31ಕ್ಕೆ ದಸರಾ ಗಜಪಡೆ 2ನೇ ತಂಡ ಅರಮನೆಗೆ
Team Udayavani, Aug 26, 2017, 4:37 PM IST
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲಿರುವ ಗಜಪಡೆಯ 2ನೇ ತಂಡ ಆ.31ರಂದು ಅರಮನೆ ಸೇರಲಿವೆ. ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವಿವಿಧ ಆನೆ ಕ್ಯಾಂಪ್‌ಗಳಿಂದ ಅಂದು ಬೆಳಗ್ಗೆ ಲಾರಿಗಳಲ್ಲಿ ಹೊರಡುವ 7 ಆನೆಗಳು ಮಧ್ಯಾಹ್ನದ ವೇಳೆಗೆ ಅರಮನೆಗೆ ತಲುಪಲಿವೆ. ದಸರಾ ಗಜಪಡೆ 2ನೇ ತಂಡದಲ್ಲಿ 2 ಹೊಸ ಆನೆಗಳಾದ ಮತ್ತಿಗೋಡು ಆನೆ ಶಿಬಿರದಲ್ಲಿರುವ ದ್ರೋಣ, ಕೃಷ್ಣ ಸೇರಿದಂತೆ ಗೋಪಾಲಸ್ವಾಮಿ, ದುಬಾರೆ ಆನೆ ಶಿಬಿರದಿಂದ ವಿಕ್ರಮ, ಗೋಪಿ, ಹರ್ಷ ಮತ್ತು ಪ್ರಶಾಂತ ಆನೆಗಳು ಆಗಮಿಸಲಿವೆ ಎಂದು ಡಿಸಿಎಫ್ ವಿ.ಏಡುಕೊಂಡಲು ತಿಳಿಸಿದರು. ಆನೆ ಶಿಬಿರಗಳಲ್ಲಿ ದಸರಾಗೆ ಬರುವ ಎಲ್ಲಾ ಆನೆಗಳಿಗೂ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಈಗಾಗಲೇ ಮೊದಲ
ತಂಡದಲ್ಲಿ ಆ.17ರಿಂದ ಅಂಬಾರಿ ಆನೆ ಅರ್ಜುನ, ಬಲರಾಮ, ಅಭಿಮನ್ಯು, ಗಜೇಂದ್ರ, ಭೀಮ, ಕಾವೇರಿ, ವಿಜಯ, ವರಲಕ್ಷ್ಮೀ ಆನೆಗಳು ಅರಮನೆ ಆವರಣದಲ್ಲಿ ಬೀಡುಬಿಟ್ಟು, ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ
ಜಂಬೂಸವಾರಿ ಮೆರವಣಿಗೆ ತಾಲೀಮಿನಲ್ಲಿ ತೊಡಗಿವೆ. ಸೆ.30ರಂದು ಜಂಬೂಸವಾರಿ ಮೆರವಣಿಗೆ ನಡೆಯುವುದರಿಂದ 2ನೇ ಹಂತದ ಆನೆಗಳು ಸೆ.1ರಿಂದಲೇ ಜಂಬೂಸವಾರಿ ಮೆರವಣಿಗೆ ತಾಲೀಮಿನಲ್ಲಿ ಪಾಲ್ಗೊಳ್ಳಲಿವೆ ಎಂದು ಮಾಹಿತಿ ನೀಡಿದರು. 2ನೇ ಹಂತದಲ್ಲಿ ಆಗಮಿಸಲಿರುವ 7 ಆನೆಗಳಿಗೆ ಹಾಗೂ ಅವುಗಳ ಮಾವುತರು ಮತ್ತು ಕಾವಾಡಿಗರ ಕುಟುಂಬ ಸದಸ್ಯರ ವಾಸ್ತವ್ಯಕ್ಕಾಗಿ ತಾತ್ಕಾಲಿಕ ಶೆಡ್ ನಿರ್ಮಾಣ ಕಾರ್ಯ ನಡೆದಿದೆ. ಅರಮನೆ ಆವರಣದಲ್ಲಿರುವ ಶ್ರೀಭುವನೇಶ್ವರಿ ದೇವಾಲಯದ ಸಮೀಪ ಶೆಡ್ ನಿರ್ಮಿಸಲಾಗುತ್ತಿದೆ. ಮೈಸೂರು: ಗೌರಿ-ಗಣೇಶ ಹಬ್ಬದ ಪ್ರಯುಕ್ತ ದಸರಾ ಗಜಪಡೆ ಮಾವುತರು ಮತ್ತು ಕಾವಾಡಿಗರ ಕುಟುಂಬದವರಿಗೆ ನಗರದ ಎಸ್‌ಎಂಪಿ ಫೌಂಡೇಷನ್ ವತಿಯಿಂದ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.ನಗರದ ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡಿರುವ ಗಿರಿಜನ ಕುಟುಂಬದ ಪುರುಷರಿಗೆ ವಸ್ತ್ರ, ಮಹಿಳೆಯರಿಗೆ ಸೀರೆ, ಮಕ್ಕಳಿಗೆ ಶಾಲಾ ಬ್ಯಾಗ್ ಹಾಗೂ ನೋಟ್‌ಪುಸ್ತಕ ವಿತರಿಸಲಾಯಿತು. ಎಸ್ ಎಂಪಿ ಫೌಂಡೇಷನ್ ಅಧ್ಯಕ್ಷ ಎಸ್.ಎಂ.ಶಿವಪ್ರಕಾಶ್ ಮಾತನಾಡಿ, ಸಂಸ್ಥೆಯು ಹಲವು ಸಮಾಜಮುಖೀ ಕಾರ್ಯಕ್ರಮಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಅದರ ಅಂಗವಾಗಿ ದಸರಾ ಗಜಪಡೆ ಮಾವುತರು, ಕಾವಾಡಿಗರ ಕುಟುಂಬಕ್ಕೆ ಸವಲತ್ತುಗಳನ್ನು ವಿತರಿಸಲಾಗಿದೆ ಎಂದರು. ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು, ದಸರಾ ಉತ್ಸವ ಯಶಸ್ವಿಯಾಗಲು ಆನೆ ಮಾವುತರು, ಕಾವಾಡಿಗರ ಪರಿಶ್ರಮ ಅಪಾರ. ಅವರ ಸೇವೆಯನ್ನು ಪರಿಗಣಿಸಿ ಎಸ್‌ಎಂಪಿ ಸಂಸ್ಥೆ ವಿವಿಧ ಸವಲತ್ತುಗಳನ್ನು ನೀಡಿರುವುದು ಶ್ಲಾಘನೀಯ. ಇಂತಹ ಸಮಾಜಮುಖೀ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುವ ಅವಶ್ಯಕತೆ ಇದೆ ಎಂದರು. ಆರ್‌ಎಫ್ಒ ದೇವರಾಜ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.