಸ್ವಲ್ಪ ಜಾಸ್ತಿ ಕುಡಿದುಬಿಟ್ಟು ಗಲಾಟೆ ಮಾಡುವುದು ಸಾಮಾನ್ಯ, ದರ್ಶನ್ ಕುಡಿದಾಗ ಈ ರೀತಿ ಕೆಲವೊಂದು ಸಲ ಆಡುತ್ತಾರೆ. ಹಾಗೆಯೇ ಇದು ಆಗಿತ್ತು. ನಾವು ಶೂಟಿಂಗ್ನಲ್ಲೂ ಜಗಳ ಆಡುತ್ತೇವೆ. ನಾನು ತಪ್ಪು ಮಾಡಿದಾಗ ಅವನು ಹೇಳುತ್ತಾನೆ. ಫ್ರೆಂಡ್ಶಿಪ್ನಲ್ಲಿ ಇದೆಲ್ಲ ಸಹಜ. ಆದರೆ, ತೋಟದಲ್ಲಿ ನಡೆದಿರುವುದು ಗೊತ್ತಿಲ್ಲ ಎಂದರು.
ಪೊಲೀಸ್ ಆಯುಕ್ತರಿಗೆ ದೂರು: ನಟ ದರ್ಶನ್ ಹೋಟೆಲ್ನಲ್ಲಿ ನಡೆಸಿದ ಗಲಾಟೆ ಮತ್ತು ಹಲ್ಲೆ ಆರೋಪ ವಿಷಯ ಸಂಬಂಧ ವಕೀಲ ಅಮೃತೇಶ್, ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಇ-ಮೇಲ್ ಮೂಲಕ ದೂರು ನೀಡಿರುವ ಅವರು, ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸಬೇಕು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ದೂರನ್ನು ಗೃಹ ಸಚಿವರಿಗೂ ರವಾನಿಸಿದ್ದಾರೆ.
ಸರ್ಕಾರ ನಟ ದರ್ಶನ್ ಮತ್ತು ಸ್ನೇಹಿತರ ಗಲಾಟೆಯನ್ನು ತನಿಖೆ ನಡೆಸಿ, ಮಾಹಿತಿ ನೀಡುವಂತೆವ ಆದೇಶಿಸಿದೆ. ಈ ಸಂಬಂಧ ಗೃಹ ಇಲಾಖೆಯಿಂದ ಆದೇಶ ಪ್ರತಿ ಬಂದಿದೆ. ಸರ್ಕಾರದ ಆದೇಶದಂತೆ ತನಿಖೆಯನ್ನ ಕೈಗೆತ್ತಿಕೊಳ್ಳುತ್ತೇವೆ.
– ಡಾ.ಚಂದ್ರಗುಪ್ತ, ನಗರ ಪೊಲೀಸ್ ಆಯುಕ್ತ
ಇದನ್ನೂ ಓದಿ : ರಿಷಭ್ ಪಂತ್ ಮಾತ್ರವಲ್ಲದೆ ಟೀಂ ಇಂಡಿಯಾ ಸಹಾಯಕ ಸಿಬ್ಬಂದಿಗೂ ಕೋವಿಡ್ ಪಾಸಿಟಿವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.