ದಸರಾ ಆನೆಗಳ ಭಾರ ಹೊರುವ ತಾಲೀಮು ಆರಂಭ
Team Udayavani, Sep 7, 2019, 3:00 AM IST
ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಶುಕ್ರವಾರ ದಸರಾ ಆನೆಗಳ ಭಾರ ಹೊರುವ ತಾಲೀಮು ನಡೆಯಿತು. ಮೊದಲ ದಿನ ಅಂಬಾರಿ ಆನೆ ಅರ್ಜುನ 350 ಕೆ.ಜಿ.ಭಾರದ ಮರಳಿನ ಮೂಟೆ ಹೊರುವ ಮೂಲಕ ತಾಲೀಮು ನಡೆಸಿದ್ದು, ಅರ್ಜುನನ ಜೊತೆಗೆ ವಿಜಯ, ಅಭಿಮನ್ಯು, ವರಲಕ್ಷ್ಮೀ, ಧನಂಜಯ, ಈಶ್ವರ ಆನೆಗಳು ತಾಲೀಮು ನಡೆಸಿದವು.
ಅರಮನೆಯ ಆವರಣದಲ್ಲಿರುವ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ನಿವಾಸದ ಮುಂದೆ ಅಳವ ಡಿಸ ಲಾ ಗಿ ರುವ ಕ್ರೇನ್ ಮೂಲಕ ಅರ್ಜುನನ ಮೇಲೆ ಮರಳು ಮೂಟೆಯನ್ನು ಇಡಲಾಯಿತು. ಬೆಳಗ್ಗೆ 8ರ ವೇಳೆಗೆ ಅರಮನೆಯ ಆವರಣವನ್ನು ಬಿಟ್ಟ ಈ ಆನೆ ತಂಡ, ಸಯ್ನಾಜಿರಾವ್ ರಸ್ತೆ ಮೂಲಕ ಹೈವೇ ವೃತ್ತ, ಬನ್ನಿಮಂಟಪವನ್ನು 9.30ಕ್ಕೆ ತಲುಪಿತು. ಕೆಲಕಾಲ ಅಲ್ಲೇ ವಿಶ್ರಾಂತಿ ಪಡೆದು, ಪುನ: ಬೆ.11.30ರ ವೇಳೆಗೆ ಅರಮನೆ ಪ್ರವೇಶಿಸಿದವು.
ಅಂಬಾರಿ ಅಂದಾಜು 750 ಕೆ.ಜಿ.ತೂಕ ಇದೆ. ಅಷ್ಟು ಭಾರವನ್ನು ಹೊರುವುದಕ್ಕೆ ಆನೆಯನ್ನು ತಯಾರು ಮಾಡಬೇಕಿದೆ. ಹೈಕೋರ್ಟ್ ನಿರ್ದೇಶನದ ಪ್ರಕಾರ 60 ವರ್ಷ ತುಂಬಿದ ಆನೆಗೆ ಭಾರ ಹೊರಿಸುವಂತೆ ಇಲ್ಲ. ಈಗ ಅರ್ಜುನನಿಗೆ 59 ವರ್ಷ ಆಗಿದೆ. ಹೀಗಾಗಿ, ಮುಂದಿನ ವರ್ಷ ಅರ್ಜುನನ ಬದಲು ಮತ್ತೂಂದು ಆನೆ ಭಾರ ಹೊರಲಿದೆ ಎಂದು ಡಿಜಿಸಿಎಫ್ ಅಲೆಕ್ಸಾಂಡರ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.